ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕ್‌ ಎಟಿಎಂನಲ್ಲಿ ಗ್ರಾಹಕರಿಗೆ ಇದೆಂಥಾ ವಂಚನೆ?

By Kiran B Hegde
|
Google Oneindia Kannada News

ಬೆಂಗಳೂರು, ಜ. 27: ಬ್ಯಾಂಕಿಂಗ್ ವಲಯದಲ್ಲಿ ಎಟಿಎಂ ಯಂತ್ರಗಳ ಆವಿಷ್ಕಾರ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದೆ. ದಿನದ ಖರ್ಚಿಗಾಗಿಯೂ ಹಣ ಕೈಯಲ್ಲಿಟ್ಟುಕೊಳ್ಳದೆ ಬ್ಯಾಂಕ್‌ನಲ್ಲಿ ಕೂಡಿಟ್ಟು ಬೇಕಾದಾಗ ಎಟಿಎಂ ಕೇಂದ್ರಕ್ಕೆ ಹೋಗಿ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ.

ಆದರೆ, ಎಟಿಎಂ ಯಂತ್ರ ಕೇಳಿದಷ್ಟು ಹಣ ಕೊಡದೆ ಲೆಕ್ಕದಲ್ಲಿ ಮಾತ್ರ ನೀಡಲಾಗಿದೆ ಎಂದು ತೋರಿಸಿದರೆ ಏನು ಮಾಡ್ತೀರಿ? ಇಂತಹ ಸಮಸ್ಯೆ ಎದುರಿಸಿದ ವ್ಯಕ್ತಿಯೋರ್ವರು 'ಒನ್ಇಂಡಿಯಾ ಕನ್ನಡ' ಪ್ರತಿನಿಧಿಯೊಂದಿಗೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. [ಅಂಚೆ ಇಲಾಖೆಯಿಂದ ಎಟಿಎಂ]

atm

ಆದ ಸಮಸ್ಯೆ ಏನು? : ಎಟಿಎಂ ಕೇಂದ್ರಕ್ಕೆ ಹೋಗಿ ಕಾರ್ಡ್ ಸ್ಪೈಪ್ ಮಾಡಿ ಎಲ್ಲ ಪ್ರಕ್ರಿಯೆ ಮುಗಿದು ಅಗತ್ಯ ಹಣ ಒತ್ತಿದಾಗ ನಗದು ಪಾವತಿ ಆಗಿದೆ. ಗ್ರಾಹಕ ಕೇಳಿದ್ದ 1,500 ರು. ಹಣದಲ್ಲಿ 500 ರು. ನೋಟುಗಳ ಮಧ್ಯೆ ಒಂದು 100 ರು. ನೋಟು ಬಂದಿದೆ. ಆದರೆ, ಸ್ಲಿಪ್‌ನಲ್ಲಿ ವ್ಯವಹಾರ ಯಶಸ್ವಿಯಾಗಿದೆ ಎಂದೇ ವರದಿ ಬಂದಿದೆ. [ಎಟಿಎಂಗೆ ಭದ್ರತೆ ಒದಗಿಸಿ]

ಈ ವ್ಯವಹಾರದಿಂದ 400 ರು. ನಷ್ಟ ಅನುಭವಿಸಿದ ಗ್ರಾಹಕ ತಕ್ಷಣ ಗ್ರಾಹಕ ಸೇವಾ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿ ದೂರಿದ್ದಾರೆ. ಆದರೆ, "ನಿಮ್ಮ ಖಾತೆಯಲ್ಲಿ ಹಣದ ವ್ಯವಹಾರ ಯಶಸ್ವಿಯಾಗಿದೆ. ಬ್ಯಾಂಕ್‌ನಿಂದ ಯಾವುದೇ ತಪ್ಪಾಗಿಲ್ಲ" ಎಂದು ಹೇಳಿದ್ದಾರೆ. ಇದರಿಂದ ಗ್ರಾಹಕನಿಗಾದ ವಂಚನೆ ಸಾಬೀತಾಗಲೇ ಇಲ್ಲ. ಇಂತಹ ಅನುಭವ ತಮಗೂ ಆಗಿದೆ ಎಂದು ಹಲವರು ದೂರಿದ್ದಾರೆ. [100 ರು. ಕೇಳಿದರೆ 500 ರು. ಕೊಡುವ ಎಟಿಎಂ]

ಪರಿಹಾರ ಸಿಗಲಿಲ್ಲ : ಹಣ ಕಳೆದುಕೊಂಡಿರುವ ಗ್ರಾಹಕರು ಪರಿಹಾರ ಸಿಗದೆ ಅಸಹಾಯಕತೆ ಎದುರಿಸುತ್ತಿದ್ದಾರೆ. ಹಲವು ರಾಷ್ಟ್ರೀಕೃತ ಬ್ಯಾಂಕ್‌ನ ಎಟಿಎಂಗಳಲ್ಲಿಯೇ ಈ ಸಮಸ್ಯೆ ಕಂಡುಬಂದಿದೆ. [ಎಟಿಎಂ ಬಳಕೆ ಮಿತಿ ಮೀರದಿರಲಿ]

ಆದ್ದರಿಂದ ಇದು ಎಟಿಎಂ ಯಂತ್ರದಲ್ಲಿ ಹಣ ಹಾಕುವ ಸಿಬ್ಬಂದಿಯ ಕೈವಾಡವಿರಬಹುದು ಎಂಬ ಶಂಕೆ ಮೂಡಿದೆ. ಇಂತಹ ಪ್ರಕರಣ ಪದೇ ಪದೆ ಪತ್ತೆಯಾಗುತ್ತಿರುವ ಕಾರಣ ಬ್ಯಾಂಕ್‌ಗಳು ಸಮಸ್ಯೆಯನ್ನು ತೀವ್ರವಾಗಿ ಪರಿಗಣಿಸಬೇಕು ಹಾಗೂ ಪರಿಹಾರ ಕಂಡುಹಿಡಿಯಬೇಕೆಂದು ಜನರು ಕೋರಿದ್ದಾರೆ.

English summary
In many atm machines Rs. 50 and 100 notes are found in between Rs. 500 notes. People have complained to bank but got no solution as their account is showing 'transaction successful'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X