'ಈಗಷ್ಟೇ ಮನೆ ಕಟ್ಟಿದ್ದೇನೆ, ಗೃಹ ಪ್ರವೇಶ ಆಗಿಲ್ಲ ಬಿಟ್ಟು ಬಿಡಿ'

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 06 : 'ನಿಮ್ಮ ಕಾಲಿಗೆ ಬೀಳುವೆ...ಈಗಷ್ಟೇ ಮನೆ ಕಟ್ಟಿದ್ದೇನೆ...ಗೃಹ ಪ್ರವೇಶವನ್ನೂ ಮಾಡಿಲ್ಲ. ದಯವಿಟ್ಟು ಬಿಟ್ಟುಬಿಡಿ' ಎಂದು ಕಸವನಹಳ್ಳಿ ಬಳಿ ರಾಜಾಕಾಲುವೆ ಒತ್ತುವರಿ ತೆರವು ವೇಳೆ ನಿವಾಸಿಯೊಬ್ಬರು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರು.[3 ಕೋಟಿ ವೆಚ್ಚ ಮನೆಯಿದ್ದರೂ ಈಕೆ, ಬೀದಿ ಬದಿ ವ್ಯಾಪಾರಿ!]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಬಿಬಿಎಂಪಿ ನಗರದಲ್ಲಿ ಶನಿವಾರ ರಾಜಾ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಹಲವು ಜೆಸಿಬಿಗಳು ನಗರದ ವಿವಿಧ ಭಾಗದಲ್ಲಿ ಮುಂಜಾನೆಯೇ ಘರ್ಜನೆ ನಡೆಸುತ್ತಿವೆ.[ರಾಜಾಕಾಲುವೆ ಒತ್ತುವರಿ ತೆರವುಗೊಳಿಸಿ : ಸಿದ್ದರಾಮಯ್ಯ]

bda

ಕಸವನಹಳ್ಳಿ, ಯಲಹಂಕ ಬಳಿಯ ಶಿವನಹಳ್ಳಿ ಸೇರಿದಂತೆ ಬೆಂಗಳೂರು ನಗರದ 8 ಪ್ರದೇಶಗಳಲ್ಲಿ ಇಂದು ರಾಜಾಕಾಲುವೆ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ. 'ರಾಜಾಕಾಲುವೆ ಒತ್ತುವರಿಯಾಗಿದ್ದರೂ ತೆರವುಗೊಳಿಸಿ' ಎಂದು ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದು, ಅದರಂತೆ ಇಂದಿನಿಂದ ಕಾರ್ಯಾಚರಣೆ ಆರಂಭಿಸಲಾಗಿದೆ.[ಕೆರೆಗಳು ನಕ್ಷೆಯಲ್ಲಿ ಮಾತ್ರ ಇವೆ!]

ಕಸವನಹಳ್ಳಿ ಬಳಿ ತೆರವು ಕಾರ್ಯಾಚರಣೆ ಆರಂಭಿಸಿದಾಗ ನಿವಾಸಿಯೊಬ್ಬರು ಮನೆ ಒಡೆಯಬೇಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. 'ಈಗಷ್ಟೆ ಮನೆ ಕಟ್ಟಿದ್ದೇನೆ, ಗೃಹ ಪ್ರವೇಶವೂ ಆಗಿಲ್ಲ, ನಮ್ಮನ್ನು ಬಿಟ್ಟುಬಿಡಿ' ಎಂದು ಗೋಳು ತೋಡಿಕೊಂಡರು.[ಇಂದು ಬೆಂಗಳೂರು ಕೆರೆಗಳ ಕಥೆ-ವ್ಯಥೆ]

ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಬಿಬಿಎಂಪಿ ರಾಜಾ ಕಾಲುವೆಗಳನ್ನು ನಿರ್ಮಿಸಿದೆ. ಆದರೆ, ಹಲವು ಪ್ರದೇಶಗಳಲ್ಲಿ ಈ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಮಳೆ ನೀರು ಹೋಗಲು ಸ್ಥಳವಿಲ್ಲದೇ ಬಡಾವಣೆಗಳು ಜಲಾವೃತವಾಗುತ್ತಿವೆ. ಆದ್ದರಿಂದ, ರಾಜಾಕಾಲುವೆ ಒತ್ತುವರಿ ತೆರವುಗೊಳಿಸಲಾಗುತ್ತಿದೆ.

English summary
Bruhat Bangalore Mahanagara Palike (BBMP) on August 6, 2016 began the operation to clear encroachments of raja kaluve.
Please Wait while comments are loading...