ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಕಚೇರಿಗೆ ಶೇಷಾದ್ರಿಪುರಂನಲ್ಲಿ 2 ಎಕರೆ ಜಾಗ

|
Google Oneindia Kannada News

ಬೆಂಗಳೂರು, ಫೆ. 27 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜೆಡಿಎಸ್ ಕಚೇರಿಗಾಗಿ 2 ಎಕರೆ ಜಾಗ ನೀಡಲು ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಹಿಂದೆ ಪಾಲಿಕೆ ಕಚೇರಿಗಾಗಿ ನೀಡಿದ್ದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

ಶುಕ್ರವಾರ ನಡೆದ ಬಿಬಿಎಂಪಿಯ ಕೌನ್ಸಿಲ್ ಸಭೆಯಲ್ಲಿ ಜೆಡಿಎಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಜಾಗ ನೀಡಲು ಒಪ್ಪಿಗೆ ನೀಡಲಾಗಿದೆ. ಶೇಷಾದ್ರಿಪುರಂನಲ್ಲಿ 2 ಎಕರೆ ಜಾಗವನ್ನು ಪಾಲಿಕೆ ಜೆಡಿಎಸ್‌ ಪಕ್ಷಕ್ಕಾಗಿ 5 ವರ್ಷಗಳ ಅವಧಿಗೆ ನೀಡಲಿದೆ.[ಬೆಂಗಳೂರಿನ ಜೆಡಿಎಸ್ ಕಚೇರಿ ವಿವಾದವೇನು?]

JDS

ಶೇಷಾದ್ರಿಪುರಂನಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ಮುಂಭಾಗದಲ್ಲಿರುವ ಕೃಷ್ಣಾ ಪ್ಲೋರ್ ಮಿಲ್‌ನ 2 ಎಕರೆ ಜಾಗವನ್ನು ಕಚೇರಿ ನಿರ್ಮಾಣಕ್ಕಾಗಿ ಬಿಬಿಎಂಪಿ ನೀಡಲಿದೆ. ಕಚೇರಿ ನಿರ್ಮಾಣಕ್ಕಾಗಿ ಜೆಡಿಎಸ್ ಹಲವು ದಿನಗಳಿಂದ ಸ್ಥಳಕ್ಕಾಗಿ ಹುಡುಕಾಟ ನೆಡೆಸಿತ್ತು. [ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ಬೀಗ ನೀಡಿದ ದೇವೆಗೌಡರು]

ತಡೆಯಾಜ್ಞೆ ನೀಡಲಾಗಿದೆ : ಹಿಂದೆ ಬಿಬಿಎಂಪಿ ವೈಯಾಲಿಕಾವಲ್‌ ಸರ್ವೆ ಸಂಖ್ಯೆ 1 ಹಾಗೂ 4 ರಲ್ಲಿರುವ 1.1 ಎಕರೆ ಜಮೀನನ್ನು ಜೆಡಿಎಸ್‌ ಕಚೇರಿಗೆ 30 ವರ್ಷಗಳ ಅವಧಿಗೆ ಮಂಜೂರು ಮಾಡುವ ನಿರ್ಣಯವನ್ನು ಕೈಗೊಂಡಿತ್ತು. ಆದರೆ, ಉದ್ದೇಶಿತ ಜಾಗದ ವಾರಸುದಾರ ಎನ್ನಲಾದ ಕೆ.ಜಿ.ಚಂದ್ರಶೇಖರ್‌ ಭಟ್‌ ಅವರು ಹೈಕೋರ್ಟ್‌ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಉದ್ದೇಶಿತ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಈ ಕುರಿತು ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದ್ದರಿಂದ, ಪಾಲಿಕೆ ಜೆಡಿಎಸ್ ಕಚೇರಿಗೆ ಬೇರೆ ಜಾಗವನ್ನು ನೀಡಿದೆ.

ಜೆಡಿಎಸ್ ಕಚೇರಿ ಕಾಂಗ್ರೆಸ್ ಪಾಲು : ಸುಪ್ರೀಂಕೋರ್ಟ್ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂದು ಆದೇಶ ನೀಡಿತ್ತು. ಈ ಆದೇಶದಂತೆ ಜೆಡಿಎಸ್‌ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

English summary
The Bruhat Bengaluru Mahanagara Palike (BBMP) on Friday passed a resolution to allocate 2 acres land to Janata Dal (Secular) office building in Seshadripuram, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X