ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಲೇಜಿಗೆ ಬಂಕ್ ಹಾಕಿದ್ರೆ ಎಸ್‌ಎಂಎಸ್ ಬರುತ್ತೆ!

|
Google Oneindia Kannada News

ಬೆಂಗಳೂರು, ಮೇ 30 : ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕ್ಲಾಸಿಗೆ ಬಂಕ್ ಹೊಡೆದರೆ ತಂದೆ-ತಾಯಿಗೆ ಮೊಬೈಲ್ ಮೂಲಕ ಸಂದೇಶ ರವಾನೆಯಾಗಲಿದೆ. ಹೌದು, ವಿದ್ಯಾರ್ಥಿಗಳ ಹಾಜರಾತಿ ಮತ್ತು ಇಂಟರ್‌ನಲ್ ಅಂಕಗಳ ಬಗ್ಗೆ ಪೋಕಷರಿಗೆ ಮಾಹಿತಿ ರವಾನಿಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.

ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಕುರಿತು ಮಾಹಿತಿ ನೀಡಿದರು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಮತ್ತು ಇಂಟರ್‌ನಲ್ ಅಂಕಗಳ ಕುರಿತು ಪೋಷಕರಿಗೆ ಎಸ್‌ಎಂಎಸ್ ಮತ್ತು ಈ ಮೇಲ್ ಕಳಿಸಲು ಚಿಂತಿಸಲಾಗುತ್ತಿದೆ ಎಂದರು. [ಸರ್ಕಾರಿ ಕಾಲೇಜಿನಲ್ಲಿ 5 ರೂ.ಗೆ ಬಿಸಿಯೂಟ]

mobile

'ಈ ಯೋಜನೆಯನ್ನು ಜಾರಿಗೊಳಿಸಲು ನಾವು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ಆದರೆ, ಬೆಂಗಳೂರು ನಗರದಲ್ಲಿರುವ ಕಾಲೇಜುಗಳಲ್ಲಿ ಈ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದು ದೇಶಪಾಂಡೆ ಅವರು ಹೇಳಿದರು. [ನಕಲಿ ವಾಟ್ಸಪ್ ಸಂದೇಶ ತಂದ ಫಜೀತಿ]

'ಮನೆಯಿಂದ ಕಾಲೇಜಿಗೆಂದು ಬರುವ ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡುತ್ತಾರೆ. ಈ ಕುರಿತು ಪೋಷಕರಿಗೆ ಮಾಹಿತಿ ತಿಳಿಸಲು ಸಹಾಯಕವಾಗುವಂತೆ ಈ ಯೋಜನೆ ಆರಂಭಿಸಲು ಮುಂದಾಗಿದ್ದೇವೆ. ವಿದ್ಯಾರ್ಥಿಗಳ ಕಾಲ-ಕಾಲದ ಹಾಜರಾತಿ ಮತ್ತು ಇಂಟರ್‌ನಲ್ ಅಂಕಗಳ ಕುರಿತು ಪೋಷಕರಿಗೆ ಎಸ್‌ಎಂಎಸ್ ಅಥವ ಈ ಮೇಲ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ' ಎಂದು ವಿವರಣೆ ನೀಡಿದರು.

English summary
Karnataka Higher Education Minister R.V.Deshpande said, Department plans to send SMS to parents if their children studying in government colleges face shortage of attendance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X