ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಬಿಬಿಎಂಪಿ ಬಜೆಟ್

9241 ಕೋಟಿ ರೂಪಾಯಿ ಯೋಜನಾ ಗಾತ್ರದ 2017- 18 ನೇ ಸಾಲಿನ ಬಿಬಿಎಂಪಿ ಆಯವ್ಯಯವನ್ನು ಇಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಮಂಡಿಸುತ್ತಿದ್ದಾರೆ.

|
Google Oneindia Kannada News

ಬೆಂಗಳೂರು, ಮಾರ್ಚ್ 25: ಉದ್ಯಾನ ನಗರಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು ತನ್ನ ಬಜೆಟ್ ಮಂಡನೆ ಮಾಡುತ್ತಿದೆ.

9241 ಕೋಟಿ ರೂಪಾಯಿ ಯೋಜನಾ ಗಾತ್ರದ 2017- 18 ನೇ ಸಾಲಿನ ಬಿಬಿಎಂಪಿ ಆಯವ್ಯಯವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಮಂಡಿಸುತ್ತಿದ್ದಾರೆ. ಈ ಬಜೆಟ್ ಕಳೆದ ಬಾರಿಯ ಬಜೆಟ್ ಕಿಂತ ಶೇ.40 ಪ್ರತಿಶತ ದೊಡ್ಡ ಗಾತ್ರವನ್ನು ಹೊಂದಿದ್ದು, ರಾಜ್ಯ ಸರ್ಕಾರದಿಂದ ಬಿಬಿಎಂಪಿಗೆ ಸಿಕ್ಕ ಅನುದಾನ 4249 ಕೋಟಿ ರೂ.[ಬಜೆಟ್ 2017: ಯಾವ್ದು ಏರಿಕೆ? ಯಾವ್ದು ಇಳಿಕೆ?]

BBMP budget for overall development of garden city

1017-18ನೇ ಸಾಲಿನ ಬಿಬಿಎಂಪಿ ಬಜೆಟ್ ನ ಮುಖ್ಯಾಂಶಗಳು ಇಲ್ಲಿವೆ.

* ಉದ್ಯಾನನಗರಿಯ ಸ್ವಚ್ಛತೆಗೆ ಮೊದಲ ಆದ್ಯತೆ.

* ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಒತ್ತು.

* ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 89.50 ಕೋಟಿ ರೂ.
[ಬಜೆಟ್ : ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ]

* 19 ಲಕ್ಷಮನೆಗಳಿಗೆ ಡಿಜಿಟಲ್ ಮನೆ ಸಂಖ್ಯೆ

* ಕಟ್ಟಡ ಮತ್ತು ನಕ್ಷೆಗಳ ಮಾಹಿತಿ ಆನ್ ಲೈನ್ ನಲ್ಲೇ ಲಭ್ಯ.

* ಲೆಕ್ಕಪತ್ರ ನಿರ್ವಹಣೆಗೆ ಇ-ಆಡಳಿತ

* ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಾಗುವಂಥ ಯೋಜನೆಗಳ ಜಾರಿ

* ಜಾಹೀರಾತು ಮತ್ತು ತೆರಿಗೆಯಿಂದ ಬಂದ ಆದಾಯ 82.50 ಕೋಟಿ ರೂ.

English summary
Tax and econimic standing committee president M K Gunashekhar presents BBPM budget 2017-18 today. Overall development of garden city is the prime agenda of the budget,he told
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X