ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶಲ್ ಹೊಡೆದು ಭ್ರಷ್ಟತನ ಓಡಿಸಲು ಬಂದ ಲೋಕಸತ್ತಾ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ಲೋಕಾಸತ್ತಾ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಟೆಕ್ಕಿಗಳು, ಡಾಕ್ಟರ್ ಗಳು ಸೇರಿದಂತೆ ಬಿಬಿಎಂಪಿ 198 ವಾರ್ಡ್‌ಗಳ ಪೈಕಿ 17 ವಾರ್ಡ್‌ಗಳಲ್ಲಿ ಪಕ್ಷ ಸ್ಪರ್ಧಿಸುತ್ತಿದೆ.

ಲೋಕಸತ್ತಾ ಪಕ್ಷದ ಪ್ರಣಾಳಿಕೆಯಲ್ಲಿ ಸಾರಿಗೆ ಬಸ್ ದರ, ಭ್ರಷ್ಟಾಚಾರ ನಿರ್ಮೂಲನೆ ಮುಂತಾದ ಅಂಶಗಳು ಪ್ರಮುಖವಾಗಿದೆ.[ಪೂರ್ಣ ಪ್ರಣಾಳಿಕೆ ಇಲ್ಲಿ ಓದಿ]

ಎರಡು ದಶಕಗಳ ಹಿಂದೆ ನಾಗರಿಕ ಚಳವಳಿಯ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಲೋಕಸತ್ತಾ ಪಕ್ಷ 2006ರಲ್ಲಿ ರಾಜಕೀಯ ಪಕ್ಷವಾಗಿ ಸ್ಥಾನ ಗಳಿಸಿತು. ಜಯಪ್ರಕಾಶ ನಾರಾಯಣ್ ಅವರು ಹುಟ್ಟುಹಾಕಿದ ಲೋಕ ಸತ್ತಾ ಚಳವಳಿಯು ಸರಕಾರೇತರ ಸಂಸ್ಥೆಯಾಗಿ 1996ರಿಂದ ಕಾರ್ಯನಿರ್ವಹಿಸುತ್ತಿದೆ.

ಸ್ಕೋರ್ ಕಾರ್ಡ್:
[ಪಕ್ಷದ ಬಗ್ಗೆ ಪೂರ್ಣ ವಿವರ]
* 2008ರಲ್ಲಿ ಆಂಧ್ರಪ್ರದೇಶ ಅಸೆಂಬ್ಲಿ ಶೇ 10 ರಷ್ಟು ಮತ ಗಳಿಕೆ
* 2009ರ ಆಂಧ್ರಪ್ರದೇಶ ಅಸೆಂಬ್ಲಿ, 294 ಕ್ಷೇತ್ರಗಳ ಪೈಕಿ, ಜಯಪ್ರಕಾಶ್ ನಾರಾಯಣ್ ಅವರಿಗೆ ಕುಕಟ್ ಪಲ್ಲಿ ಕ್ಷೇತ್ರದಲ್ಲಿ ಗೆಲುವು
* 2010ರಲ್ಲಿ ಬಿಬಿಎಂಪಿ 198 ವಾರ್ಡ್ ಗಳಲ್ಲಿ 5 ಕ್ಷೇತ್ರಗಳಲ್ಲಿ ಸ್ಪರ್ಧೆ ಶೇ 7 ರಷ್ಟು ಮತ ಗಳಿಕೆ
* 2011 : ತಮಿಳುನಾಡಿನಲ್ಲಿ 35 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸ್ಪರ್ಧೆ
* 2012 ಬೆಂಗಳೂರು ಪದವೀಧರರ ಕ್ಷೇತ್ರದ ಪರಿಷತ್ ಚುನಾವಣೆ ಶೇ 16ರಷ್ಟು ಮತ ಗಳಿಕೆ

ಕರ್ನಾಟಕ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಲೋಕಸತ್ತಾ ಪಕ್ಷದಿಂದ ಸಾಫ್ಟ್ ವೇರ್ ಇಂಜಿನಿಯರ್ ಗಳು, ರೈತ, ಆರ್ ಜೆ, ಹಿರಿಯ ನಾಗರಿಕರು ಸ್ಪರ್ಧೆಗಿಳಿದಿದ್ದರು. ಆಗಸ್ಟ್ 22ರಂದು ಬಿಬಿಎಂಪಿ ಚುನಾವಣೆಗೆ ಮತದಾನ ನಡೆಯಲಿದ್ದು, ಆಗಸ್ಟ್ 25ರಂದು ಫಲಿತಾಂಶ ಹೊರಬೀಳಲಿದೆ. ಲೋಕಸತ್ತಾ ಪಕ್ಷದ ಅಭ್ಯರ್ಥಿಗಳಿಬ್ಬರ ಪರಿಚಯ ಇಲ್ಲಿದೆ.

