ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣಾ ಅಧಿಸೂಚನೆ ಪ್ರಕಟ

|
Google Oneindia Kannada News

ಬೆಂಗಳೂರು, ಆಗಸ್ಟ್ 3 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸೋಮವಾರ ಅಧಿಸೂಚನೆ ಹೊರಡಿಸಲಾಗಿದೆ. ಆ.22ರಂದು ಮತದಾನ ನಡೆಯಲಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆ.10ರ ತನಕ ಕಾಲಾವಕಾಶ ನೀಡಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಅವರು ಸೋಮವಾರ ಅಧಿಸೂಚನೆ ಹೊರಡಿಸಿದರು. ಜುಲೈ 17ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಆಗಸ್ಟ್ 26ರ ತನಕ ಜಾರಿಯಲ್ಲಿರುತ್ತದೆ. [ಬಿಬಿಎಂಪಿ ಚುನಾವಣಾ ವೇಳಾಪಟ್ಟಿ]

bbmp

ಆಗಸ್ಟ್‌ 22ರ ಶನಿವಾರ ಮತದಾನ ನಡೆಯಲಿದ್ದು, ಆ.25ರ ಮಂಗಳವಾರ ಫಲಿತಾಂಶ ಪ್ರಕಟಗೊಳ್ಳಲಿದೆ. 198 ವಾರ್ಡ್‌ಗಳಲ್ಲಿ 6,733 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. 71.8 ಲಕ್ಷ ಮತದಾರರು ಚುನಾವಣೆಯಲ್ಲಿ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. [ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆ?]

ಮತದಾರರ ಪಟ್ಟಿಗೆ ಹೆಸರು ಸೇರಿಸಿ : ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಗಸ್ಟ್ 10 ಕೊನೆಯ ದಿನವಾಗಿದೆ. ಸಾರ್ವಜನಿಕರು ಹತ್ತಿರದ ಪಾಲಿಕೆ ಕಚೇರಿ ಅಥವ ಬಿಬಿಎಂಪಿ ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಸರು ಸೇರಿಸುವ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. [ಪಾಲಿಕೆ ವೆಬ್ ಸೈಟ್ ವಿಳಾಸ]

ಕಂಟ್ರೋಲ್ ರೂಂಗಳು : ಸಾರ್ವಜನಿಕರ ಸಹಾಯಕ್ಕಾಗಿ ಮೂರು ಕಂಟ್ರೋಲ್ ರೂಂಗಳನ್ನು ತರೆಯಲಾಗಿದೆ. ಚುನಾವಣೆ ಬಗ್ಗೆ ಮಾಹಿತಿ ಪಡೆಯಲು 080-22374740 (ಚುನಾವಣಾ ಆಯೋಗದ ಸಹಾಯವಾಣಿ) ಅಥವ 080-22224748, 080-22221188 (ಬಿಬಿಎಂಪಿ ಸಹಾಯವಾಣಿ)ಗೆ ಕರೆ ಮಾಡಬಹುದಾಗಿದೆ.

ಚುನಾವಣಾ ವೇಳಾಪಟ್ಟಿ

* ಆಗಸ್ಟ್ 10 ನಾಮಪತ್ರ ಸಲ್ಲಿಸಲು ಕೊನೆಯ ದಿನ
* ಆಗಸ್ಟ್ 13 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ
* ಆಗಸ್ಟ್ 22ರಂದು ಮತದಾನ (ಶನಿವಾರ)
* ಆಗಸ್ಟ್ 24 ಮರು ಮತದಾನ (ಅಗತ್ಯವಿದ್ದರೆ)
* ಆಗಸ್ಟ್ 25ರಂದು ಫಲಿತಾಂಶ (ಮಂಗಳವಾರ)

English summary
Bruhat Bangalore Mahanagara Palike (BBMP) election 2015 notification issued on Monday, August 3 by BBMP commissioner G. Kumar Naik. Polls scheduled on August 22, Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X