ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮಿತ್ ಷಾ ಒಬ್ಬ ಕೊಲೆಗಡುಕ: ಸಿದ್ದರಾಮಯ್ಯ ಟೀಕೆ

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 28: ಬಿಜೆಪಿ ರಾಷ್ಟಾಧ್ಯಕ್ಷ ಒಬ್ಬ ಕೊಲೆಗಾರ ಎಂದು ಟೀಕಿಸಿರುವ ಸಿಎಂ ಸಿದ್ದರಾಮಯ್ಯ, ಮೋದಿ ಪ್ರಧಾನಮಂತ್ರಿ ಯಾಗಿರದಿದ್ದರೆ ಅಮಿತ್ ಷಾ ಜೈಲಿನಲ್ಲಿರಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಐಟಿ ಕ್ವಿಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ವಿರುದ್ಧ ಮಾತನಾಡಿರುವ ಅಮಿತ್ ಷಾ ಅವರಿಗೆ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷವನ್ನು ಟೀಕಿಸುವ ನೈತಿಕ ಹಕ್ಕಿಲ್ಲ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿಲ್ಲದಿದ್ದರೆ ಅವರು ಜೈಲಿನಲ್ಲಿ ಇರಬೇಕಾಗಿತ್ತು. ಅವರೊಬ್ಬ ಕೊಲೆಗಡುಕ ಎಂದು ಟೀಕೆ ಮಾಡಿದರು.[ಕಾಂಗ್ರೆಸ್ ಸರ್ಕಾರ ಎಬ್ಬಿಸಲು ನಗಾರಿ ಬಾರಿಸಿದ ಅಮಿತ್ ಶಾ]

amith shah is a murderer: cm siddaramaiah

ಅಮಿತ್ ಷಾಗೆ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳುವ ಹಕ್ಕಿಲ್ಲ, ನೋಟು ಎಣಿಕೆ ಮಾಡುವ ಯಂತ್ರ ಹೊಂದಿರುವವರನ್ನು ಪಕ್ಷದಲ್ಲಿಯೇ ಇರಿಸಿಕೊಂಡಿದ್ದಾರೆ ಎಂದು ಆಪಾದಿಸಿದರು.

ಮೋದಿಯವರ ಆತುರದ ನಿರ್ಧಾರದಿಂದ ಜನ, ದೇಶ ಸಂಕಷ್ಟ ಸ್ಥಿತಿ ತಲುಪುತ್ತಿದೆ. ಮುಂದಿನ ಚುನಾವಣೆಯಲ್ಲಿ ಮೋದಿಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ ಎಂದು ಭವಿಷ್ಯ ನುಡಿದರು.

ಇನ್ನು ರಾಜ್ಯದ ಬಿಜೆಪಿ ಮುಖಂಡ ಬಿಎಸ್ ವೈ ವಿರುದ್ಧ ಕಿಡಿಕಾರಿದ ಸಿಎಂ ಮಹಾದಾಯಿ, ಕಾವೇರಿ ವಿಚಾರದಲ್ಲಿ ಬಾರಿ ಅನ್ಯಾಯವಾಗಿದೆ ಎಂದು ಹೋದಲೆಲ್ಲಾ ಹೇಳುವ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಎಕೆ ವಿವಾದ ಇತ್ಯಥ್ ಪಡಿಸಲಿಲ್ಲ ಎಂದು ಪ್ರಶ್ನೆ ಹಾಕಿದರು. ಮಹಾದಾಯಿ ಟ್ರಿಬುನಲ್ ಮಂಡಳಿ ಸ್ಥಾಪನೆಯಾಗಿದ್ದೇ ಅವರ ಕಾಲದಲ್ಲಿ ಎಂದರು.

ಬಿಜೆಪಿ ಸಂಭ್ರಮ ದಿನಕ್ಕೆ ಗೇಲಿ ಮಾಡಿದ ಸಿಎಂ ಕಾಂಗ್ರೆಸ್ ಬಂದ್'ಗೆ ಕರೆ ನೀಡಿಯೇ ಇಲ್ಲ, ಆದರೂ ಬಿಜೆಪಿ ಮುಖಂಡರು ಅನಗತ್ಯವಾಗಿ ಸಂಭ್ರಮ ಆಚರಿಸಿ ಸಿಹಿ ಹಂಚುತ್ತಿದ್ದಾರೆ ಎಂದರು.

English summary
CM Siddaramaiah today inaugurated the 19th edition of the State’s flagship event, Bengaluru ITE.biz. He said amith shah is a murderer, bjp don't speek about congress to legal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X