ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಯಪ್ಪನಹಳ್ಳಿಯಿಂದ-ನಾಯಂಡಹಳ್ಳಿಗೆ 35 ನಿಮಿಷದ ಪ್ರಯಾಣ

|
Google Oneindia Kannada News

ಬೆಂಗಳೂರು, ಏಪ್ರಿಲ್ 12 : ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ಜಂಕ್ಷನ್ ವರೆಗಿನ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ 10 ದಿನಗಳಲ್ಲಿ ಆರಂಭವಾಗಲಿದೆ. 18 ಕಿ.ಮೀ.ದೂರದ ಮಾರ್ಗದಲ್ಲಿ ಸಂಚಾರ ನಡೆಸಲು 40 ರೂ.ಪ್ರಯಾಣ ದರ ನಿಗದಿಯಾಗಲಿದೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಪೂರ್ವ-ಪಶ್ಚಿಮ ಕಾರಿಡಾರ್‌ನ 18 ಕಿ.ಮೀ ನೇರಳೆ ಮಾರ್ಗದ ಪರಿಶೀಲನೆ ನಡೆಸಿರುವ ರೈಲ್ವೆ ಸುರಕ್ಷತಾ ಆಯುಕ್ತ ಎಸ್.ಕೆ.ಮಿತ್ತಲ್ ಅವರು ಸಾರ್ವಜನಿಕ ಸಂಚಾರಕ್ಕೆ ಅನುಮತಿ ನೀಡಿದ್ದಾರೆ' ಎಂದು ಖರೋಲಾ ಹೇಳಿದ್ದಾರೆ. [ಚಿತ್ರಗಳು : ನಮ್ಮ ಮೆಟ್ರೋ ಸುರಂಗ ಮಾರ್ಗದ ನಿಲ್ದಾಣಗಳು]

'ಇನ್ನಷ್ಟು ಸಮರ್ಪಕ ಬೆಳಕು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಮಿತ್ತಲ್ ಸಲಹೆ ನೀಡಿದ್ದಾರೆ. ಈ ಕೆಲಸಗಳನ್ನು ಮಾಡಲು 3 ರಿಂದ 4 ದಿನಗಳು ಬೇಕು. 10 ರಿಂದ 15 ದಿನಗಳಲ್ಲಿ ಮಾರ್ಗದಲ್ಲಿ ಸಂಚಾರ ಆರಂಭಿಸಲಾಗುತ್ತದೆ' ಎಂದು ಖರೋಲಾ ತಿಳಿಸಿದ್ದಾರೆ. [ಮೆಟ್ರೋ 2ನೇ ಹಂತಕ್ಕೆ ಭೂ ಸ್ವಾಧೀನ ಆರಂಭ]

'ಮೆಟ್ರೋ ಸಂಚಾರ ಆರಂಭಿಸುವ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಉದ್ಘಾಟನಾ ಸಮಾರಂಭದ ದಿನಾಂಕ ನಿಗದಿಯಾಗಿಲ್ಲ. ಅತಿಥಿಗಳ ಪಟ್ಟಿಯನ್ನು ಸಿದ್ಧಪಡಿಸಿಲ್ಲ. ವಿಧಾನಸೌಧದ ಮುಂಭಾಗ ಅಥವ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಮಾರಂಭ ಆಯೋಜಿಸಲಾಗುತ್ತದೆ' ಎಂದು ಖರೋಲಾ ಮಾಹಿತಿ ನೀಡಿದ್ದಾರೆ. ಈ ಮಾರ್ಗದ ವಿಶೇಷತೆಗಳೇನು? ಚಿತ್ರಗಳಲ್ಲಿ ನೋಡಿ.....

18 ಕಿ.ಮೀ.ಉದ್ದದ ನೇರಳೆ ಮಾರ್ಗ

18 ಕಿ.ಮೀ.ಉದ್ದದ ನೇರಳೆ ಮಾರ್ಗ

ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ಜಂಕ್ಷನ್ ವರೆಗಿನ ಮಾರ್ಗ (ಪೂರ್ವ-ಪಶ್ಚಿಮ ಕಾರಿಡಾರ್‌) 18 ಕಿ.ಮೀ ನೇರಳೆ ಮಾರ್ಗದ ಪೈಕಿ 13 ಕಿ.ಮೀ.ಎತ್ತರಿಸಿದ ಮಾರ್ಗ ಮತ್ತು 5 ಕಿ.ಮೀ.ಸುರಂಗ ಮಾರ್ಗವಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ತನಕ ರೈಲು ಸುರಂಗ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ.

