ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಕಾರ್ಪೊರೇಟರ್ಸ್ ಅಂಕಪಟ್ಟಿಗಾಗಿ ಸಮೀಕ್ಷೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ. ಎಲ್ಲಾ ಚುನಾವಣೆಗಳಂತೆ ಈ ಚುನಾವಣೆಗೂ ಮುನ್ನ ಕ್ಷೇತ್ರದ ಸಮಸ್ಯೆ, ಕ್ಷೇತ್ರದ ಜನತೆಯ ಬೇಡಿಕೆ, ಅಲ್ಲಿರುವ ಹಾಲಿ ಕಾರ್ಪೊರೇಟರ್ಸ್ ಕಾರ್ಯಕ್ಷಮತೆಯ ವರದಿ ತಯಾರಿಸಲು ಊರ್ವಾಣಿ ಸಂಸ್ಥೆಯ ಸಿಟಿಜನ್ ಮ್ಯಾಟರ್ಸ್ ಸಜ್ಜಾಗಿದೆ.

ಸಿಟಿಜನ್ ಮ್ಯಾಟರ್ಸ್ ಬಿಬಿಎಂಪಿ ಚುನಾವಣಾಪೂರ್ವ ಸಮೀಕ್ಷೆ ಮೂಲಕ ಬೆಂಗಳೂರಿಗರ ನಾಡಿಮಿಡಿತ ತಿಳಿಯುವ ಪ್ರಯತ್ನ ಇದಾಗಿದೆ. [ಬಿಬಿಎಂಪಿ ಚುನಾವಣೆ ವೇಳಾಪಟ್ಟಿ ಘೋಷಣೆ]

ಒಂದು ಅರ್ಜಿಯನ್ನು ತುಂಬಿ ಮತ್ತು ಈ ಸಮೀಕ್ಷೆಯ ಬಗ್ಗೆ ಇತರರಿಗೂ ತಿಳಿಸುವ ಮೂಲಕ ಹೆಚ್ಚೆಚ್ಚು ಜನ ಜಾಗೃತಿ ಸಾಧ್ಯ. ಬೆಂಗಳೂರು ಸಧ್ಯದಲ್ಲೇ ಎದುರಿಸಲಿರುವ ಚುನಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಇದು ಸೂಕ್ತ ವೇದಿಕೆಯಾಗಿದೆ.

ಚುನಾವಣೆಗಾಗಿ ಕಾಯುವ ಕಾಲ ಮುಗಿಯಿತು. ಬಿಬಿಎಂಪಿ ಚುನಾವಣೆ ಮತ್ತೆ ನಿಮ್ಮ ಮುಂದಿದೆ. ಓದುಗರು ಈ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಭಾಗವಹಿಸಲು ಕೋರುತ್ತೇವೆ. [ಬಿಬಿಎಂಪಿ ಚುನಾವಣೆ ಮಕ್ಕಳಾಟವಲ್ಲ: ದೇವೇಗೌಡ]

BBMP

ನಿಮ್ಮ ಭಾಗವಹಿಸುವಿಕೆ ನೀವು ಸ್ಥಳೀಯ ಆಡಳಿತವನ್ನು ಹೇಗೆ ಗ್ರಹಿಸುತ್ತೀರಿ ಎನ್ನುವುದನ್ನು ನಮಗೆ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ. ಅದರೊಂದಿಗೆ ನಿಮ್ಮ ಇತ್ತೀಚಿನ ಕಾರ್ಪೊರೇಟರ್ ಬಗ್ಗೆ ನಾಗರಿಕ ವರದಿ ತಯಾರಿಸಲು ನಮಗೆ ಸಹಾಯ ಮಾಡುತ್ತದೆ. [ಬಿಬಿಎಂಪಿ ವೆಬ್‌ಸೈಟ್‌ನ ಹೊಸ ವಿನ್ಯಾಸ ನೋಡಿ]

* ಕಳೆದ ಚುನಾವಣೆಯಲ್ಲಿ ಗೆದ್ದವರು ಯಾರೆಂದು ನೋಡಲು ನಿಮಗೆ ಈ ಲಿಂಕ್ ಸಹಾಯ ಮಾಡುತ್ತದೆ.
* ಈ ಮ್ಯಾಪನ್ನು ಬೆಂಗಳೂರಿನ ಸಾಫ್ಟ್‌ವೇರ್ ಪರಿಣತ ತೇಜೇಶ್ ಜಿ ಎನ್ ತಯಾರಿಸಿದ್ದಾರೆ.
* ಈ ಸಮೀಕ್ಷೆಯಲ್ಲಿ ಭಾಗವಹಿಸಲು ನಿಮ್ಮ ಜಿ ಮೇಲ್ ಅಕೌಂಟ್ ನಿಂದ ಲಾಗ್ ಇನ್ ಆಗಬೇಕು.
* ಈ ಸಮೀಕ್ಷೆಯ ಅರ್ಜಿಯನ್ನು ಒಮ್ಮೆ ಮಾತ್ರ ತುಂಬಬಹುದು.
* ಅರ್ಜಿ ಕೆಳಗೆ ಕಾಣಿಸದಿದ್ದರೆ ಈ ಲಿಂಕ್ ನ್ನು ಒತ್ತಿ.

(ಒನ್ ಇಂಡಿಯಾ ಸುದ್ದಿ)

English summary
Citizen Matters pre-BBMP poll survey: Do fill this survey and spread the word! We would like to know what Bengaluru feels about the big Bengaluru battle that will be on very soon! This will also help us in preparing citizens’ report cards for the existing Corporators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X