ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಬೆಳಗ್ಗೆನೆ ವೋಟ್ ಮಾಡಿದೆ, ನೀವು ಮಾಡಿದ್ರಾ?

|
Google Oneindia Kannada News

ಬೆಂಗಳೂರು, ಆಗಸ್ಟ್. 22: ನೀವು ವೋಟ್ ಮಾಡಿದ್ರಾ? ನಾ ನಂತೂ ವೋಟ್ ಮಾಡಿದೆ. ಸಂಜೆವರೆಗೆ ಬೆಂಗಳೂರು ಮಹಾನಗರ ಪಾಲಿಕೆಗೆ ಮತದಾನ ನಡೆಯಲಿದ್ದು ನಿಮ್ಮ ಹತ್ತಿರದ ಬೂತ್ ಗೆ ತೆರಳಿ ಮತದಾನ ಮಾಡಿ.

ಇಂದು ಶನಿವಾರ ಸಾರ್ವತ್ರಿಕ ರಜೆ ಸಿಕ್ಕಿದೆ, ನಾಳೆ ಭಾನುವಾರವೂ ರಜೆ ಎಂದು ಮಹಾನಗರಿ ಬಿಟ್ಟು ಪ್ರವಾಸಕ್ಕೆ ಹೊರಟಿರೋ ಮುಂದೆ ಪ್ರಯಾಸ ಪಡಬೇಕಾಗುತ್ತದೆ. ಮೊದಲ ಮತದಾನ ಮಾಡಿದ ಖುಷಿಯಲ್ಲಿದ್ದ ಅಭಿಷೇಕ್, ಹಕ್ಕು ಚಲಾಯಿಸಿದ 76 ವರ್ಷದ ಭಾಗ್ಯಮ್ಮ, ಗುಜರಾತಿನವರಾದರೂ ಬೆಂಗಳೂರಲ್ಲೇ ನೆಲೆ ನಿಂತು ವೋಟ್ ಮಾಡಿದ ದಂಪತಿ ಎಲ್ಲರೂ ಮುಂಜಾನಯೇ ಕಣ್ಣಿಗೆ ಬಿದ್ದರು.[ಬಿಬಿಎಂಪಿ ಚುನಾವಣೆ ಲೈವ್]

ಹಾಗಾದರೆ ಬೆಂಗಳೂರಿನಲ್ಲಿ ಮತದಾನ ಯಾವ ರೀತಿ ನಡೆಯುತ್ತಿದೆ ಒಂದು ರೌಂಡ್ಸ್ ಹಾಕಿಕೊಂಡು ಬರೋಣ...

ಹಕ್ಕು ಚಲಾಯಿಸಿದ ತೃಪ್ತಿ

ಹಕ್ಕು ಚಲಾಯಿಸಿದ ತೃಪ್ತಿ

ಇಟ್ಟಮಡುವಿನ ಮತಗಟ್ಟೆಯೊಂದರಲ್ಲಿ ಹಕ್ಕು ಚಲಾಯಿಸಿದ 76 ವರ್ಷದ ಭಾಗ್ಯಮ್ಮ ಕಣ್ಣಿನಲ್ಲಿ ಸ್ವಚ್ಛ , ಸುಂದರ ಬೆಂಗಳೂರಿನ ಕನಸು.

ಮತ ಹಾಕಿದ ದಂಪತಿ

ಮತ ಹಾಕಿದ ದಂಪತಿ

ಮುಂಜಾನೆಯೇ ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನ ಮತಗಟ್ಟೆಯಲ್ಲಿ ಮತ ಚಲಾಯಿಸಿ ಹೊರ ಬಂದ ಗುಜರಾತ್ ಮೂಲದ ದಂಪತಿ. ಬೆಂಗಳೂರು ಬದಲಾಗುತ್ತಿದೆ, ಮತದಾನ ನಮ್ಮ ಹಕ್ಕು ಅದನ್ನು ಕಳೆದುಕೊಳ್ಳುವುದು ಮೂರ್ಖತನ ಎಂದರು.

