ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಗಿಯ ಬುಡಕ್ಕೆ ಬಿಸಿನೀರು ಬಿಟ್ಟು ಸುಟ್ಟ ವೈದ್ಯರು

|
Google Oneindia Kannada News

ಬೆಂಗಳೂರು, ಅ. 28: ಆಪರೇಷನ್ ಗೆ ಒಳಗಾಗಿದ್ದ ವ್ಯಕ್ತಿಗೆ ನಗರದ ಶಂಕರಪುರಂ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ 'ಬೀಸಿನೀರು' ಚಿಕಿತ್ಸೆ ನೀಡಿದ್ದಾರೆ. ಶಂಕರಪುರಂನ ರಂಗದೊರೈ ಆಸ್ಪತ್ರೆಯಲ್ಲಿ ಇಂಥ ಎಡವಟ್ಟೊಂದು ನಡೆದಿದೆ.

ಗುಹ್ಯ ರೋಗ ಚಿಕಿತ್ಸೆಗೆಂದು ದಾಖಲಾಗಿದ್ದ ಶ್ರೀನಗರ ನಿವಾಸಿ ರಾಜೇಂದ್ರ ಪ್ರಸಾದ್ ಅವರನ್ನು ಕುದಿಯುವ ನೀರಲ್ಲಿ ಕುಳ್ಳಿರಿಸಲಾಗಿದೆ. ಬೆಚ್ಚಗಿನ ನೀರಲ್ಲಿ ಕುಳ್ಳಿರಸಬೇಕಾದ ಸಿಬ್ಬಂದಿ ಕುದಿಯುವ ನೀರಲ್ಲಿ ರಾಜೇಂದ್ರ ಪ್ರಸಾದ್ ಅವರನ್ನು ಕುಳ್ಳಿರಿಸಿದ್ದು ಅವರ ಬೆನ್ನು ಮತ್ತು ಸೊಂಟದ ಭಾಗ ಸಂಪೂರ್ಣವಾಗಿ ಸುಟ್ಟುಹೋಗಿದೆ.[ಸಂಜಯ ಗಾಂಧಿ ಆಸ್ಪತ್ರೆ ಎಲ್ಲ ವೈದ್ಯರು ಕೆಲಸಕ್ಕೆ ಹಾಜರ್]

bangalore

ಕಳೆದ ಒಂದು ತಿಂಗಳ ಹಿಂದೆ ರಾಜೇಂದ್ರ ಪ್ರಸಾದ್ ಚಿಕಿತ್ಸೆಗೆಂದು ದಾಖಲಾಗಿದ್ದರು. ಅಂತೆಯೇ ಅವರಿಗೆ ಶಸ್ತ್ರ ಚಿಕಿತ್ಸೆ ಕೂಡಾ ಮಾಡಲಾಗಿತ್ತು. ಆದರೆ ಎಷ್ಟೇ ದಿನ ಕಳೆದರೂ ಶಸ್ತ್ರ ಚಿಕಿತ್ಸೆ ಗಾಯ ವಾಸಿಯಾಗಿರಲಿಲ್ಲ.

ಇತ್ತೀಚೆಗೆ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ತುಂಬಾ ಕೆಟ್ಟ ವರ್ತನೆ ತೋರಿಸುತ್ತಿದ್ದು ಸೋಮವಾರ ರಾತ್ರಿ ನಮ್ಮನ್ನು ಏಕಾಏಕಿ ಆಸ್ಪತ್ರೆಯಿಂದ ಹೊರ ಹಾಕಲು ಪ್ರಯತ್ನಿಸಿದ್ದಾರೆ. ನಾವು ಅದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಈ ರೀತಿ ಮಾಡಿದ್ದಾರೆ ಎಂದು ರಾಜೇಂದ್ರ ಪ್ರಸಾದ್ ಕುಡುಂಬದವರು ಆರೋಪಿಸಿದ್ದಾರೆ.

ಅಮಾನವೀಯ ಘಟನೆಯಿಂದ ರಾಜೇಂದ್ರ ಪ್ರಸಾದ್ ಸಂಪೂರ್ಣ ಜರ್ಜರಿತರಾಗಿ ಹೋಗಿದ್ದಾರೆ. ಅವರಿಗೆ ನಿರಾತಂಕವಾಗಿ ಮಲುಗಲು ಸಾಧ್ಯವಾಗುತ್ತಿಲ್ಲ. ಸುಟ್ಟ ಗಾಯಗಳಿಂದ ಪರಿತಪಿಸುತ್ತಿದ್ದಾರೆ. [ವಿಚಾರಣಾಧೀನ ಕೈದಿ ಪರಪ್ಪನ ಅಗ್ರಹಾರದಲ್ಲಿ ಆತ್ಮಹತ್ಯೆ]

ಡಾ. ರಾಜ್ ಕುಮಾರ್ ಸ್ಪಷ್ಟನೆ
ರೋಗಿಯನ್ನು ಸರಿಯಾಗಿಯೇ ಆರೈಕೆ ಮಾಡಲಾಗಿದೆ. ಆದರೆ ಸಿಬ್ಬಂದಿ ತಪ್ಪಿನಿಂದ ಅವಘಡ ಸಂಭವಿಸಿದೆ. ಅವರಿಗೆ ಉಳಿದ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆಯ ವೈದ್ಯ ರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ರೋಗಿ ಮನೆಯವರು ಇದನ್ನೇ ಇಟ್ಟುಕೊಂಡು ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಸೈಟ್ ಮತ್ತು 20 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

English summary
Bangalore: Rajendra Pradsad who admitted to Rangadorai hospital, shankarapurm. He under go a operation by the doctors before one month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X