ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1ರುಗೆ ಮಾನ ಕಳೆದುಕೊಂಡ ವಾಸುದೇವ್ ಅಡಿಗಾಸ್!

By Ramesh
|
Google Oneindia Kannada News

ಬೆಂಗಳೂರು, ಸೆ. 24 : ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅನ್ನೋ ಮಾತಿನಂತೆ ವಾಸುದೇವ್ ಅಡಿಗಾಸ್ ಹೋಟೆಲ್‍ ಗ್ರಾಹಕರಿಂದ ಪಡೆಯುತ್ತಿದ್ದ 1ರು ಹೆಚ್ಚುವರಿ ಹಣದಿಂದ ಕೋರ್ಟ್ ನಲ್ಲಿ ಮಾನ ಕಳೆದುಕೊಂಡಿದೆ.

ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆಗೆ ಹಣ ನೀಡುವುದಕ್ಕಾಗಿ ಅಡಿಗಾಸ್ ಹೋಟೆಲ್‍ ನಲ್ಲಿ ಗ್ರಾಹಕರಿಂದ ಪ್ರತಿ ಬಿಲ್ ಮೇಲೆ ಒಂದು ರೂಪಾಯಿ ಹೆಚ್ಚುವರಿ ಹಣ ತೆಗೆದುಕೊಳ್ಳಲಾಗುತಿತ್ತು. ಇದನ್ನು ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಎನ್ನುವರು 2013ರಲ್ಲಿ ಗ್ರಾಹಕರ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು.

Hotel

ಇದನ್ನು ಪರಿಶೀಲಿಸಿದ ಕೋರ್ಟ್ ವಾಸುದೇವ್ ಅಡಿಗಾಸ್ ಹೋಟೆಲ್‍ ಗೆ 100ರು ದಂಡ ಹಾಗೂ ಅರ್ಜಿದಾರರಿಗೆ ಕಾನೂನು ಹೋರಾಟದ ಖರ್ಚು 1000ರುಗಳನ್ನು ನೀಡಬೇಕೆಂದು ಆದೇಶಿಸಿತ್ತು. ಈ ಪ್ರಕರಣ ಗ್ರಾಹಕರ ನ್ಯಾಯಾಲಯದ ಬಳಿಕ ಸೆಷೆನ್ಸ್ ಕೋರ್ಟ್ ಗೆ ಹೋಗಿತ್ತು.

ನೆರವು ನೀಡುವವರು ವೈಯಕ್ತಿಕ ಆದಾಯ ಅಥಾವ ಹೊಟೇಲ್ ನ ಆದಾಯದಲ್ಲಿ ನೀಡಬೇಕು ವಿನಃ ಗ್ರಾಹಕರ ಮೇಲೆ ಹಾಕುವುದು ಸರಿಯಲ್ಲ ಎಂದು ಸೆಷೆನ್ಸ್ ಕೋರ್ಟ್ ತೀರ್ಪು ನೀಡಿತ್ತು.

ಇದನ್ನು ಪ್ರಶ್ನಿಸಿ ಅಡಿಗಾಸ್ ಹೊಟೇಲ್ ನವರು ಹೈಕೊರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಅಡಿಗಾಸ್ ಅರ್ಜಿ ವಜಾ ಆಗಿದೆ. ಕೊನೆಗೆ ಗ್ರಾಹಕ ನ್ಯಾಯಾಲಯದಲ್ಲೂ ಅಡಿಗಾಸ್ ಗೆ ಹಿನ್ನಡೆಯಾಗಿದ್ದು, ಮಾನ ಕಳೆದುಕೊಂಡಿರುವ ಜೊತೆಗೆ ದಂಡ ಕಟ್ಟುವ ಪರಿಸ್ಥಿತಿ ಎದುರಾಗಿದೆ.

English summary
Hotels and restaurants cannot impose corporate social responsibility on their customers. In a recent hearing, the Karnataka State Consumer Disputes Redressal Commi-ssion ordered Vasudev Adiga's to not impose SR on its customers who are a third party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X