ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಕಿ ಕಿತ್ತಾಕಿ ಖಾದಿ ತೊಡಲು ಹೊರಟ ಮಹಿಳಾ ಪೊಲೀಸ್

|
Google Oneindia Kannada News

ಬೆಂಗಳೂರು, ಆಗಸ್ಟ್ 10 : ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಸಾಮಾನ್ಯ. ಆದರೆ, ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಪೊಲೀಸ್ ಕಾನ್ಸ್‌ಸ್ಟೇಬಲ್‌ ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ಶ್ರೀನಗರ ವಾರ್ಡ್ (ನಂ 156) ರಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸೋಮವಾರ ನಾಮಪತ್ರ ಸಲ್ಲಿಸಿರುವ ಜೆ.ಎಂ.ಸವಿತಾ ಅವರು ಪೊಲೀಸ್ ಕಾನ್ಸ್‌ಸ್ಟೇಬಲ್‌ ಹುದ್ದೆ ತೊರೆದು ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. [ಬಿಜೆಪಿ ಬಿಬಿಎಂಪಿ ಚುನಾವಣಾ ವೆಬ್ ಸೈಟ್]

bbmp

12 ವರ್ಷ ಪೊಲೀಸ್ ಕಾನ್ಸ್‌ಟೇಬಲ್ ಅಗಿ ಕೆಲಸ ಮಾಡಿರುವ ಸವಿತಾ ಅವರು ಈಗ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. 2003ರಿಂದ 2006ರ ತನಕ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಸವಿತಾ ಅವರು ಕಾರ್ಯನಿರ್ವಹಿಸಿದ್ದಾರೆ. 2006 ರಿಂದ 2015ರ ತನಕ ಡಿಜಿಪಿ ಕಚೇರಿಯಲ್ಲಿ ಕೆಲಸ ಮಾಡಿದ್ದಾರೆ. [ಪಾಲಿಕೆ ಚುನಾವಣೆ, ಅಭ್ಯರ್ಥಿ ಅಪಹರಣ]

ಚುನಾವಣೆಗೆ ಸ್ಪರ್ಧೆ ಏಕೆ? : ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿರುವ ಸವಿತಾ ಅವರು, 'ನಮ್ಮ ತಂದೆ ಕೃಷಿ ಇಲಾಖೆಯಲ್ಲಿ ಕೆಲಸ ಮಾಡಿದ್ದು, 24 ವರ್ಷಗಳ ನಂತರ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ'.

'ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ನಾನು ಕೂಡ ಪದವಿಧರೆ. ನನಗೂ ಸಮಾಜ ಸೇವೆ ಮಾಡಬೇಕೆಂಬ ಆಸೆ ಇದೆ. ನಮ್ಮ ಬಡಾವಣೆಯಲ್ಲಿ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದೇನೆ' ಎಂದು ಹೇಳಿದ್ದಾರೆ.

ಈ ವಾರ್ಡ್‌ನಲ್ಲಿ ಹಿಂದೆ ಜೆಡಿಎಸ್‍ನ ಅಭ್ಯರ್ಥಿ ತಿಮ್ಮೇಗೌಡ ಅವರು ಜಯ ಸಾಧಿಸಿದ್ದರು. ಈ ಬಾರಿ ಬಿಜೆಪಿಯಿಂದ ಸವಿತಾ, ಕಾಂಗ್ರೆಸ್‌ನಿಂದ ಕೆ.ಎಂ.ಲಾವಣ್ಯ ಕಣಕ್ಕಿಳಿದಿದ್ದಾರೆ.

English summary
35-year-old a female constable JM Savitha has resigned from her post and jumped into Bruhat Bangalore Mahanagara Palike (BBMP) poll fray on the BJP ticket. Savitha will contest from Srinagar ward (No 156).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X