ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಪ್ರಶಸ್ತಿ ಚೆಕ್ ಬೌನ್ಸ್, ಪಾಲಿಕೆ ಮಾನ ಹರಾಜು

|
Google Oneindia Kannada News

ಬೆಂಗಳೂರು, ಮೇ 30 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾನ ಮತ್ತೊಮ್ಮೆ ಹರಾಜಾಗಿದೆ. 2015ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಜೊತೆ ನೀಡಿದ್ದ 20 ಕ್ಕೂ ಅಧಿಕ 15 ಸಾವಿರ ರೂ. ಮೌಲ್ಯದ ಚೆಕ್ ಬೌನ್ಸ್ ಆಗಿದೆ. ಸಾಧಕರಿಗೆ ಶೀಘ್ರದಲ್ಲೇ ಪ್ರಶಸ್ತಿ ಹಣ ತಲುಪಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

91 ಸಾಧಕರಿಗೆ 2015ರ ಕೆಂಪೇಗೌಡ ಪ್ರಶಸ್ತಿಯನ್ನು ಏ.4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದ್ದರು. ಪ್ರಶಸ್ತಿಯೊಂದಿಗೆ ಅಶ್ವಾರೂಢ ಕೆಂಪೇಗೌಡರ ಪ್ರತಿಕೃತಿಯಿರುವ ಸ್ಮರಣಿಕೆ, ಪ್ರಮಾಣ ಪತ್ರದ ಜತೆಗೆ 15,000 ರೂ. ನಗದು ಪುರಸ್ಕಾರ ನೀಡಲಾಗಿತ್ತು.

bbmp

ಆದರೆ, ಪ್ರಶಸ್ತಿ ಜೊತೆಗೆ ನೀಡಿದ 15,000 ರೂ. ಮೌಲ್ಯದ ಸುಮಾರು 20 ಚೆಕ್‌ಗಳು ಬೌನ್ಸ್‌ ಆಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮರ್ಯಾದೆ ಹರಾಜಾಗಿದೆ. ಈಗ ಪಾಲಿಕೆ ಅಧಿಕಾರಿಗಳು ಚೆಕ್‌ ಬೌನ್ಸ್‌ ಪ್ರಕರಣವನ್ನು ಸರಿ ಮಾಡಲು ಮುಂದಾಗಿದ್ದಾರೆ. [2015ರಲ್ಲಿ ಕೆಂಪೇಗೌಡ ಪ್ರಶಸ್ತಿ ಪಡೆದವರು].

ಮುಖ್ಯಮಂತ್ರಿಗಳ ಭರವಸೆ : ಶನಿವಾರ ಬೆಂಗಳೂರು ನಗರ ಪ್ರದಕ್ಷಿಣೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಚೆಕ್‌ ಬೌನ್ಸ್ ಆಗಿರುವ ಪ್ರಕರಣ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಸಾಧಕರಿಗೆ ನಗದು ಹಣ ತಲುಪಿಸಲಾಗುತ್ತದೆ. ಹಣ ತಲುಪಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು ಹೇಳಿದ್ದಾರೆ. [ಸಿದ್ದರಾಮಯ್ಯ ಬೆಂಗಳೂರು ಪ್ರದಕ್ಷಿಣೆ ಮುಖ್ಯಾಂಶಗಳು]

ಇದೇ ಮೊದಲಲ್ಲ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚೆಕ್ ಬೌನ್ಸ್ ಆಗುತ್ತಿರುವುದು ಇದೇ ಮೊದಲಲ್ಲ. 2014ರಲ್ಲಿ ಪಾಲಿಕೆ ಆಯುಕ್ತರ ಮನೆ ಟೆಲಿಪೋನ್ ಬಿಲ್ ಕಟ್ಟಲು ಕೊಟ್ಟಿದ್ದ ಸುಮಾರು 1,500 ರೂ. ಚೆಕ್ ಬೌನ್ಸ್ ಆಗಿತ್ತು.

English summary
Its shame for Bruhat Bengaluru Mahanagara Palike (BBMP). More than 20 cheque of Rs 15,000 bounced. Cheque distributed with 2015 Kempegowda awards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X