ಮೊದಲ ಸುರಂಗ ಮಾರ್ಗ

ಮೊದಲ ಸುರಂಗ ಮಾರ್ಗ

ದಕ್ಷಿಣ ಭಾರತದ ಮೊದಲ ಮೆಟ್ರೋ ಸುರಂಗ ಮಾರ್ಗ ಇಲ್ಲಿದೆ. ಸುರಂಗ ಮಾರ್ಗದಲ್ಲಿ 5 ನಿಲ್ದಾಣಗಳಿವೆ. ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣ ತಲುಪಲು 2 ನಿಮಿಷ ಸಾಕು. ಸುರಂಗದೊಳಗೆ 8 ರಿಂದ 10 ನಿಮಿಷಗಳ ಕಾಲ ರೈಲು ಸಂಚಾರ ನಡೆಸಲಿದೆ.

40 ರೂ. ಪ್ರಯಾಣ ದರ

40 ರೂ. ಪ್ರಯಾಣ ದರ

ಪೂರ್ವ-ಪಶ್ಚಿಮ ಕಾರಿಡಾನ ಮಾರ್ಗದಲ್ಲಿ ಸಂಚಾರ ನಡೆಸಲು ಸದ್ಯ 35 ನಿಮಿಷಗಳು ಬೇಕು. 18 ಕಿ.ಮೀ.ಮಾರ್ಗದಲ್ಲಿನ ಪ್ರಯಾಣಕ್ಕೆ 40 ರೂ. ದರ ನಿಗದಿಪಡಿಸಲಾಗುತ್ತದೆ. ಟೋಕನ್ ಬದಲು ಸ್ಮಾರ್ಟ್ ಕಾರ್ಡ್ ಬಳಸಿದರೆ ಶೇ 15ರಷ್ಟು ರಿಯಾಯಿತಿ ಸಿಗಲಿದೆ.

80 ಕಿ.ಮೀ. ವೇಗದಲ್ಲಿ ರೈಲು ಸಂಚಾರ

80 ಕಿ.ಮೀ. ವೇಗದಲ್ಲಿ ರೈಲು ಸಂಚಾರ

ಸುರಂಗ ಮಾರ್ಗದಲ್ಲಿ ಗಂಟೆಗೆ 90 ಕಿ.ಮೀ.ವೇಗದಲ್ಲಿ ರೈಲು ಸಂಚಾರ ನಡೆಸಲು ಬಿಎಂಆರ್‌ಸಿಎಲ್ ಮನವಿ ಮಾಡಿತ್ತು. ಗರಿಷ್ಠ 80 ಕಿ.ಮೀ.ವೇಗದಲ್ಲಿ ಸಂಚಾರ ನಡೆಸಲು ಒಪ್ಪಿಗೆ ಸಿಕ್ಕಿದೆ. ಕಡಿದಾದದ ತಿರುವುಗಳಲ್ಲಿ 30 ರಿಂದ 40 ಕಿ.ಮೀ.ವೇಗದಲ್ಲಿ ಮೆಟ್ರೋ ರೈಲು ಸಂಚಾರ ನಡೆಸಲಿದೆ.

ಮೆಟ್ರೋ ಮೊದಲ ಹಂತದ ಕಾಮಗಾರಿ

ಮೆಟ್ರೋ ಮೊದಲ ಹಂತದ ಕಾಮಗಾರಿ

ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ ಯೋಜನೆಯಲ್ಲಿ ಈ ಮಾರ್ಗ ಸೇರುತ್ತದೆ. ಸುರಂಗದಲ್ಲಿ ರೈಲು ಚಲಿಸುವುದು ಈ ಮಾರ್ಗದ ವಿಶೇಷವಾಗಿದೆ. ಐದು ವರ್ಷಗಳ ಹಿಂದೆ ಸುರಂಗ ಮಾರ್ಗದ ಕಾಮಗಾರಿ ಆರಂಭವಾಗಿತ್ತು. 2015ರ ಅಂತ್ಯದೊಳಗೆ ಈ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ ಎಂದು ಮೊದಲು ಗಡುವು ನೀಡಲಾಗಿತ್ತು. ನಂತರ ಗಡುವು ವಿಸ್ತರಣೆಯಾಗಿತ್ತು.

ಯಾವ-ಯಾವ ನಿಲ್ದಾಣಗಳು

ಯಾವ-ಯಾವ ನಿಲ್ದಾಣಗಳು

ನಮ್ಮ ಮೆಟ್ರೋ ನೇರಳೆ ಮಾರ್ಗದ ನಿಲ್ದಾಣಗಳ ವಿವರಗಳು. 18 ಕಿ.ಮೀ.ಮಾರ್ಗದ ನಿಲ್ದಾಣದಲ್ಲಿ ಸುರಂಗ ಮಾರ್ಗದಲ್ಲಿ 5 ನಿಲ್ದಾಣಗಳಿವೆ.

English summary
Operations on the East-West corridor Purple line of Namma Metro will finally commence in April. The Commissioner of Railway Safety (CRS) approved for commercial operation. 18 km Baiyappanahalli to Mysuru road will open for public in ten days said, Metro Rail Corporation Limited (BMRCL) managing director Pradeep Singh Kharola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X