ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಚುನಾವಣೆ ಸೆ.28ಕ್ಕೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಮುಂದೂಡಲಾಗಿದೆ. ಸೆ.28ರಂದು 269 ಸದಸ್ಯರು ಮತದಾನದ ಮೂಲಕ ನೂತನ ಮೇಯರ್ ಆಯ್ಕೆ ಮಾಡಲಿದ್ದಾರೆ.

ಮೊದಲು ಸೆ.19ರಂದು ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಿಗದಿಯಾಗಿತ್ತು. ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು ಚುನಾವಣೆಯನ್ನು ಒಂದು ವಾರಗಳ ಕಾಲ ಮುಂದೂಡಿದ್ದು, ಸೆ.28ರಂದು ಚುನಾವಣೆ ನಡೆಯಲಿದೆ. ಚುನಾವಣೆಯನ್ನು ಮುಂದೂಡಿರುವ ಪರಿಷ್ಕೃತ ವೇಳಾಪಟ್ಟಿ ಇಂದು ಪ್ರಕಟಗೊಳ್ಳಲಿದೆ.[ಬಿಬಿಎಂಪಿ ಮೈತ್ರಿ : ಅಡ್ಡಗೋಡೆ ಮೇಲೆ ದೀಪವಿಟ್ಟ ಕುಮಾರಸ್ವಾಮಿ]

bbmp

269 ಮತದಾರರು : ಈ ಬಾರಿಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ 269 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಮೇಯರ್ ಪಟ್ಟಕ್ಕೆ ಏರಲು ಮ್ಯಾಜಿಕ್ ನಂಬರ್ 135. ಬಿಜೆಪಿ 127 ಸದಸ್ಯ ಬಲ ಹೊಂದಿದೆ (ಶಾಸಕರು, ಸಂಸದರು ಸೇರಿ).[ಬಿಎಸ್ ವೈ ಬಿಬಿಎಂಪಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿಲ್ಲ]

ಒಂದು ವೇಳೆ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿದರೆ ಮೇಯರ್ ಪಟ್ಟ ಸುಲಭವಾಗಿ ಸಿಗಲಿದೆ. ಜೆಡಿಎಸ್‌ ಜೊತೆಗಿನ ಮೈತ್ರಿ ಬಗ್ಗೆ ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ಆದರೆ, ಯಾವ ಮಾತುಕತೆಗಳೂ ಅಂತಿಮವಾಗಿಲ್ಲ.

ಕಾಂಗ್ರೆಸ್‌ ಮತ್ತೆ ಅಧಿಕಾರ ಪಡೆಯಲು ಜೆಡಿಎಸ್‌ ಪಕ್ಷದ ಬೆಂಬಲದ ಜೊತೆ ಪಕ್ಷೇತರ ಸದಸ್ಯರ ಬೆಂಬಲವೂ ಅಗತ್ಯ. ಹಿಂದುಳಿದ ವರ್ಗ 'ಬಿ' ಮಹಿಳೆಗೆ ಮೇಯರ್‌ ಸ್ಥಾನ ಮೀಸಲಾಗಿದೆ.

English summary
Elections to the post of Mayor and Deputy Mayor will be held on September 28. revised calendar of events had been prepared. A notification in this regard will be issued on Thursday. Earlier, the election was scheduled for September 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X