ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕ್ಲಬ್ ನಿಂದ ಕರ್ನಾಟಕ ಸರ್ಕಾರಕ್ಕೆ ಸವಾಲ್

By Mahesh
|
Google Oneindia Kannada News

ಬೆಂಗಳೂರು ಜುಲೈ 22: ನಗರದ ಐತಿಹಾಸಿಕ, ಶ್ರೀಮಂತ ಕ್ಲಬ್ ಗಳಲ್ಲಿ ಒಂದಾದ ಬೆಂಗಳೂರು ಕ್ಲಬ್ ಈಗ ಸರ್ಕಾರದ ಕೈವಶವಾಗುವ ಸಮಯ ಬಂದಿದೆ. ಆದರೆ, ಅಳಿದುಳಿರುವ ಒಂದು ವಾರದಲ್ಲಿ ಕ್ಲಬ್ ಅಸ್ತಿತ್ವ, ಮಾಲೀಕತ್ವ ಉಳಿಸಿಕೊಳ್ಳಲು ಕ್ಲಬ್ ಸದಸ್ಯರು ಸಿದ್ದರಾಗಿದ್ದು, ಸರ್ಕಾರದ ಆದೇಶವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.

ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಮಹೇಶ್‌ಬಾಬು ಅವರ ಆದೇಶದಂತೆ ಈ ವಾರದಲ್ಲೇ ಬೆಂಗಳೂರು ಕ್ಲಬ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಕ್ಲಬ್ ನ ಕಾರ್ಯದರ್ಶಿ ಕೆ.ಡಿ ಮೂರ್ತಿ ಅವರು ನಮಗೆ ಇನ್ನೂ ಆದೇಶದ ಪ್ರತಿ ಸಿಕ್ಕಿಲ್ಲ. ಬೆಂಗಳೂರು ಕ್ಲಬ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂದಿದ್ದಾರೆ. [ಸರ್ಕಾರದ ವಶಕ್ಕೆ ಐತಿಹಾಸಿಕ, ಶ್ರೀಮಂತ ಬೆಂಗಳೂರು ಕ್ಲಬ್]

Bangalore Club questions eviction order

ಕಾನೂನು ಹೋರಾಟ ಮುಂದುವರೆಯಲಿದೆ: ಬೆಂಗಳೂರು ಕ್ಲಬಿನ ವಿವಾದಿತ 13 ಎಕರೆ ಭೂಮಿ ಹಾಗೂ ಕ್ಲಬಿನ ಮಾಲೀಕತ್ವದ ಬಗ್ಗೆ ಬಂದಿರುವ ನೋಟಿಸ್ ಪ್ರಶ್ನಿಸಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಹಾಕಲಾಗಿದೆ. ಕಂದಾಯ ಇಲಾಖೆ ಈ ಜಮೀನಿನ ಮಾಲೀಕತ್ವ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಇನ್ನೂ ದಾಖಲೆ ಒದಗಿಸಬೇಕಿದೆ ಎಂದು ಕೆ.ಡಿ ಮೂರ್ತಿ ಹೇಳಿದ್ದಾರೆ. [ಬೆಂಗಳೂರು ಕ್ಲಬ್ಬಿಗೆ ಚರ್ಚಿಲ್ ಬಾಕಿ ಎಷ್ಟು ಗೊತ್ತೆ?]

1896ರಲ್ಲಿ ಸ್ಥಾಪನೆಯಾದ ಬೆಂಗಳೂರು ಯುನೈಟೆಡ್ ಸರ್ವೀಸ್ ಕ್ಲಬ್ ಮೊದಲಿಗೆ ಸೇನಾಧಿಕಾರಿಗಳ ಸೇವೆ ಬಳಕೆಯಾಗುತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸಾರ್ವಜನಿಕರಿಗೆ ಪ್ರವೇಶ ನೀಡಲಾಯಿತು. 19ನೇ ಶತಮಾನದ ಆರಂಭದಿಂದ ಇಲ್ಲಿ ತನಕ ಕ್ಲಬ್ ನ ಅಸ್ತಿತ್ವದ ಬಗ್ಗೆ ಇರುವ ಖಾತೆ (ಡೀಡ್), ಎಂಕ್ಬ್ರಾನ್ಸ್ ಸರ್ಟಿಫಿಕೇಟ್, ಆಸ್ತಿ ತೆರಿಗೆ ರಸೀತಿ ಹಾಗೂ ಇನ್ನಿತರ ವಿವರಗಳನ್ನು ಕೋರ್ಟಿಗೆ ಈಗಾಗಲೇ ಸಲ್ಲಿಸಲಾಗಿದೆ ಎಂದು ಬೆಂಗಳೂರು ಕ್ಲಬ್ ಸದಸ್ಯರು ಹೇಳಿದ್ದಾರೆ.

2015ರ ಜುಲೈ 2 ರಂದು ಕ್ಲಬಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧಿಸಲಾಯಿತು. ಮದ್ಯ ಮಾರಾಟ ಲೈಸನ್ಸ್ ನವೀಕರಣ ಅರ್ಜಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ತಿರಸ್ಕರಿಸಿತು. ಮರುದಿನವೇ ಕ್ಲಬ್ಬಿನಲ್ಲಿದ್ದ ಎಲ್ಲಾ ಮದ್ಯವನ್ನು ಜಪ್ತಿ ಮಾಡಿ, ಅಬಕಾರಿ ಇಲಾಖೆ ವಶಕ್ಕೆ ನೀಡಲಾಯಿತು ಎಂದು ಕ್ಲಬ್ ನ ಹಾಲಿ ಅಧ್ಯಕ್ಷ ಜಿ.ವಿ ರಾಧಾಕೃಷ್ಣ ಹೇಳಿದರು. 13 ಎಕರೆಗೆ 5,662 ಕೋಟಿ ರೂ.ಗಿಂತ ಹೆಚ್ಚು ಬೆಲೆ ಇದೆ ಎಂದು ಅಂದಾಜಿಸಲಾಗಿದೆ.(ಐಎಎನ್ಎಸ್)

English summary
Bangalore Club questions eviction order issued by Mahesh Babu assistant commissioner, revenue department of Bengaluru North taluk. "We have recently filed a writ petition in the Karnataka High Court challenging a notice by the revenue department asking us to prove the land ownership," club secretary K.D Murthy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X