ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವ ಉದ್ಯಮಿಗಳ ಸಂಖ್ಯೆಯಲ್ಲಿ ಬೆಂಗಳೂರು ನಂ.1

By Vanitha
|
Google Oneindia Kannada News

ಬೆಂಗಳೂರು, ಜುಲೈ, 29 : ಸಿಲಿಕಾನ್ ಸಿಟಿ ಮತ್ತೊಮ್ಮೆ ನಂಬರ್ ಒನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ವಿಶ್ವದಲ್ಲಿ ಅಧಿಕ ಯುವ ಉದ್ಯಮಿಗಳನ್ನು ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸುಮಾರು ವಿಶ್ವದಾದ್ಯಂತ 20 ನಗರಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಈ ಫಲಿತಾಂಶ ದೊರೆತ್ತಿದ್ದು, 28.5 ವರ್ಷದ ಯುವ ಉದ್ಯಮಿಗಳನ್ನು ಹೊಂದಿರುವ ಮೊದಲ ನಗರ ಎಂಬ ಖ್ಯಾತಿ ಪಡೆದುಕೊಂಡಿದೆ. ಬೆಂಗಳೂರಿನ ನಂತರ ಮಲೇಷಿಯಾದ ಕೌಲಲಾಂಪುರ್ (30.5), ಸೌಪಾವ್ಲ್ (31.7), ಬರ್ಲಿನ್ (31.8)ಗಳು ಯುವ ಉದ್ಯಮಿಗಳನ್ನು ಹೊಂದಿರುವ ನಗರ ಎಂದು ಕರೆಸಿಕೊಂಡಿದೆ.[ಬೆಂಗಳೂರು ಸಂಸ್ಥೆ ಪಾಲಾದ ಅತಿ ದೊಡ್ಡ ಚಿನ್ನ ಶುದ್ಧೀಕರಣ ಘಟಕ]

At average 28 years, Bengaluru has youngest entrepreneurs in world

ಇಲ್ಲಿ ಉದ್ಯಮಗಳು ಪ್ರಾರಂಭವಾಗಿ ಹಲವು ವರ್ಷಗಳು ಸಂದಿವೆ. ಇದರಲ್ಲಿ 15ವರ್ಷ ಅನುಭವವಿರುವ ಉದ್ಯಮಿಗಳು ಇರುವುದಾದರೂ ಅದರಿಂದ ಯಾವುದೇ ಲಾಭವಾಗಿರುವುದಿಲ್ಲ. ಆದರೆ ಯುವ ಉದ್ಯಮಿಗಳು ಸಮಸ್ಯೆಗಳನ್ನು ಬೇಗನೆ ಅರ್ಥಮಾಡಿಕೊಳ್ಳುವವರಾದ್ದರಿಂದ ಉದ್ಯಮಗಳು 30 ವರ್ಷದೊಳಗಿನ ಯುವಕ-ಯುವತಿಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ.

ಬೆಂಗಳೂರು ನಗರವು 2015ರಲ್ಲಿ ವಿಶ್ವದ 20 ನಗರಗಳಲ್ಲಿ 15 ರಾಂಕ್ ಗಳಿಸಿತ್ತು. 2012ರಲ್ಲಿ 19 ನೇ ರ್ಯಾಂಕ್ ಪಡೆದಿತ್ತು. ಆದರೆ ಈ ವರ್ಷ ನಂಬರ್ ಒನ್ ಸ್ಥಾನ ಪಡೆದು ಅಧಿಕ ಯುವ ಉದ್ಯಮಿಗಳ ನಗರ ಎಂಬುದಾಗಿ ಕರೆಸಿಕೊಂಡಿದೆ. ಉತ್ತಮ ಕಾರ್ಯ ನಿರ್ವಹಣೆ, ಬಂಡವಾಳ ಹೂಡಿಕೆ, ಮಾರುಕಟ್ಟೆ ಮಟ್ಟ, ಪ್ರತಿಭೆ, ಅನುಭವ ಈ ಎಲ್ಲ ಅಂಶಗಳು ಮೊದಲ ಸ್ಥಾನ ಗಳಿಸಲು ಸಾಧ್ಯವಾದ ಪ್ರೇರಕಾ ಅಂಶಗಳು ಎಂದು ಈ ಸಮೀಕ್ಷೆಯಿಂದ ತಿಳಿದು ಬಂದಿದೆ.

English summary
At average 28.5 years, Bengaluru has youngest entrepreneurs in world.Kuala Lumpur comes closest to Bengaluru, at 30.5 years, followed by Sao Paulo, 31.7 years, and Berlin, 31.8%. Sydney has the highest average age among startup founders, at 40.3 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X