ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಕೆಟ್ ನೀರಲ್ಲಿ ಸ್ನಾನ ಮಾಡಿ, ವಾರಕ್ಕೊಮ್ಮೆ ಗಾಡಿ ತೊಳೀರಿ...

ಈ ಬಾರಿಯ ಬೇಸಿಗೆ ಬೆಂಗಳೂರಿಗರ ಪಾಲಿಗೆ ಭಯಾನಕವಾಗಿ ಇರುವುದರಲ್ಲಿ ಯಾವ ಅನುಮಾನವೂ ಇಲ್ಲ. ನೀರಿನ ಮಿತ ಬಳಕೆಯೊಂದೇ ಇಂಥ ಅಪಾಯಕಾರಿ ಸನ್ನಿವೇಶದಿಂದ ಪಾರು ಮಾಡಲು ಸಾಧ್ಯ. ನೀರು ಉಳಿಸುವ ಕೆಲವು ಸೊಗಸಾದ ಉಪಾಯಗಳು ಇಲ್ಲಿವೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಇಂಥ ಸನ್ನಿವೇಶ ಬೆಂಗಳೂರಿಗರ ಪಾಲಿಗೆ ಹೊಸದಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಪರಿಸ್ಥಿತಿಯ ಭೀಕರತೆ ಪ್ರಪಾತದ ಕಡೆಗೆ ಜಗ್ಗುತ್ತಿದೆ. ಬುಧವಾರದ ಮಾಹಿತಿ ಪ್ರಕಾರ ಕೆಆರೆಸ್ ನಲ್ಲಿ 78.34 ಅಡಿಯಷ್ಟು ನೀರಿತ್ತು ಅದರ ಸಂಗ್ರಹ ಸಾಮರ್ಥ್ಯ 5.67 ಟಿಎಂಸಿ ಅಡಿ ಇತ್ತು. ಇದು 4.4 ಟಿಎಂಸಿ ಅಡಿ ತಲುಪಿದರೆ ಡೆಡ್ ಸ್ಟೋರೇಜ್ ತಲುಪಿದಂತೆ.

ನೀರಾವರಿ ಮಂತ್ರಿಗಳು ಹೇಳಿರುವ ಪ್ರಕಾರ ಬೆಂಗಳೂರಿಗೆ ಮೇವರೆಗೆ ಕುಡಿಯುವ ನೀರು ಪೂರೈಸಬಹುದು. ಅದೂ ಪರಿಸ್ಥಿತಿ ತೀರಾ ಕೈ ಮೀರಿದರೆ ಡೆಡ್ ಸ್ಟೋರೇಜ್ ನಿಂದ ಕೂಡ ನೀರು ಪೂರೈಸಬೇಕಾಗುತ್ತದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡೆಡ್ ಸ್ಟೋರೇಜ್ ನ ನೀರು ಸರಬರಾಜು ಮಾಡುವ ತಂತ್ರಜ್ಞಾನ ಕರ್ನಾಟಕದ ಬಳಿ ಇಲ್ಲ.[ಕೆಆರೆಸ್ ನಲ್ಲಿ ಕಾಣುತ್ತಿದೆ ನೆಲ, ಬೆಂಗಳೂರಿಗರ ಪಾಲಿಗೆ ಕೆಟ್ಟಕಾಲ]

ಐತಿಹಾಸಿಕವಾದದ್ದು ಎನ್ನಬಹುದಾದ ನೀರಿನ ಸಮಸ್ಯೆಯೊಂದು ಬೆಂಗಳೂರಿನ ಪಾಲಿಗೆ ಕಾದಿದೆ ಎಂಬುದು ಗೋಚರಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ನಾವು ನೀರನ್ನು ಉಳಿತಾಯ ಮಾಡುವುದಕ್ಕೆ ಏನು ಮಾಡಬಹುದು ಎಂಬ ಸ್ಲಹೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಮೇಲ್ನೋಟಕ್ಕೆ ಇವೆಲ್ಲ, ಅಯ್ಯೋ ಇಷ್ಟೇನಾ ಅನಿಸಬಹುದು. ಆದರೆ ತುಂಬ ಪರಿಣಾಮಕಾರಿಯಾದ ಮಾರ್ಗಗಳಿವು.

ಅಂಗಳ ತೊಳೆಯೋದಿಕ್ಕೆ ಎಷ್ಟು ನೀರು ಖರ್ಚು ಮಾಡ್ತೀರಿ

ಅಂಗಳ ತೊಳೆಯೋದಿಕ್ಕೆ ಎಷ್ಟು ನೀರು ಖರ್ಚು ಮಾಡ್ತೀರಿ

ಬಹಳ ಮಂದಿ ತಮ್ಮ ಮನೆಯ ನಲ್ಲಿಗೆ ಪೈಪ್ ಸಿಕ್ಕಿಸಿ, ಅಂಗಳ ತೊಳೆಯುತ್ತಾರೆ. ಇದು ಪ್ರತಿ ದಿನದ ಕರ್ತವ್ಯ ಅನ್ನೋ ಹಾಗೆ ನಿಮಿಷಗಟ್ಟಲೆ ಮಾಡುತ್ತಾರೆ. ಹಾಗೆ ತೊಳೆಯುವಾಗ ಯಾವ ಪ್ರಮಾಣದಲ್ಲಿ ನೀರು ಬಳಸುತ್ತಿದ್ದೇವೆ ಎಂಬ ಅಂದಾಜೇ ಸಿಗುವುದಿಲ್ಲ. ಆದ್ದರಿಂದ ವಾಷಿಂಗ್ ಮಷೀನ್ ಗೆ ಬಳಸಿದ ನೀರಿನ ಉಳಿಕೆಯನ್ನೇ ಅಥವಾ ಮನೆ ಸಾರಿಸಿದ ನೀರನ್ನೇ ಅಂಗಳ ತೊಳೆಯಲು ಬಳಸಬಹುದು.

