ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ನದಿಗೆ ಬಿದ್ದ ಮಾನವನನ್ನು ರಕ್ಷಿಸಿದ ಆನೆಮರಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್, 18: ಒಬ್ಬ ವ್ಯಕ್ತಿ ಸಾಯುತ್ತಿದ್ದರೆ ನೋಡಿ ಮಜಾ ಮಾಡುವ ಹೃದಯ ಹೀನರು ನಮಗೆ ಸಾಕಷ್ಟು ಸಿಗುತ್ತಾರೆ. ಆದರೆ ಪ್ರಾಣಿಗಳು ಹಾಗಲ್ಲ, ತಮ್ಮ ಸಂಕುಲದ ಯಾವುದಾದರೂ ಪ್ರಾಣಿ ಅಪಾಯದಲ್ಲಿದ್ದರೆ ಕೂಡಲೇ ರಕ್ಷಣೆಗೆ ಧಾವಿಸುತ್ತವೆ.

ಕೇವಲ ತಮ್ಮ ಸಂಕುಲವಷ್ಟೇ ಅಲ್ಲ, ಇತರೆ ಜೀವಿಗಳ ಮೇಲೂ ಪ್ರಾಣಿಗಳು ಕನಿಕರತೋರುವುದುಂಟು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಆನೆಯೊಂದು ನದಿಗೆ ಬಿದ್ದ ವ್ಯಕ್ತಿಯೋರ್ವನನ್ನು ರಕ್ಷಿಸಿ ಮನುಷ್ಯರು ತೋರಬೇಕಾದ ಮಾನವೀಯತೆಯನ್ನು ಪ್ರಾಣಿಯೊಂದು ಮೆರೆದಿದೆ.[ನಾಯಿಗಾಗಿ ಮದುವೆ ಮುರಿದುಕೊಂಡ ಬೆಂಗಳೂರು ಹುಡುಗಿ]

Baby elephant rushes save drowning human friend

ಆನೆ ವ್ಯಕ್ತಿಯನ್ನು ರಕ್ಷಿಸುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಹೋಗುತ್ತಿದ್ದಾನೆ ಎಂದು ಭಾವಿಸಿದ ಈ ಆನೆ. ಕೂಡಲೇ ನೀರಿಗಿಳಿದು ಆತನ ರಕ್ಷಣೆಗಾಗಿ ಓಡಿ ಬಂದಿದೆ. ಈ ವಿಡಿಯೋವನ್ನು ಈಗ 2.2ಮಿಲಿಯನ್ ಸಂಖ್ಯೆ ಜನರು ವೀಕ್ಷಿಸಿದ್ದಾರೆ.

ಈ ಘಟನೆ ನಡೆದಿರುವುದು ಥಾಯ್ ಲ್ಯಾಂಡ್ ನ ಎಲಿಫೆಂಟ್ ನೇಚರ್ ಪಾರ್ಕ್ ನಲ್ಲಿ. ಪಾರ್ಕ್ ನಲ್ಲಿ ಆನೆಗಳಿಗೆ ಶಿಕ್ಷಣ ನೀಡುವ ಡೆರ್ರಿಕ್ ಎಂಬ ವ್ಯಕ್ತಿ ನಿಜಕ್ಕೆ ನದಿಯಲ್ಲಿ ಈಜಾಡುತ್ತಿದ್ದ. ಆದರೆ ಈ ಆನೆ ಮತ್ರ ತಮ್ಮ ಶಿಕ್ಷಕ ನೀರಿನಲ್ಲಿ ಕೊಚ್ಚು ಹೋಗುತ್ತಿದ್ದಾನೆ ಎಂದು ಭಾವಿಸಿ ರಕ್ಷಣೆ ಮಾಡಿದೆ.[ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಕೆಂಚಪ್ಪನ ರೋಚಕ ಕಥೆ!]

ನೀರಿಗಿಳಿದು ಜೋರಾಗಿ ಓಡಿ ಬಂದ ಆನೆ ತನ್ನ ಸೊಂಡಿಲು, ಮುಂಗಾಲುಗಳನ್ನು ಬಳಸಿ ಡೆರ್ರಿಕ್ ನನ್ನು ಮುಳುಗದಂತೆ ಗಟ್ಟಿಯಾಗಿ ಹಿಡಿದು ತಂದು ದಡ ಸೇರಿಸಿದೆ.

ತಮ್ಮ ಜತೆ ಮಮತೆಯಿಂದ ಇರುವ ಮನುಷ್ಯರನ್ನು ಆನೆಗಳು ಎಷ್ಟು ಭಾವುಕತೆಯಿಂದ ನೋಡಿಕೊಳ್ಳುತ್ತವೆ ಎಂಬುದನ್ನು ಈ ವಿಡಿಯೋ ಸಾಬೀತು ಪಡಿಸಿದೆ.

English summary
Baby Elephant Rushes To Save 'Drowning' Human Friend In Video Gone Viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X