ಲೋಕ ಸತ್ತಾ : ಪಕ್ಷದ ಪ್ರಮುಖರು

ಲೋಕ ಸತ್ತಾ : ಪಕ್ಷದ ಪ್ರಮುಖರು

ಐಎಎಸ್ ಮಾಜಿ ಅಧಿಕಾರಿ ಆಂಧ್ರಪ್ರದೇಶದ ಮೂಲದ ಡಾ.ಜಯಪ್ರಕಾಶ್ ನಾರಾಯಣ್ ಅವರು ಲೋಕಸತ್ತಾ ಪಕ್ಷ ಸ್ಥಾಪಕರು. ಮುಂಬೈನ ಸುರೇಂದ್ರ ಶ್ರೀವಾಸ್ತವ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.ಬೆಂಗಳೂರಿನ ಡಾ. ಅಶ್ಚಿನ್ ಮಹೇಶ್ ಅವರು ರಾಷ್ಟ್ರೀಯ ಸಮಿತಿ ಸದಸ್ಯರು
ಕರ್ನಾಟಕ ಸಮಿತಿ ಸದಸ್ಯರು:
ಅಧ್ಯಕ್ಷೆ: ರಾಮಲಕ್ಷ್ಮಿ ಕೆ.
ಪಕ್ಷದ ಕಾರ್ಯದರ್ಶಿ ಸಿ.ಎನ್. ದೀಪಕ್

ಪಕ್ಷ ಪರಿಚಯ : ಲೋಕ ಸತ್ತಾ ಸಂಕ್ಷಿಪ್ತ ಚಿತ್ರಣ

ಪಕ್ಷ ಪರಿಚಯ : ಲೋಕ ಸತ್ತಾ ಸಂಕ್ಷಿಪ್ತ ಚಿತ್ರಣ

ಪಕ್ಷದ ಚಿನ್ಹೆ: Whistle
ವೆಬ್ ಸೈಟ್: http://loksattakarnataka.org/
ಮುಖವಾಣಿ : ಲೋಕ್ ಸತ್ತಾ ಟೈಮ್ಸ್
ಇಮೇಲ್ : [email protected]
ವಿಳಾಸ: ಮನೆ ಸಂಖ್ಯೆ: 8-2-674B/2/9, ಪ್ಲಾಟ್ ಸಂಖ್ಯೆ: 93,
ಹ್ಯಾಪಿ ವ್ಯಾಲಿ, ರಸ್ತೆ ಸಂಖ್ಯೆ: 13-A,
ಬಂಜಾರಾ ಹಿಲ್ಸ್
ಹೈದರಾಬಾದ್
ಆಂಧ್ರಪ್ರದೇಶ

ಬಾಷ್ ಉದ್ಯೋಗಿಯಾಗಿದ್ದ ಎನ್ ರೋಹಿತ್ ಕಣಕ್ಕೆ

ಬಾಷ್ ಉದ್ಯೋಗಿಯಾಗಿದ್ದ ಎನ್ ರೋಹಿತ್ ಕಣಕ್ಕೆ

ಕತ್ರಿಗುಪ್ಪೆ 163ನೇ ವಾರ್ಡಿನಿಂದ 33 ವರ್ಷ ರೋಹಿತ್ ಸಿಂಹ ಅವರು ಕಣಕ್ಕಿಳಿದಿದ್ದಾರೆ. ಬಾಷ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 11 ವರ್ಷಗಳ ಕಾಲ ಟೆಸ್ಟ್ ಆರ್ಕಿಟೆಕ್ಟ್ ಆಗಿ ದುಡಿದಿರುವ ರೋಹಿತ್ ಅವರು ಬಿಟ್ಸ್ ಪಿಲಾನಿ ಯಿಂದ ಎಂಎಸ್(ಕ್ವಾಲಿಟಿ ಮ್ಯಾನೇಜ್ಮೆಂಟ್) ಪಡೆದಿದ್ದಾರೆ. ರೋಹಿತ್ ಅವರ ಬಗ್ಗೆ ಇನ್ನಷ್ಟು ಮಾಹಿತಿಗೆ ಲೋಕಸತ್ತಾ ವೆಬ್ ಸೈಟ್ ನ ಪುಟ ನೋಡಿ

ಎಚ್ ಆರ್ ಆಗಿದ್ದ ಲಕ್ಷ್ಮಿ ಎಂ ಕಣಕ್ಕೆ

ಎಚ್ ಆರ್ ಆಗಿದ್ದ ಲಕ್ಷ್ಮಿ ಎಂ ಕಣಕ್ಕೆ

ಜಯನಗರದ ಪಟ್ಟಾಭಿರಾಮನಗರ ವಾರ್ಡ್ 168ರಿಂದ ಲಕ್ಷ್ಮಿ ಮೂಲಾ ಅವರು ಕಣಕ್ಕಿಳಿಯುತ್ತಿದ್ದಾರೆ. ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದ ಇವರು ಸೈಕಾಲಜಿಸ್ಟ್ ಕೂಡಾ. ಅಣ್ಣಾ ಹಜಾರೆ ಅವರು ಕರೆ ನೀಡಿದ ಭ್ರಷ್ಟಾಚಾರ ವಿರುದ್ಧ ಭಾರತ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅನುಭವ ಹೊಂದಿದ್ದಾರೆ.

English summary
BBMP Elections 2015: As the BBMP elections are scheduled to be held on Saturday, Aug 22, two techies have quit their high-paying jobs, to serve the society, through politics and are contesting from Loksatta Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X