ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಲ್ಲಿ ಬಿಜೆಪಿ, ಯಾವ ಪತ್ರಿಕೆ ಶೀರ್ಷಿಕೆ ಚೆನ್ನಾಗಿದೆ?

|
Google Oneindia Kannada News

ಬೆಂಗಳೂರು, ಆ.26 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶತಕ ಬಾರಿಸಿದ ಬಿಜೆಪಿ ಮೇಯರ್ ಆಯ್ಕೆ ಲೆಕ್ಕಾಚಾರದಲ್ಲಿ ತೊಡಗಿದೆ. ಅತ್ತ ಕಾಂಗ್ರೆಸ್ ಸೋಲಿನ ಆತ್ಮಾವಲೋಕನಕ್ಕೆ ಮುಂದಾಗಿದೆ. ನೂತನ ಮೇಯರ್ ಆಯ್ಕೆಯಾಗುವ ತನಕ ಚುನಾವಣೆ ಫಲಿತಾಂಶದ ಬಗ್ಗೆಯೇ ಎಲ್ಲೆಡೆ ಚರ್ಚೆ ನಡೆಯುತ್ತದೆ.

ಮಂಗಳವಾರ ಟಿವಿಯಲ್ಲಿ ಫಲಿತಾಂಶವನ್ನು ನೋಡಿದರೂ ಇಂದು ಬೆಳಗ್ಗೆ ಜನರು ಪತ್ರಿಕೆ ಮೇಲೆ ಕಣ್ಣಾಡಿಸುತ್ತಿದ್ದಾರೆ. ಪಕ್ಷಗಳ ಸೋಲು-ಗೆಲುವಿನ ಬಗ್ಗೆ ತಮ್ಮದೇ ವಿಶ್ಲೇಷಣೆಗಳನ್ನು ನೀಡುತ್ತಿದ್ದಾರೆ. ಬಸ್, ಹೋಟೆಲ್, ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ ಚುನಾವಣೆ ಫಲಿತಾಂಶದ್ದೇ ಮಾತು. [ಬಿಜೆಪಿ ಗೆಲುವಿನ ರಹಸ್ಯವೇನು?]

ಬಿಬಿಎಂಪಿ ಚುನಾವಣೆ ಫಲಿತಾಂಶವನ್ನು ವಿವರವಾಗಿ ಪ್ರಕಟಿಸಿರುವ ಕನ್ನಡದ ದಿನ ಪತ್ರಿಕೆಗಳು ಹಲವಾರು ವಿಶ್ಲೇಷಣೆಗಳನ್ನು ನೀಡಿವೆ. ವಿವಿಧ ಪಟ್ಟಿ, ಸೋತ-ಗೆದ್ದ ಪ್ರಮುಖರ ವಿವರ, ಮುಂದಿನ ಬೆಳವಣಿಗೆಗಳ ಬಗ್ಗೆಯೂ ಹಲವಾರು ಮಾಹಿತಿಗಳನ್ನು ನೀಡಿವೆ. [ಕಾಂಗ್ರೆಸ್ ಸೋಲಿಗೆ 10 ಕಾರಣಗಳು]

ಫಲಿತಾಂಶದ ಬಗ್ಗೆ ಯಾವ ಪತ್ರಿಕೆ ಏನು ಹೆಡ್‌ಲೈನ್ ಕೊಟ್ಟಿದೆ? ಎಂಬ ವಿವರ ಚಿತ್ರಗಳಲ್ಲಿ ಲಭ್ಯವಿದೆ. ಹೊಸ ದಿಗಂತ ಪ್ರತಿಕೆ 'ಶತದಳ ಕಮಲ' ಎಂಬ ಹೆಡ್‌ಲೈನ್ ನೀಡಿದ್ದು, ಬಿಜೆಪಿಯ ಜಯವನ್ನು ಆ ಮೂಲಕ ತಿಳಿಸಿದೆ. ಉಪ್ಪಿ-2 ಚಿತ್ರದ ಹಾಡಿನ ಸಾಲನ್ನು ಬಳಸಿಕೊಂಡ ಉದಯವಾಣಿ 'ಕೈನಕಾಲೆಳೆದದೆ ಕಾಲ' ಎಂಬ ಶೀರ್ಷಿಕೆ ನೀಡಿದೆ. ಯಾವ ಪತ್ರಿಕೆಯ ಹೆಡ್‌ಲೈನ್ ಚೆನ್ನಾಗಿದೆ ಎಂಬುದನ್ನು ನೀವು ನಿರ್ಧರಿಸಿ.........

ಕೇಸರಿ ಫಲಿತಾಂಶ ಅಚ್ಚರಿ

ಕೇಸರಿ ಫಲಿತಾಂಶ ಅಚ್ಚರಿ

ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಗಳಿಸಿದೆ ಎಂಬ ಸುದ್ದಿಯನ್ನು ವಿಜಯವಾಣಿ ಪತ್ರಿಕೆ 'ಮತ್ತೆ ಕೇಸರಿ ಫಲಿತಾಂಶ ಅಚ್ಚರಿ' ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದೆ.

