ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರಶೈವ ವೇದಿಕೆಯಿಂದ ಬಸವ ಸಿರಿ ಪ್ರಶಸ್ತಿ ಪ್ರದಾನ

By Mahesh
|
Google Oneindia Kannada News

ಪ್ರಶಾಂತ್ ಕಲ್ಲೂರು ನೇತೃತ್ವದ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಲ್ಪಟ್ಟ ಬಸವ ಜಯಂತೋತ್ಸವ ಹಾಗೂ 'ಬಸವ ಸಿರಿ' ಪ್ರಶಸ್ತಿ ಪ್ರದಾನ ಸಮಾರಂಭ ಸರಳವಾಗಿ ಅರ್ಥಪೂರ್ಣವಾಗಿ ಜರುಗಿತು.[ಲಂಡನ್ನಿನಲ್ಲಿ ಪ್ರಥಮ ಬಾರಿಗೆ ಬಸವ ಜಯಂತಿ ಆಚರಣೆ!]

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ ಹಾಗೂ ರೈತರು ಎದುರಿಸುತ್ತಿರುವ ತೀವ್ರ ಜಲಕ್ಷಾಮದ ನಿಮಿತ್ತ ಈ ಸಲದ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಸಂಘಟನೆಯ ಅಧ್ಯಕ್ಷ ಪ್ರಶಾಂತ್ ಕಲ್ಲೂರ್ ತಿಳಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು ಸಂಘಟನೆಯ ಮೂರು ವರ್ಷದ ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.[ವಚನಗಳಲ್ಲಿ ನಾಮಾಮೃತ ತುಂಬಿದ ಅಣ್ಣ ಬಸವಣ್ಣ]

ಶಿವರುದ್ರ ಸ್ವಾಮಿಗಳು :ಸಾನ್ನಿಧ್ಯ ವಹಿಸಿದ್ದ ಬೆಂಗಳೂರು ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮಿಗಳು ಬಸವಣ್ಣನ ತತ್ವಗಳು ಇಂದು ಕೇವಲ ಭಾಷಣಗಳಿಗೆ ಸೀಮಿತವಾಗಿವೆ, ಡಾಂಭಿಕತೆ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಹುತೇಕರು ಇಂದು ಮಾನ ಸಮ್ಮಾನಗಳ ಹೊನ್ನ ಶೂಲದಲ್ಲಿ ನಾಶವಾಗುತ್ತಿದ್ದಾರೆ ಎಂದರಲ್ಲದೆ ರಾಜಕಾರಣಿಗಳ ಸೋಗಲಾಡಿತನವನ್ನು ಕಟುವಾಗಿ ವಿಡಂಬಿಸಿದರು.[ಬಸವಣ್ಣ ಎಂದೆಂದಿಗೂ ಜಗತ್ತಿಗೆ ಜ್ಯೋತಿ: ಸಿದ್ದರಾಮಯ್ಯ]

ಇದೇ ಸಂದರ್ಭದಲ್ಲಿ ಮೂವರು ಮಹನೀಯರಿಗೆ 'ಬಸವ ಸಿರಿ' ಪುರಸ್ಕಾರ ಹಾಗೂ ಒಬ್ಬರಿಗೆ ನಾಗರಾಜ್ ಜಮಖಂಡಿ ಹೆಸರಿನಲ್ಲಿ ನೀಡಲಾಗುವ 'ಸುದ್ದಿ ಸಿರಿ' ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

Basava Jayanti Celebration and Basava Siri Award ceremony vlyvedike

ಬಸವ ಸಿರಿ ಪ್ರಶಸ್ತಿ: ಪರಿಸರವಾದಿ ಶ್ರೀಮತಿ ಸಾಲುಮರದ ತಿಮ್ಮಕ್ಕ, ಚಿತ್ರದುರ್ಗದ ಉದ್ಯಮಿ ಹಾಗೂ ಪ್ರಗತಿಪರ ಕೃಷಿಕ ಜಿಎಸ್ ಮಂಜುನಾಥ್ ಮತ್ತು ಸಂಶೋಧಕ ಮಳಲಿಗೌಡ ಇವರಿಗೆ ಬಸವ ಸಿರಿ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿದ ಜಿಎಸ್ ಮಂಜುನಾಥ್ ಮಾತನಾಡಿ ರೈತರು ತಮ್ಮ ಉನ್ನತಿಗಾಗಿ ಅಳವಡಿಸಿಕೊಳ್ಳಬೇಕಾದ ಕೃಷಿ ವಿಧಾನಗಳ ಕುರಿತು ಬಹಳ ಉಪಯುಕ್ತವಾದ ಮಾತುಗಳನ್ನು ಪ್ರಸ್ತಾಪಿಸಿದರಲ್ಲದೆ ನಗರಗಳಲ್ಲಿ ಪರಿಸರ ಜಾಗೃತಿ ಹೆಚ್ಚಬೇಕಿದೆ ಎಂದು ತಿಳಿಸಿದರು.[ವಚನಗಳ ವಿಶಿಷ್ಟ ಸಂಗ್ರಹವಿರುವ ವೆಬ್ ತಾಣ]

