ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುದುರೆ ಫಾರ್ಮ್ ಮಧ್ಯದಲ್ಲೇ ರೈಲು ಮಾರ್ಗ !

By Mahesh
|
Google Oneindia Kannada News

ಬೆಂಗಳೂರು, ನ.12: ಕೊನೆಗೂ ಹಾಸನ- ಬೆಂಗಳೂರು ಬ್ರಾಡ್ ಗೇಜ್ ರೈಲು ಮಾರ್ಗಕ್ಕೆ ಸಿದ್ದರಾಮಯ್ಯ ಅವರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂಲ ಯೋಜನಾ ವರದಿಯಂತೆ ಕುಣಿಗಲ್ ನಲ್ಲಿರುವ ಕುದುರೆ ಫಾರ್ಮ್ ಮಧ್ಯದಲ್ಲೇ ರೈಲು ಮಾರ್ಗ ಹಾದು ಹೋಗಲಿದೆ ಎಂದು ಮಾಹಿತಿ ಮತ್ತು ಮೂಲಸೌಕರ್ಯ ಖಾತೆ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಹಾಸನ- ಬೆಂಗಳೂರು ಬ್ರಾಡ್ ಗೇಜ್ ರೈಲು ಮಾರ್ಗ ಕಾಮಗಾರಿಗೆ ಕುಣಿಗಲ್ ನಲ್ಲಿರುವ ಕುದುರೆ ಫಾರ್ಮ್ ಅಡ್ಡವಾಗಿತ್ತು. ವಿಜಯ್ ಮಲ್ಯ ಸೇರಿದಂತೆ ಖ್ಯಾತನಾಮರ ಒಡೆತನ ಹೊಂದಿರುವ ಐತಿಹಾಸಿಕ ಕುದುರೆಗಳ ಆಶ್ರಯ ತಾಣ ವಿವಾದದ ಕೇಂದ್ರ ಬಿಂದುವಾಗಿತ್ತು. ಸುಮಾರು 350 ಎಕರೆ ವಿಸ್ತೀರ್ಣ ಹೊಂದಿರುವ ಈ ಪ್ರದೇಶದಲ್ಲಿ ಸುಮಾರು 1.05 ಕಿ.ಮೀ ವ್ಯಾಪ್ತಿಯಲ್ಲಿ ರೈಲು ಮಾರ್ಗ ಹಾದು ಹೋಗಲಿದೆ ಎಂದು ಸಂತೋಷ್ ಲಾಡ್ ಹೇಳಿದರು.

ಶ್ರವಣ ಬೆಳಗೊಳ ಮಾರ್ಗವಾಗಿ ಹಾಸನ-ಬೆಂಗಳೂರು ನಡುವಿನ 166 ಕಿ.ಮೀ ದೂರದ ಈ ಮಾರ್ಗಕ್ಕೆ 413 ಕೋಟಿ ರು ಖರ್ಚಾಗಲಿದೆ. 2006ರಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಈ ಯೋಜನೆಗೆ ಹಸಿರು ನಿಶಾನೆ ತೋರಲಾಗಿತ್ತು.

Finally, nod for Bangalore-Hassan rail line through Kunigal Stud Farm

ಪ್ರಸ್ತಾವಿತ ರೈಲು ಮಾರ್ಗಕ್ಕೆ ವಿಜಯ್ ಮಲ್ಯ ಭಾರಿ ಪ್ರತಿರೋಧ ವ್ಯಕ್ತಪಡಿಸಿದ್ದರು ಬಹುಬೆಲೆ ಬಾಳುವ ಕುದುರೆಗಳ ವಂಶಾವೃದ್ಧಿ ಸೇರಿದಂತೆ ಅವುಗಳ ಆರೈಕೆ ಇಲ್ಲಿ ನಡೆಯುತ್ತದೆ. ರೈಲು ಸಂಚಾರದಿಂದ ಇಲ್ಲಿನ ವಾತಾವರಣದ ಚಿತ್ರಣವೇ ಹಾಳಾಗುತ್ತದೆ. ಕುದುರೆಗಳಿಗೆ ತೊಂದರೆ ಉಂಟಾಗಲಿದೆ ಎಂದಿದ್ದಾರೆ.

ಸ್ಥಳೀಯ ರೈತರು ಕೂಡಾ ತಮ್ಮ ಜಮೀನು ಕಳೆದುಕೊಳ್ಳುವ ಭೀತಿಯಿಂದ ಯೋಜನೆ ಅಡ್ಡಿಪಡಿಸಿದ್ದರು. ಕುದುರೆ ಫಾರ್ಮ್ ನಲ್ಲಿ ಸುರಂಗ ನಿರ್ಮಿಸುವ ಯೋಜನೆ ಕೂಡಾ ಇತ್ತು. ಆದರೆ, ಕಾರ್ಯಗತವಾಗಲಿಲ್ಲ. ಈಗ ಸರ್ಕಾರದ ಒಪ್ಪಿಗೆ ಸಿಕ್ಕಿರುವುದರಿಂದ ರೈಲ್ವೆ ಇಲಾಖೆ ಕಾಮಗಾರಿ ಆರಂಭಿಸುವ ನಿರೀಕ್ಷೆಯಿದೆ.

ವಿವಿಧ ರೈಲು ಯೋಜನೆಗಳಿಗೆ ರಾಜ್ಯ ಸರ್ಕಾರ ಸುಮಾರು 650 ಕೋಟಿ ರು ನೀಡಿದೆ. ವರ್ಷಕ್ಕೆ 100 ಕಿ.ಮೀ ಹೊಸ ಮಾರ್ಗ ನಿರ್ಮಾಣ ನಡೆಯುತ್ತಿದೆ. ಇದನ್ನು 200 ಕಿ.ಮೀಗೆ ಏರಿಸಲು ಮನವಿ ಸಲ್ಲಿಸಲಾಗಿದೆ ಎಂದು ಸಂತೋಷ್ ಲಾಡ್ ಹೇಳಿದರು.

ಸರ್ಕಾರದ ನಿರ್ಧಾರಕ್ಕೆ ಇನ್ನೂ ಉದ್ಯಮಿ ವಿಜಯ್ ಮಲ್ಯ ಕಡೆಯಿಂದ ಪ್ರತಿಕ್ರಿಯೆ ಹೊರ ಬಂದಿಲ್ಲ. ಕಿಂಗ್ ಫಿಷರ್ ಡರ್ಬಿ ಸೇರಿದಂತೆ ಬೆಂಗಳೂರಿನ ಕುದುರೆ ಜೂಜಿನಲ್ಲಿ ಮಲ್ಯ ಅವರದ್ದು ಭಾರಿ ಹೂಡಿಕೆ ಇದೆ. ಹಲವು ರೇಸ್ ಗಳ ಪ್ರಾಯೋಜಕರು, ಆಯೋಜಕರು ಆಗಿದ್ದಾರೆ. ಕುದುರೆಗಳ ರಕ್ಷಣೆಗಾಗಿ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

English summary
The decks have been cleared for the much-delayed Bangalore-Hassan new broad gauge rail line, with the State government deciding to stick to the original alignment and approving the tracks to pass through Kunigal Stud Farm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X