ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯ ಮೇಯರ್ ಹುದ್ದೆ ಮ್ಯಾಜಿಕ್ ನಂಬರ್ 131

|
Google Oneindia Kannada News

ಬೆಂಗಳೂರು, ಸೆ. 01 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಪಟ್ಟಕ್ಕಾಗಿ ನಂಬರ್ ಗೇಮ್ ಆರಂಭವಾಗಿದೆ. ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವ ಪಾಲಿಕೇತರ ಸದಸ್ಯರ ಪಟ್ಟಿ ಸಿದ್ಧಗೊಂಡಿದೆ. ಈಗ ಮೇಯರ್ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 131.

ಬಿಬಿಎಂಪಿ ಮೇಯರ್ ಪಟ್ಟಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಲೆಕ್ಕಾಚಾರಗಳನ್ನು ಹಾಕುತ್ತಿದೆ. ಬಿಬಿಎಂಪಿ ಚುನಾವಣೆಯಲ್ಲಿ 100 ಸ್ಥಾನಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಬಹುಮತಕ್ಕೆ ಕೆಲವು ಸದಸ್ಯರ ಕೊರತೆ ಎದುರಾಗಿದೆ. [ಕಾಂಗ್ರೆಸ್ ಜೊತೆ ಕೈ ಜೋಡಿಸಲು ಸಿದ್ಧ : ಎಚ್ಡಿಕೆ]

ಎಲ್ಲಾ ಮಾತುಕತೆ, ಲೆಕ್ಕಾಚಾರಗಳಂತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸಿದ್ಧವಾದರೆ ಬಲಾಬಲ 132 ಆಗಲಿದೆ. ಚುನಾವಣೆಯಲ್ಲಿ 100 ಸ್ಥಾನಗಳಿಸಿರುವ ಬಿಜೆಪಿ ಬಲ 125 ಆಗಲಿದೆ. ಒಂದು ವೇಳೆ ದೋಸ್ತಿ ಆಡಳಿತ ರಚನೆಗೊಂಡರೆ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ.

ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಹಸಿರು ನಿಶಾನೆ ತೋರಿಸಿದ್ದಾರೆ. ಕಾಂಗ್ರೆಸ್ ಇಂದು ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಬಿಬಿಎಂಪಿ ಗದ್ದುಗೆ ಯಾರ ಮಡಿಲಿಗೆ ಎನ್ನುವುದು ಈಗ ಕುತೂಹಲ ಮೂಡಿಸಿದೆ. ನಂಬರ್ ಗೇಮ್ ಲೆಕ್ಕಾಚಾರ ಚಿತ್ರಗಳಲ್ಲಿ......

ಬಿಬಿಎಂಪಿ ಚುನಾವಣಾ ಫಲಿತಾಂಶ, ಮೇಯರ್ ಆಯ್ಕೆ

ಬಿಬಿಎಂಪಿ ಚುನಾವಣಾ ಫಲಿತಾಂಶ, ಮೇಯರ್ ಆಯ್ಕೆ

2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮೇಯರ್ ಆಯ್ಕೆ ಮಾಡಲು ಬೆಂಗಳೂರನ್ನು ಪ್ರತಿನಿಧಿಸುವ ಸಂಸದರು, ಶಾಸಕರು, ರಾಜ್ಯಸಭಾ ಸದಸ್ಯರು ಮತ್ತು ವಿಧಾನಪರಿಷತ್ ಸದಸ್ಯರು ಮತದಾನ ಮಾಡುತ್ತಾರೆ. ಆದ್ದರಿಂದ ಒಟ್ಟು ಮತದಾರರ ಸಂಖ್ಯೆ 260.

ಬಿಜೆಪಿಯ ಬಲಾಬಲ ಎಷ್ಟು?

ಬಿಜೆಪಿಯ ಬಲಾಬಲ ಎಷ್ಟು?

ಪಾಲಿಕೆ ಸದಸ್ಯರು - 100
ಸಂಸದರು - 3
ರಾಜ್ಯಸಭಾ ಸದಸ್ಯರು - 1
ಶಾಸಕರು - 12
ವಿಧಾನಪರಿಷತ್ ಸದಸ್ಯರು - 9
ಒಟ್ಟು - 125

ಕಾಂಗ್ರೆಸ್ ಬಲಾಬಲ ಎಷ್ಟು?

ಕಾಂಗ್ರೆಸ್ ಬಲಾಬಲ ಎಷ್ಟು?

ಬಿಬಿಎಂಪಿ ಸದಸ್ಯರು - 76
ಶಾಸಕರು - 13
ವಿಧಾನ ಪರಿಷತ್ ಸದಸ್ಯರು - 6
ಸಂಸದರು -2
ರಾಜ್ಯಸಭಾ ಸದಸ್ಯರು - 3
ಒಟ್ಟು - 100

ಜೆಡಿಎಸ್ ಪಕ್ಷದ ಬಲಾಬಲ ಎಷ್ಟು?

ಜೆಡಿಎಸ್ ಪಕ್ಷದ ಬಲಾಬಲ ಎಷ್ಟು?

ಬಿಬಿಎಂಪಿ ಸದಸ್ಯರು - 14
ಶಾಸಕರು - 3
ವಿಧಾಪರಿಷತ್ ಸದಸ್ಯರು - 3
ರಾಜ್ಯಸಭಾ ಸದಸ್ಯರು - 1
ಒಟ್ಟು - 22

ಮೈತ್ರಿಕೂಟದ ಲೆಕ್ಕಾಚಾರ

ಮೈತ್ರಿಕೂಟದ ಲೆಕ್ಕಾಚಾರ

* ಬಿಜೆಪಿ ಶಾಸಕರು, ಸಂಸದರು, ಪರಿಷತ್ ಸದಸ್ಯರು ಸೇರಿ 125 ಸದಸ್ಯ ಬಲ ಹೊಂದಿದೆ. ಹಲಸೂರು ವಾರ್ಡ್‌ನ ಪಕ್ಷೇತರ ಸದಸ್ಯೆ ಮಮತಾ ಶರವಣ ಅವರು ಬಿಜೆಪಿ ಸೇರಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬಿಜೆಪಿಗೆ ಬೆಂಬಲ ನೀಡಿದರೆ ಬಿಜೆಪಿ ಬಲ 127 ಆಗುತ್ತದೆ.

* ಕಾಂಗ್ರೆಸ್ 100 ಸ್ಥಾನಗಳನ್ನು ಹೊಂದಿದ್ದು (ಶಾಸಕರು, ಸಂಸದರು, ಪರಿಷತ್ ಸದಸ್ಯರು ಸೇರಿ), ಜೆಡಿಎಸ್ 22 ಸ್ಥಾನಗಳನ್ನು ಹೊಂದಿದೆ. 7 ಪಕ್ಷೇತರ ಬಿಬಿಎಂಪಿ ಸದಸ್ಯರು, 2 ಪಕ್ಷೇತರ ವಿಧಾನಪರಿಷತ್ ಸದಸ್ಯರು, ಒಬ್ಬರು ರಾಜ್ಯಸಭಾ ಸದಸ್ಯರು ಸೇರಿದರೆ 132

English summary
Now magic number for BBMP mayor post is 131 according to the list prepared by the council secretariat. 260 voters will vote for mayor selection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X