ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋರಮಂಗಲದಿಂದ ಈಜಿಪುರದವರೆಗೆ ಎಲಿವೇಟೆಡ್ ಕಾರಿಡಾರ್

ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಬೆಂಗಳೂರಿನ ಕೋರಮಂಗಲದಿಂದ ಈಜಿಪುರ ಜಂಕ್ಷನ್ ವರೆಗೆ ಎಲಿವೇಟೆಡೆ ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿ ಆಲೋಚನೆ ಮಾಡಿದೆ. ಇದಕ್ಕಾಗಿ ಟೆಂಡರ್ ಕೂಡ ಕರೆಯಲಾಗಿದೆ.

|
Google Oneindia Kannada News

ಬೆಂಗಳೂರು, ಮಾರ್ಚ್ 28: ಕೋರಮಂಗಲದಿಂದ ಈಜಿಪುರದವರೆಗೆ ಹೋಗುವಾಗ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಳ್ಳದವರು ಯಾರಾದರೂ ಇದ್ದೀರಾ ಎಂಬ ಪ್ರಶ್ನೆ ಮುಂದಿಟ್ಟರೆ, ಆ ರಸ್ತೆಯಲ್ಲಿ ಸಂಚರಿಸುವ ಯಾರೊಬ್ಬರು ಇಲ್ಲ ಎಂಬ ಉತ್ತರ ಕೊಡಲಾರರೇನೋ! ಸೋನಿ ವರ್ಲ್ಡ್ ಜಣ್ಕ್ಷನ್ ನ ಹತ್ತಿರ ತಗಲ್ಹಾಕಿಕೊಂಡರೆ ಅಲ್ಲಿಂದ ಮುಂದೆ ಸಾಗುವುದರೊಳಗೆ ಒಂದು ಗಂಟೆ ಸಮಯ ಕಳೆದುಹೋಗಿ ಬಿಡುತ್ತೆ.

ಈ ಮಾರ್ಗದಲ್ಲಿ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬಿಬಿಎಂಪಿ ಒಂದು ಆಲೋಚನೆ ಮಾಡಿದೆ. ಕೋರಮಂಗಲ ಹಾಗೂ ಈಜಿಪುರ ಜಂಕ್ಷನ್ ಮಧ್ಯೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನಿಸಿದೆ. ಈ ಯೋಜನೆಯನ್ನು 2014ರಲ್ಲೇ ಪ್ರಸ್ತಾಪಿಸಲಾಗಿದೆ. 2.4 ಕಿಮೀ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕೂಡ ಕರೆಯಲಾಗಿದೆ.[ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ]

BBMP plans elevated corridor in Koramangala to ease traffic jams

ಎಲೆವ್ಟೆಡ್ ಕಾರಿಡಾರ್ ಕೋರಮಂಗಲ ಎರಡನೇ ಬ್ಲಾಕ್ ನ ಕೇಂದ್ರೀಯ ಸದನ ಹಾಗೂ ಈಜಿಪುರ ಜಂಕ್ಷನ್ ಮಧ್ಯೆ ನಿರ್ಮಾಣವಾಗುತ್ತದೆ. 5.5 ಮೀಟರ್ ಎತ್ತರದಲ್ಲಿ ಮೇಲ್ಸೇತುವೆ ನಿರ್ಮಾಣವಾಗುತ್ತದೆ. ಇಅದರಿಂದ ಈಜಿಪುರದಿಂದ ಹೊಸೂರಿಗೆ ತೆರಳುವ ಕಾಲಾವಧಿ ಈಗಿನ ಸಮಯಕ್ಕಿಂತ ಅರ್ಧದಷ್ಟು ಕಡಿಮೆ ಆಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳುತ್ತಾರೆ.

ಸದ್ಯಕ್ಕೆ ಈಜಿಪುರದಿಂದ ಹೊಸೂರಿಗೆ 45-50 ನಿಮಿಷ ಆಗುತ್ತದೆ. ಕೆಲವು ಸಲವಂತೂ ಒಂದು ಗಂಟೆಗೂ ಹೆಚ್ಚಾಗುತ್ತದೆ. ಸೋನಿ ಸಿಗ್ನಲ್, ಒಳ ವರ್ತುಲ ರಸ್ತೆ, ದೊಮ್ಮಲೂರು ಮೇಲ್ಸೇತುವೆ ಕಡೆಗೆ ಹಾಗೂ ಇಂಡಿರಾನಗರದ ಕಡೆಗಿನ ದಟ್ಟಣೆ ಮೇಲ್ಸೇತುವೆ ನಿರ್ಮಾಣದಿಂದ ಕಡಿಮೆ ಆಗುತ್ತದೆ ಎಂದು ಮಂಜುನಾಥ್ ಪ್ರಸಾದ್ ಹೇಳುತ್ತಾರೆ.[ಯು ಟರ್ನ್ ಸಿನಿಮಾದ ಫ್ಲೈಓವರ್‌ಗೆ ದುರಸ್ತಿ ಭಾಗ್ಯ]

ಈ ಯೋಜನೆ ಅಂದಾಜು ವೆಚ್ಚ 200 ಕೋಟಿ ಎಂದುಕೊಳ್ಳಲಾಗಿದೆ. ಇದಕ್ಕಾಗಿ ಪಾಲಿಕೆ 30 ತಿಂಗಳ ಗಡುವು ಹಾಕಿಕೊಂಡಿದೆ. ಈ ಯೋಜನೆಗೆ ತಿಂಗಳ ಹಿಂದೆಯೇ ರಾಜ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ.

English summary
The traffic from Koramangala to Ejipura is unbearable even during non-peak hours. In a bid to ease the jams in this route, the BBMP has floated an idea of constructing an elevated corridor between Koramangala and Ejipura junction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X