ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಈಜಾಡಿದ ಮೊಸಳೆ!

By Staff
|
Google Oneindia Kannada News

ಬೆಂಗಳೂರು, ಜೂ. 19 : ಗುರುವಾರ ಬೆಂಗಳೂರಿನ ರಸ್ತೆಯ ಹೊಂಡವೊಂದರಲ್ಲಿ ಮೊಸಳೆ ಈಜಾಡುತ್ತಿತ್ತು. ಸದಾ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗುವ ಉದ್ಯಾನ ನಗರಿ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿಯನ್ನು ತಿಳಿಸಲು ಕಲಾವಿದ ಬಾದಲ್ ನಂಜುಂಡಸ್ವಾಮಿ ಮೊಸಳೆಯನ್ನು ಈಜಲು ಬಿಟ್ಟು ಬಿಬಿಎಂಪಿ ಗಮನ ಸೆಳೆದರು.

ಸುಲ್ತಾನ್‌ ಪಾಳ್ಯ ಮುಖ್ಯರಸ್ತೆಯಲ್ಲಿನ ಸುಮಾರು 12 ಅಡಿ ಉದ್ದದ ಗುಂಡಿಯಲ್ಲಿ ಗುರುವಾರ ಬೆಳಗ್ಗೆ ಮೊಸಳೆ ಇತ್ತು. ಕಲಾವಿದ ನಂಜುಂಡಸ್ವಾಮಿ ಅವರು ರಸ್ತೆಯ ಸ್ಥಿತಿಯನ್ನು ವರ್ಣಿಸಲು ಫೈಬರ್ ಮೊಸಳೆಯನ್ನು ತಂದು ಅಲ್ಲಿ ಬಿಟ್ಟಿದ್ದರು. ಈ ಫೋಟೋವನ್ನು ಫೇಸ್‌ಬುಕ್‌ನಲ್ಲಿಯೂ ಹಾಕಿದ್ದಾರೆ.

roads

ರಸ್ತೆಯಲ್ಲಿ ಬಿದ್ದಿರುವ ಗುಂಡಿಯನ್ನು ಮುಚ್ಚುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಮನ ಸೆಳೆಯಲು ನಂಜುಂಡಸ್ವಾಮಿ ಅವರು ಈ ಕಲಾಕೃತಿ ನಿರ್ಮಿಸಿದ್ದರು. ಫೈಬರ್ ಮೊಸಳೆ ಮಾಡಲು ಅವರು ತಮ್ಮ ಕೈಯಿಂದ ಸುಮಾರು 6 ಸಾವಿರ ರೂ.ಗಳನ್ನು ಖರ್ಚು ಮಾಡಿದ್ದಾರೆ. [ಬೆಂಗಳೂರು ರಸ್ತೆಗಳಲ್ಲಿರುವ ಗುಂಡಿಗಳ ಲೆಕ್ಕ - ವರದಿ]

ಗುಂಡಿಗಳಲ್ಲಿದೇ ರಸ್ತೆ : ಬೆಂಗಳೂರಿನ ಗುಂಡಿಗಳಲ್ಲಿಯೇ ರಸ್ತೆಗಳಿವೆ ಎಂದು ಜನರು ವ್ಯಂಗ್ಯವಾಡುವುದುಂಟು. ಬಿಬಿಎಂಪಿಯ ಇಂಜಿನಿಯರಿಂಗ್ ವಿಭಾಗದವರೇ ನಗರದ 422 ಮುಖ್ಯ ರಸ್ತೆಗಳಲ್ಲಿ 2620 ಗುಂಡಿಗಳಿವೆ ಎಂದು ಪಾಲಿಕೆ ಆಯುಕ್ತ ಜಿ. ಕುಮಾರ್ ನಾಯ್ಕ್ ಅವರಿಗೆ ಗುರುವಾರ ವರದಿಯೊಂದನ್ನು ಕೊಟ್ಟಿದ್ದಾರೆ.

after! @Sultanpalya main raod, RT Nagar, Bangalore!

Posted by Baadal Nanjundaswamy on Thursday, June 18, 2015

ಮೈಸೂರು ಅರಮನೆ ಮುಂದೆ ಕೈ : ಕಲಾವಿದ ನಂಜುಂಡಸ್ವಾಮಿ ಅವರು ಇಂತಹ ಕಲಾಕೃತಿ ಮಾಡುತ್ತಿರುವುದು ಇದೇ ಮೊದಲಲ್ಲ. ಹಿಂದೆ ಮೈಸೂರು ಅರಮನೆ ಮುಂಭಾಗ ಚರಂಡಿ ಸರಿಪಡಿಸುವಂತೆ ಗಮನ ಸೆಳೆಯಲು ಫೈಬರ್ ಕೈಗಳನ್ನು ಮಾಡಿದ್ದರು.

mysuru
English summary
Artist Baadal Nanjundaswamy placed artificial crocodile in the 12-feet-long pot hole in Sulthanpalya main road Bengaluru to urge authorities to repair roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X