ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಲೆ ಏರಿಕೆ ವಿರೋಧಿಸಿ ಇಂಟರ್ನೆಟಿಗೆ ಬಹಿಷ್ಕಾರ

By Mahesh
|
Google Oneindia Kannada News

ಬೆಂಗಳೂರು, ಅ.14: ದೇಶದ ಸಿಲಿಕಾನ್ ವ್ಯಾಲಿ ಎನಿಸಿರುವ ಬೆಂಗಳೂರಿನಲ್ಲಿ ಸಣ್ಣದೊಂದು ಕಿಡಿ ಹತ್ತಿಕೊಂಡಿದೆ. ಮೊಬೈಲ್ ಇಂಟರ್ನೆಟ್ ಬೆಲೆ ಏರಿಕೆ ವಿರೋಧಿಸಿ ಸೇವಾದಾರರಿಗೆ ಪಾಠ ಕಲಿಸಲು ಇಂಟರ್ನೆಟ್ ಬಹಿಷ್ಕರಿಸಲು ಗ್ರಾಹಕರು ನಿರ್ಧರಿಸಿದ್ದಾರೆ.

ಇತ್ತೀಚೆಗೆ ಪೈಪೋಟಿಗೆ ಬಿದ್ದಂತೆ ಏರ್ ಟೆಲ್, ಏರ್ ಸೆಲ್, ಡೊಕೊಮೋ, ವೊಡಾಫೋನ್ ಮುಂತಾದ ಸಂಸ್ಥೆಗಳು 3ಜಿ ನೆಟ್ವರ್ಕ್ ದರವನ್ನು ಏರಿಕೆ ಮಾಡಿದ್ದವು. ಈ ಬಗ್ಗೆ ಪ್ರಶ್ನಿಸಿದಾಗ ಈಗಿನ ಮಾರುಕಟ್ಟೆ ಸ್ಥಿತಿಯಲ್ಲಿ ದರ ಹೆಚ್ಚಳ ಅನಿವಾರ್ಯ ಎಂದು ಕೆಲ ಕಂಪನಿಗಳು ಉತ್ತರಿಸಿವೆ, ಇನ್ನೂ ಕೆಲ ಕಂಪನಿಗಳು ಉತ್ತರಿಸುವ ಗೋಜಿಗೆ ಹೋಗಿಲ್ಲ.

ಇದಾದ ಬಳಿಕ ಫೇಸ್ ಬುಕ್ ನಲ್ಲಿ ದರ ಏರಿಕೆ ವಿರುದ್ಧ ಅಭಿಯಾನ ಆರಂಭಗೊಂಡಿದೆ. ನಂತರ ಇದು ವ್ಯಾಟ್ಸಪ್, ಟ್ವಿಟ್ಟರ್ ಇನ್ನಿತರ ಸಾಮಾಜಿಕ ಜಾಲ ತಾಣಗಳಿಗೂ ಹಬ್ಬಿದೆ.ಇಂಟರ್ನೆಟ್ ದರ ಏರಿಕೆ ಬಗ್ಗೆ ಗೊಣಗಾಡುತ್ತಿದ್ದ ಬೆಂಗಳೂರಿನ ಅನೇಕ ಗ್ರಾಹಕರು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ ತಮ್ಮ ಕಷ್ಟ ನಷ್ಟ ಹೇಳಿಕೊಂಡಿದ್ದಾರೆ. ಕೊನೆಗೆ ಅಕ್ಟೋಬರ್ 31 ರಂದು ಇಂಟರ್ನೆಟ್ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

Bangalore users protest hiked rates Net boycott likely on October 31

ಏನಿದು ಸಮಸ್ಯೆ?: ಕರ್ನಾಟಕದ ಎಲ್ಲಾ ಪ್ರಮುಖ ಟೆಲಿಕಾಂ ಸಂಸ್ಥೆಗಳು ಇಂಟರ್ನೆಟ್ ಪ್ಯಾಕ್ ದರ(1ಜಿಬಿ) ಏರಿಕೆ ಮಾಡಿದ್ದಾರೆ. 155ರು ಇದ್ದ ದರವನ್ನು ಏಕಾಏಕಿ 200 ರುಗೆ ಏರಿಸಿದ್ದಾರೆ. ಇದನ್ನು ವಿರೋಧಿಸಿ ಅಕ್ಟೋಬರ್ 1 ರಿಂದ ಅನೇಕ ಬಳಕೆದಾರರು ಫೇಸ್ ಬುಕ್ ನಲ್ಲಿ ತಮ್ಮ ಗೋಳು ತೋಡಿಕೊಂಡಿದ್ದರು. ಇತರೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಮೊಬೈಲ್ ಇಂಟರ್ನೆಟ್ ದರವನ್ನು ಶೇ 33ರಿಂದ ಶೇ 100ರಷ್ಟು ಏರಿಕೆ ಮಾಡಲಾಗಿದೆಯಂತೆ.

ಸೆಪ್ಟೆಂಬರ್ ತಿಂಗಳಿನಲ್ಲಿ 1 ಜಿಬಿ ಸ್ಪೇಸ್ ಇಂಟರ್ನೆಟ್ ಗೆ 151 ರು ನೀಡುತ್ತಿದ್ದೆ ಅದರೆ, ಈಗ 155 ರು ಗೆ ಕೇವಲ 750 ಎಂಬಿ ಸಿಗುತ್ತಿದೆ ಎಂದು ಗುರುರಾಜ್ ಹೇಳಿದ್ದಾರೆ.

ಬೇರೆ ಬೇರೆ ಸಂಸ್ಥೆಗಳು ಬೇರೆ ಬೇರೆ ದರ ಪಟ್ಟಿಯಿದೆ. ತಿಂಗಳಿಗೆ 148 ರುಗೆ 1 ಜಿಬಿ ಇಂಟರ್ನೆಟ್ ಪ್ಯಾಕೇಜ್ ಕೂಡಾ ಇದೆ. ಇನ್ನೊಂದು ಸಂಸ್ಥೆ 150 ರು ಗೆ 500 ಎಂಬಿ ಮಾತ್ರ ನೀಡುತ್ತಿದೆ. ಒಟ್ಟಾರೆ ಕೊಟ್ಟ ಕಾಸಿಗೆ ತಕ್ಕ ಕಜ್ಜಾಯ ಇಲ್ಲಿ ಸಿಗುತ್ತಿಲ್ಲ ಎಂಬ ಕೊರಗು ಈಗ ಪ್ರತಿಭಟನೆ ರೂಪ ಪಡೆದಿದೆ.

ಇಂಟರ್ನೆಟ್ ದರ ಏರಿಕೆ ವಿರೋಧಿಸಿ ಅ.31ರಂದು ನೆಟ್ ಬಹಿಷ್ಕಾರ ಮಾಡ್ತೀರಾ? ಕ್ಲಿಕ್ ಮಾಡಿ ತಿಳಿಸಿ

English summary
Bangalore users are calling for a boycott of internet services on October 31 in a bid to urge the service providers to slash the 3G Internet rates. the mobile internet rates have gone from 33% to 100% between June and October in the Karnataka circle sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X