ಕಲೆಯಾದ ಪಾತ್ರೆಗೆ ಹೆಚ್ಚಿನ ನೀರು ಬೇಕು

ಕಲೆಯಾದ ಪಾತ್ರೆಗೆ ಹೆಚ್ಚಿನ ನೀರು ಬೇಕು

ಕೆಲವರಿಗೆ ಆಗಿಂದಾಗ ಪಾತ್ರೆ ತೊಳೆಯುವುದು ಬೇಸರದ ಕೆಲಸ. ಒಟ್ಟಾಗಿ ತೊಳೆಯೋಣ ಅಂದುಕೊಳ್ತಾರೆ. ಆ ರೀತಿ ಪಾತ್ರೆ ಒಟ್ಟಾಗಿ, ಅದರ ಕಲೆ ಗಟ್ಟಿಯಾಗಿ, ಒಣಗಿದರೆ ಅವುಗಳನ್ನು ತೊಳೆಯಲು ಹೆಚ್ಚಿನ ನೀರು ಬೇಕಾಗುತ್ತದೆ. ಅದರ ಬದಲು ಕೆಲಸ ಮುಗಿದ ತಕ್ಷಣ ಪಾತ್ರೆ ತೊಳೆದರೆ ಹೆಚ್ಚಿನ ನೀರು ಬೇಕಾಗುವುದಿಲ್ಲ. ಜತೆಗೆ ಆದಷ್ಟೂ ಕಡಿಮೆ ಪಾತ್ರೆಗಳನ್ನು ಬಳಸಿ.

ಷವರ್ ನ ಸ್ನಾನ ಖುಷಿ, ಆದರೆ ಬಕೆಟ್ ಬಳಸಿ

ಷವರ್ ನ ಸ್ನಾನ ಖುಷಿ, ಆದರೆ ಬಕೆಟ್ ಬಳಸಿ

ಷವರ್ ಕೆಳಗೆ ನಿಂತು ಸ್ನಾನ ಮಾಡುವುದು ತುಂಬ ಖುಷಿಯ ಸಂಗತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸ್ನಾನಕ್ಕೆ ಬಕೆಟ್ ನಲ್ಲಿ ನೀರು ಬಳಸಿದರೆ ಲೆಕ್ಕ ಗೊತ್ತಾಗುತ್ತದೆ. ಷವರ್ ಕೆಳಗೆ ಸುಮ್ಮನೆ ಗಂಟೆ ಕಾಲ ನಿಂತು ನೀರು ವ್ಯರ್ಥವಾಗುವುದು ಕೂಡ ತಪ್ಪುತ್ತದೆ.

ಸಂಜೆ ವೇಳೆ ಗಿಡಕ್ಕೆ ನೀರು ಹಾಕಿ

ಸಂಜೆ ವೇಳೆ ಗಿಡಕ್ಕೆ ನೀರು ಹಾಕಿ

ಇನ್ನು ಅಡುಗೆ ಮನೆಯಲ್ಲಿ ಬಳಕೆಯಾದ ನೀರನ್ನು ಗಿಡಗಳಿಗೆ ಹಾಕಬಹುದು. ಮತ್ತೆ ಗಿಡಗಳಿಗೆ ಸಂಜೆ ಹೊತ್ತು ನೀರು ಹಾಕಿ. ಏಕೆಂದರೆ ಹಗಲು ಹೊತ್ತಿನಲ್ಲಿ ಬಿಸಿಲಿನ ಶಾಖಕ್ಕೆ ಮಣ್ಣು ಬೇಗ ಒಣಗಿಹೋಗುತ್ತದೆ. ಸಂಜೆ ನಂತರವಾದರೆ ನೀರು ಬಹಳ ಸಮಯ ಇರುತ್ತದೆ.

ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿ

ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿ

ಮನೆಗಳಲ್ಲಿ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಿದರೆ ಅಂತರ್ಜಲ ಮಟ್ಟ ಹೆಚ್ಚುವುದಕ್ಕೆ ತುಂಬ ಸಹಾಯ ಆಗುತ್ತದೆ.

ವಾಹನವನ್ನು ವಾರಕ್ಕೋ ಎರಡು ವಾರಕ್ಖೋ ಒಮ್ಮೆ ತೊಳೆಯಿರಿ

ವಾಹನವನ್ನು ವಾರಕ್ಕೋ ಎರಡು ವಾರಕ್ಖೋ ಒಮ್ಮೆ ತೊಳೆಯಿರಿ

ಮನೆಯಲ್ಲಿರುವ ಕಾರು ಇತರ ವಾಹನಗಳನ್ನು ಕೂಡ ನಲ್ಲಿಗೆ ಪೈಪ್ ಸಿಕ್ಕಿಸಿ, ತೊಳೆಯುವುದಕ್ಕೆ ಬ್ರೇಕ್ ಹಾಕಿ. ಪ್ರತಿ ದಿನ ವಾಹನ ತೊಳೆಯುವುದಕ್ಕಿಂತ ವಾರಕ್ಕೋ ಎರಡು ವಾರಕ್ಕೋ ಒಮ್ಮೆ ವಾಹನ ತೊಳೆಯಿರಿ. ಕಡ್ಡಾಯವಾಗಿ ಬಕೆಟ್ ನಲ್ಲಿ ನೀರು ಹಿಡಿದು ಬಳಸಿ.

English summary
A monumental water crisis is looming over the city and here’s what Bengalureans can do to avoid water wastage at household level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X