ಕೈ ಹಿಡಿಯದ ಮತದಾರ

ಕೈ ಹಿಡಿಯದ ಮತದಾರ

ವಿಜಯ ಕರ್ನಾಟಕ ದಿನ ಪತ್ರಿಕೆ 'ಕೈಹಿಡಿಯದ ಮತದಾರ, ಕಮಲಕ್ಕೆ ಅಧಿಕಾರ' ಎಂಬ ಶೀರ್ಷಿಕೆಯನ್ನು ನೀಡಿದೆ. ಬಿಜೆಪಿ ನಾಯಕರ ಸಂಭ್ರಮಾಚರಣೆ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿದೆ.

ಉಪ್ಪಿ -2 ಸಿನಿಮಾ ಶೈಲಿಯ ಶೀರ್ಷಿಕೆ

ಉಪ್ಪಿ -2 ಸಿನಿಮಾ ಶೈಲಿಯ ಶೀರ್ಷಿಕೆ

'ಬಿಬಿಎಂಪಿ ಮತ್ತೆ ಬಿಜೆಪಿಗೆ' ಎಂಬ ಶೀರ್ಷಿಕೆ ಕೊಟ್ಟಿರುವ ಉದಯವಾಣಿಯ ಮಂಗಳೂರು ಆವೃತ್ತಿಯಲ್ಲಿ ಉಪ್ಪಿ-2 ಸಿನಿಮಾ ಹಾಡಿನ ರೀತಿ ''ಕೈಯ ಕಾಲೆಳೆಯಿತು ಕಾಲ' ಎಂಬ ಉಪ ಶೀರ್ಷಿಕೆ ನೀಡಲಾಗಿದೆ.

ಕೈನ ಕಾಲೆಳೆದದೆ ಕಾಲ!

ಕೈನ ಕಾಲೆಳೆದದೆ ಕಾಲ!

ಉದಯವಾಣಿಯ ಬೆಂಗಳೂರು ಅವೃತ್ತಿಯಲ್ಲಿ 'ಕೈನಕಾಲೆಳೆದದೆ ಕಾಲ' ಎಂಬ ಶೀರ್ಷಿಕೆ ನೀಡಲಾಗಿದೆ. ಮಂಗಳೂರು ಮತ್ತು ಬೆಂಗಳೂರು ಆವೃತ್ತಿಗೆ ಬೇರೆ-ಬೇರೆ ಶೀರ್ಷಿಕೆ ನೀಡಲಾಗಿದೆ.

ಬಿಜೆಪಿಗೆ ಒಲಿದ ಜನಮತ

ಬಿಜೆಪಿಗೆ ಒಲಿದ ಜನಮತ

ಪ್ರಜಾವಾಣಿ 'ಬಿಜೆಪಿಗೆ ಒಲಿದ ಜನಮತ' ಎಂಬ ಶೀರ್ಷಿಕೆಯಡಿ ಬಿಬಿಎಂಪಿ ಚುನಾವಣೆ ಫಲಿತಾಂಶದ ಸುದ್ದಿಯನ್ನು ಪ್ರಕಟಿಸಿದೆ.

ಬಿಜೆಪಿ ಸೆಂಚುರಿ, ಕಾಂಗ್ರೆಸ್ ರನೌಟ್

ಬಿಜೆಪಿ ಸೆಂಚುರಿ, ಕಾಂಗ್ರೆಸ್ ರನೌಟ್

ಕನ್ನಡಪ್ರಭ 'ಬಿಜೆಪಿ ಸೆಂಚುರಿ, ಕಾಂಗ್ರೆಸ್ ರನೌಟ್' ಎಂಬ ಶೀರ್ಷಿಕೆಯಡಿ ಎಲ್ಲಾ ಬಿಬಿಎಂಪಿ ಫಲಿತಾಂಶದ ಸುದ್ದಿಯನ್ನು ಪ್ರಕಟಿಸಿದೆ.

ಬಿಜೆಪಿ ವಶಕ್ಕೆ ಬಿಬಿಎಂಪಿ

ಬಿಜೆಪಿ ವಶಕ್ಕೆ ಬಿಬಿಎಂಪಿ

ವಾರ್ತಾಭಾರತಿ 'ಬಿಜೆಪಿ ವಶಕ್ಕೆ ಬಿಬಿಎಂಪಿ' ಎಂಬ ಶೀರ್ಷಿಕೆ ನೀಡಿದೆ. ಉಪ ಶೀರ್ಷಿಕೆಯಲ್ಲಿ ಕಾಂಗ್ರೆಸ್‌ಗೆ ಅಘಾತ, ಜೆಡಿಎಸ್ ಅಲ್ಪತೃಪ್ತ ಎಂದು ಹೇಳಿದೆ.

ಶತದಳ ಕಮಲ

ಶತದಳ ಕಮಲ

ಹೊಸದಿಗಂತ ದಿನಪತ್ರಿಕೆ 'ಶತದಳ ಕಮಲ' ಎಂಬ ಶೀರ್ಷಿಕೆಯಡಿ ಬಿಬಿಎಂಪಿ ಚುನಾವಣಾ ಸುದ್ದಿಗಳನ್ನು ಪ್ರಕಟಿಸಿದೆ.

English summary
The BJP won 100 out of the 198 seats in the Bruhat Bengaluru Mahanagara Palike (BBMP) election 2015. Election results announced on Tuesday, August 25. Here is Kannada news papers headlines for BJP victory in BBMP election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X