ಹಾಗೆಯೇ ಸಂಶೋಧಕ ಹಾಗೂ ಸಾಹಿತಿ ಮಳಲಿಗೌಡ ನಾಡಿನಲ್ಲಿ ಒಂದೆಡೆ ಬರಗಾಲ ತಾಂಡವವಾಡುತ್ತಿದ್ದರೆ ಇನ್ನೊಂದು ವರ್ಗದ ಜನತೆ ಅಕ್ಷಯ ತೃತೀಯದ ಹೆಸರಿನಲ್ಲಿ ಏಳೆಂಟು ಕ್ವಿಂಟಾಲ್‍ಗಟ್ಟಲೇ ಚಿನ್ನ ಖರೀದಿಸಿರುವುದು ವಿಪರ್ಯಾಸ ಎಂದು ನುಡಿದರು. ಜನರಲ್ಲಿ ಮೌಢ್ಯ ತಂದೊಡ್ಡುತ್ತಿರುವ ಅನಾಹುತಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಪತ್ರಕರ್ತ ಬಿಪಿ ಮಲ್ಲಪ್ಪನವರು 'ಸುದ್ದಿ ಸಿರಿ' ಪ್ರಶಸ್ತಿಗೆ ಭಾಜನರಾದರು.[ಡೌನ್ಲೋಡ್ ಮಾಡ್ಕೊಳಿ: ವಚನಗಳು ಆಗಲಿ ನಿಮ್ಮ ಕರಗತ]

ವೀರಶೈವ ವೇದಿಕೆಯಿಂದ ಬಸವ ಸಿರಿ ಪ್ರಶಸ್ತಿ ಪ್ರದಾನ

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮಿಗಳು ಆಶೀರ್ವಚನ ನೀಡಿ ಬ್ರಾಹ್ಮಣ್ಯ ಮತ್ತು ವೈದಿಕ ಸಂಪ್ರದಾಯಗಳು ದಲಿತರನ್ನು ತಲೆಮಾರುಗಳಿಂದಲೂ ಅಪಾರವಾಗಿ ಶೋಷಿಸುತ್ತಾ ಬಂದಿವೆ. ಎಲ್ಲ ಬಗೆಯ ಸಾಮಾಜಿಕ ಅಸಮಾನತೆ ತಾರತಮ್ಯಗಳಿಗೆ ಬಸವಣ್ಣನ ವಿಚಾರಗಳ ಅಳವಡಿಕೆಯೇ ಪರಿಹಾರ ಎಂಡೌನ್ಲೋಡ್ ಮಾಡ್ಕೊಳಿ: ವಚನಗಳು ಆಗಲಿ ನಿಮ್ಮ ಕರಗತದು ಅನೇಕ ದೃಷ್ಟಾಂತಗಳ ಮೂಲಕ ಅವರು ವಿವರಿಸಿದರು.

ವೇದಿಕೆಯಲ್ಲಿ ಹಾಜರಿದ್ದ ವಿಧಾನ ಪರಿಷತ್ ಸದಸ್ಯ ಅಶ್ವಥ ನಾರಾಯಣ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಕೂಡಾ ಅನೇಕ ವಿಷಯಗಳನ್ನು ಸಭೆಯಲ್ಲಿ ಹಂಚಿಕೊಂಡರು. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್ ನಾರಾಯಣ, ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗಿರಿ ಎಂ ಜಾನಕಲ್, ಸ್ಟಾರ್ಸ್ ಕ್ರಿಕೆಟ್ ಲೀಗ್ ನಾಯಕ ಗಜಾನನ ಎಸ್ ಕಲ್ಬುರ್ಗಿ, ವೀರಶೈವ ಲಿಂಗಾಯತ ಯುವ ವೇದಿಕೆ ಕಲ್ಬುರ್ಗಿ ಜಿಲ್ಲಾಧ್ಯಕ್ಷ ರವಿ ಪಾಟೀಲ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಜಿಎಸ್ ಯುಧಿಷ್ಠಿರ ಇನ್ನೂ ಅನೇಕ ಗಣ್ಯರು ಹಾಜರಿದ್ದರು. ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರಿ ಕವನ ಬಸವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಇಂಚರ ಪ್ರವೀಣ್ ಇವರಿಂದ ವಚನ ಗಾಯನ ನಡೆಯಿತು. ಆಗಮಿಸಿದ್ದ ಗಣ್ಯರಿಗೆ ಹಾಗೂ ವೇದಿಕೆಯ ಪದಾಧಿಕಾರಿಗಳಿಗೆ ಗೌರವ ಸಮರ್ಪಣೆಯ ಮೂಲಕ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.

ಹೆಚ್ಚಿನ ಮಾಹಿತಿ ಸಂಪರ್ಕಿಸಿ: ಶರಣ ಪ್ರಶಾಂತ್ ಕಲ್ಲೂರ್, ರಾಜ್ಯ ಅಧ್ಯಕ್ಷರು, ವೀರಶೈವ ಲಿಂಗಾಯತ ಯುವ ವೇದಿಕೆ (ರಿ.) 92424 44444 / 080 6455 5554

English summary
Veerashaiva Lingayat Yuva Vedike led by Prashanth Kallur celebrated Basava Jayanti at Gandhi Bhavan, Bengaluru. Vedike conferred 'Basava Siri' award to three eminent personalities of the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X