ಮೊದಲ ಮತದಾನದ ಖುಷಿ

ಮೊದಲ ಮತದಾನದ ಖುಷಿ

ಕತ್ರಿಗುಪ್ಪೆಯ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ ಅಭಿಷೇಕ್ ಇದು ನನ್ನ ಮೊದಲ ಮತದಾನ ಎಂದು ಸಂತಸದಿಂದಲೇ ಮಾತನಾಡಿದರು. ಪ್ರಜಾಪ್ರಭುತ್ವ ಎಂದರೆ ನಾವೇ ಪ್ರಭುಗಳು ಮತದಾನ ಅದರ ಸಿಂಹಾಸನ ಎಂದರು.

ಸರತಿ ಸಾಲು

ಸರತಿ ಸಾಲು

ಜಿಟಿ ಜಿಟಿ ಮಳೆಯ ನಡುವೆಯೂ ಮತದಾರರು ತಮ್ಮ ಹಕ್ಕು ಚಲಾವಣೆಗೆ ಆಗಮಿಸುತ್ತಿದ್ದಾರೆ. ಕಾನೂನು ವ್ಯವಸ್ಥೆಗೆ ಅನುಗುಣವಾಗಿ ಸರತಿ ಸಾಲಿನಲ್ಲಿ ಜನರನ್ನು ಕಳಿಸಲಾಗುತ್ತಿದೆ.

ನಮ್ಮದೇ ಪ್ರಭುತ್ವ

ನಮ್ಮದೇ ಪ್ರಭುತ್ವ

ಭುವನೇಶ್ವರಿ ನಗರದಲ್ಲಿ ಮತ ಚಲಾಯಿಸಿದ ತಮಿಳುನಾಡು ಮೂಲದ ಮಹಿಳೆಯರು ಸ್ವಾಮಿ 5 ವರ್ಷದಿಂದ ಹೇಳ್ತಾ ಇದೀವಿ, ಸಿಮೆಂಟ್ ರೋಡ್ ಮಾಡ್ಕೋಡಿ ಅಂತ, ಇನ್ನು ಆಗೊಲ್ಲ ಈ ಬಾರಿ ಆದ್ರೂ ನೋಡ್ಬೇಕು ಎಂದರು.

ಮತಗಟ್ಟೆಗೆ ಹೆಜ್ಜೆ

ಮತಗಟ್ಟೆಗೆ ಹೆಜ್ಜೆ

ಎನ್ ಆರ್ ಕಾಲೋನಿಯ ಮತಗಟ್ಟೆಗೆ ಮತ ಚಲಾಯಿಸಲು ಧಾವಿಸಿದ ಹಿರಿಯ ನಾಗರಿಕರು.

ನಾನ್ ರೆಡಿ

ನಾನ್ ರೆಡಿ

ಚುನಾವಣಾ ಗುರುತಿನ ಚೀಟಿಯೊಂದಿಗೆ ಮತಗಟ್ಟೆ ಸಮೀಪ ಆಗಮಿಸಿ ತಮ್ಮ ನಂಬರ್ ಪಡೆದುಕೊಂಡು ಮತದಾನಕ್ಕೆ ಸಿದ್ಧರಾದ ಬಸವನಗುಡಿಯ ರಾಜಶೇಖರ್.

ನಾವೂ ವೋಟ್ ಮಾಡ್ತಿವಿ

ನಾವೂ ವೋಟ್ ಮಾಡ್ತಿವಿ

ಎನ್ ಆರ್ ಕಾಲೋನಿಯ ಮತಗಟ್ಟೆ ಬಳಿ ಕಂಡು ಬಂದ ಸ್ನೇಹಿತರ ದಂಡು. ಎಲ್ಲರಿಗೂ ಇದು ಮೊದಲ ಮತದಾನ. ಒಟ್ಟಾಗಿಯೇ ಮತಗಟ್ಟೆ ಒಳಕ್ಕೆ ತೆರಳುತ್ತೀವಿ ಎಂದು ಸುಭಾಷ್ ಹೇಳಿದಾಗ ಮತದಾನ ಜಾಗೃತಿ ತಲುಪಿದೆ ಎಂದು ಎನಿಸಿತು.

English summary
Voting begins for BBMP Elections 2015 on 22nd August Saturday, 2015. 1,121 candidates in fray for 197 wards. Here some pics of voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X