ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

50 ಲಕ್ಷದಷ್ಟು ನಿಷೇಧಿತ ನೋಟು ವಶಕ್ಕೆ ಪಡೆದ ಅಶೋಕ ನಗರ ಪೊಲೀಸರು

ಬೆಂಗಳೂರಿನ ಅಶೋಕನಗರ ಪೊಲೀಸರು ಭರ್ಜರಿ ಬೇಟೆಯನ್ನೇ ಆಡಿದ್ದಾರೆ. ನಿಷೇಧಿತ 500, 1000ದ ನೋಟಿನ 50 ಲಕ್ಷದಷ್ಟು ಹಣ ಇಟ್ಟುಕೊಂಡಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಆನಂದ ಜೈನ್, ವಿನಾಯಕ ಪ್ರಸಾದ್ ಬಂಧಿತರು.

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 18: ನಗರ ಅಪರಾಧ ವಿಭಾಗದ ಪೊಲೀಸರು ಅಶೋಕನಗರ ಪೊಲೀಸ್ ಠಾಣಾ ಸರಹದ್ದಿನ ಎಸ್ ಸ್ಟ್ರೀಟ್ ನಂಜಪ್ಪ ಸರ್ಕಲ್, ಲಾಂಗಪೋರ್ಡ್ ಲಿಂಕ್ ರಸ್ತೆ ಮನೆಯೊಂದಲ್ಲಿ ಇಬ್ಬರನ್ನು ಬಂಧಿಸಿ, ಅಮಾನ್ಯಗೊಂಡ 500, 1000 ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಆನಂದ್ ಜೈನ್, ವಿನಾಯಕ್ ಪ್ರಸಾದ್ ಬಂಧಿತರು. ಇವರಿಬ್ಬರಿಂದ 50 ಲಕ್ಷದಷ್ಟು ನಿಷೇಧಿಸಲಾದ 500, 1000 ನೋಟುಗಳನ್ನು ಮತ್ತು ಮೊಬೈಲ್ ಫೋನ್ ಗಳನ್ನು ವಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಸಿಸಿಬಿ ಎಸಿಪಿ ಎಚ್ ಎಂ ಮಹಾದೇವಪ್ಪ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಗಳಾದ ಡಾ.ಬಿಎಸ್ ಸುಧಾಕರ್, ಎಸ್ ರಾಜು ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.[ಉಡುಪಿ: ಚಿನ್ನದ ವ್ಯಾಪಾರಿಯ ದರೋಡೆ]

Banned notes worth of 50 lakhs seized by Ashokanagar police

ನಕಲಿ ವುಡ್ ಕಟರ್ ವಶ
ಸಿಸಿಬಿ ಪೊಲೀಸರು ಸಿಟಿ ಮಾರ್ಕೆಟ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ರಾಜ್ ಶ್ರೀ ಟೂಲ್ಸ್ ಎಂಬ ಅಂಗಡಿಯಲ್ಲಿ ಪ್ರತಿಷ್ಠಿತ ಬ್ರಾಂಡಿನ ಹೆಸರಿನಲ್ಲಿ ಕಳಪೆ ಗುಣಮಟ್ಟದ, ನಕಲಿಯಾಗಿ ತಯಾರು ಮಾಡಿದ ವುಡ್‌ಕಟರ್ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದ ಜಗದೀಶ್ ಬಿನ್ ಮುದ್ದಾರಾಮ್ ಎಂಬಾತನನ್ನು ಬಂಧಿಸಲಾಗಿದೆ.[ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದವನು ಕಂಬಿ ಹಿಂದೆ]

ಆತನಿಂದ ನಕಲಿಯಾಗಿ ತಯಾರು ಮಾಡಿದ್ದ ಒಟ್ಟು ಒಟ್ಟು 4.59 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Banned notes worth of 50 lakhs seized by Bengaluru Ashokanagar police. Anand jain and Vinayak prasad-Two arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X