ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: 3 ವರ್ಷದ ಮಗುವಿನ ಮೇಲೆ ಶಾಲಾ ಬಸ್ ನಲ್ಲಿ ದೌರ್ಜನ್ಯ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಜುಲೈ 4: ಬೆಂಗಳೂರಿನ ಇಂಟರ್ನ್ಯಾಷನ್ ಶಾಲೆಯೊಂದರ ಬಸ್ ಚಾಲಕನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಸೋಮವಾರ ಆತ ಬಸ್ಸಿನಲ್ಲಿ ಮೂರುವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ.

ಸೋಮವಾರ ಮಗು ಶಾಲೆಯಿಂದ ಮನೆಗೆ ಬಸ್ಸಿನಲ್ಲಿ ಬರುವಾಗ ಈ ಘಟನೆ ನಡೆದಿದ್ದಾಗಿ ವರದಿಯಾಗಿದೆ. ಈ ಕುರಿತು ಮಗುವಿನ ಪೋಷಕರು ಪ್ರಕರಣ ದಾಖಲಿಸಿದ್ದಾರೆ.

Another POCSO case reported from Bengaluru school, three-year-old allegedly assaulted

ಪೋಷಕರ ದೂರಿನ ಮೇರೆಗೆ ಪೊಲೀಸರು ಸೋಮವಾರ ಶಾಲೆಯ ಸಿಬ್ಬಂದಿಗಳನ್ನು ಪೆರೇಡ್ ಮಾಡಿದಾಗ ಮಗು ದೌರ್ಜನ್ಯ ನಡೆಸಿದಾತನನ್ನು ಪತ್ತೆ ಹಚ್ಚಿದೆ. ಪ್ರಕರಣದ ಸೂಕ್ಷ್ಮವಾಗಿರುವ ಹಿನ್ನಲೆಯಲ್ಲಿ ಬಂಧಿತನ ಗುರುತನ್ನು ಪೊಲೀಸರು ಬಿಟ್ಟುಕೊಟ್ಟಿಲ್ಲ.

ಇನ್ನು ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೂರಕ ಸಾಕ್ಷ್ಯಗಳನ್ನು ಕಲೆಹಾಕುವ ಸಲುವಾಗಿ ಶಾಲಾ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪಡೆದುಕೊಂಡಿದ್ದಾರೆ. ಶಾಲೆಯಿಂದ ಮನೆಗೆ ಮರಳಿ ಬರುವಾಗ ಶಾಲಾ ವ್ಯಾನ್ ನಲ್ಲಿ ಮಗುವಿನ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾಗಿದೆ.

ಇನ್ನು ಮಗುವನ್ನು ಏಕಾಂಗಿಯಾಗಿ ಶಾಲಾಬಸ್ ನಲ್ಲಿ ಕಳುಹಿಸಿದ್ದು ಯಾಕೆ ಎಂದೂ ಶಾಲಾ ಆಡಳಿತ ಮಂಡಳಿಯನ್ನೂ ಪೊಲೀಸರ ಪ್ರಶ್ನಿಸುತ್ತಿದ್ದಾರೆ. ಹಲವಾರು ಘಟನೆಗಳ ನಂತರ ಶಾಲಾ ಬಸ್ ನಲ್ಲಿ ಮಹಿಳಾ ಸಿಬ್ಬಂದಿ ಇರಲೇಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು. ಹೀಗಿದ್ದೂ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

ಮಗು ಮನೆಗೆ ಬರುತ್ತಿದ್ದಂತೆ ಪೋಷಕರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದು ದೌರ್ಜನ್ಯ ನಡೆದಿರುವುದು ಖಚಿತ ಪಟ್ಟಿದೆ. ಇನ್ನು ಮಗು ಆರೋಪಿಯನ್ನು ಗುರುತಿಸಿದ್ದರೂ ಅರೋಪಿ ಮಾತ್ರ ತಾನು ಮುಗ್ಧ ಎನ್ನುತ್ತಿರುವುದರಿಂದ ತನಿಖೆ ಮುಂದುವರಿದೆ ಎಂದು ಪೊಲೀಸರು ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)

English summary
A driver employed with am an international school in Bengaluru has been arrested on charges of sexually assaulting a three and a half-year-old child. The incident is said to have taken place on Monday when the child was returning from school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X