ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿ ಬಿ.ಕಾಂ ಪರೀಕ್ಷೆ ಮುಂದೂಡಿಕೆ

|
Google Oneindia Kannada News

ಬೆಂಗಳೂರು, ಮೇ 5 : ಮಂಗಳವಾರ ಮಧ್ಯಾಹ್ನ ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. 24 ಅಂಕದ ಪ್ರಶ್ನೆಗಳು ಬಹಿರಂಗವಾದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ವಿವಿ ಕುಲಪತಿ ಪ್ರೊ.ತಿಮ್ಮೇಗೌಡ ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮತ್ತು ಮೇ 7 ಮತ್ತು 9ರಂದು ನಡೆಯಬೇಕಿದ್ದ ಬಿ.ಕಾಂ 6ನೇ ಸೆಮಿಸ್ಟರ್‌ನ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇಂದು ಸಂಜೆ ಪರೀಕ್ಷೆ ದಿನಾಂಕದ ವೇಳಾಪಟ್ಟಿ ಪ್ರಕಟವಾಗಲಿದೆ. ರಿಪೀಟರ್ಸ್ ವಿದ್ಯಾರ್ಥಿಗಳಿಗೆ ವೇಳಾಪಟ್ಟಿಯಂತೆ ಇಂದು ಪರೀಕ್ಷೆ ನಡೆಯಲಿದೆ. [ಬೆಂಗಳೂರು ವಿವಿ ವಿಭಜನೆಗೆ ಸಿದ್ದು ಸಂಪುಟ ಅಸ್ತು!]

Bangalore University

ಬಿ.ಕಾಂ 6ನೇ ಸೆಮಿಸ್ಟರ್‌ನ ಅಕೌಂಟೆನ್ಸಿ ಮತ್ತು ಟ್ಯಾಕ್ಸ್ ಪತ್ರಿಕೆಯ 16 ಮತ್ತು 8 ಅಂಕಗಳ ಪ್ರಶ್ನೆಗಳು ಸೋಮವಾರ ರಾತ್ರಿಯಿಂದ ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದವು. ಮಂಗಳವಾರ ಬೆಳಗ್ಗೆ ಇದನ್ನು ಗಮನಿಸಿದ ವಿವಿ ಆಡಳಿತ ಮಂಡಳಿ ಪ್ರಶ್ನೆಗಳನ್ನು ಪರಿಶೀಲಿಸಿದ್ದು, ಪತ್ರಿಕೆಯಲ್ಲಿರುವ ಪ್ರಶ್ನೆಗಳೇ ಬಹಿರಂಗಗೊಂಡಿವೆ ಎಂದು ಖಚಿತಪಡಿಸಿದೆ. [ಬೆಂಗಳೂರು ವಿಶ್ವವಿದ್ಯಾಲಯ ಒಡೆದು ಮೂರು ಭಾಗ]

ಪ್ರಶ್ನೆಗಳು ಬಹಿರಂಗವಾದ ಹಿನ್ನಲೆಯಲ್ಲಿ ಇಂದು ಮತ್ತು ಮೇ 7, 9ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇಂದು ಸಂಜೆ ಮುಂದಿನ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಪ್ರೊ.ತಿಮ್ಮೇಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

English summary
Bangalore University has postponed 6th semester B.Com examinations. Exams scheduled to be held on May 5th 2 pm and May 7th and 9th. New time table will announced today evening said, Prof. B. Thimme Gowda VC of Bangalore University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X