ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಾಸೌಧದಲ್ಲಿ 'ಅಲ್ಲಮನ ಬಯಲಾಟ' ತಪ್ಪದೇ ನೋಡಿ

By Mahesh
|
Google Oneindia Kannada News

ಬೆಂಗಳೂರು, ಮೇ.28: ಹನ್ನೆರಡನೇ ಶತಮಾನದ ಸಹಜಯಾನಿ ಮತ್ತು ಅನುಭಾವಿ ವಚನಕಾರ ಅಲ್ಲಮಪ್ರಭು ಜೀವ ಕುರಿತ ನಾಟಕವನ್ನು ಮಹಾಯಾನ ಪ್ರತಿಷ್ಠಾನ ಪ್ರಸ್ತುತಪಡಿಸುತ್ತಿದೆ. ಹನುಮಂತ ನಗರದ ಕೆಎಸ್ ಕಲಾಸೌಧದಲ್ಲಿ ಮೇ. 30ರಂದು ನಾಟಕ ಪ್ರದರ್ಶನ ಕಾಣಲಿದೆ. ನಾಟಕದ ವಿವರ ಇಲ್ಲಿದೆ.

'ಅಲ್ಲಮನ ಬಯಲಾಟ'
ಭಾಷೆ : ಕನ್ನಡ
ಪ್ರಕಾರ : ನಾಟಕ
ಅವಧಿ : 150 ನಿಮಿಷಗಳು

ದಿನಾಂಕ : 30ನೇ ಮೇ, 2015 (ಶನಿವಾರ)
ಸಮಯ : ಸಂಜೆ 7 ಘಂಟೆಗೆ
ಪ್ರವೇಶ ದರ : ರೂ 100/-

ನಿರ್ಮಾಣ : ಮಹಾಯಾನ ಪ್ರತಿಷ್ಠಾನ
ರಚನೆ : ಲಕ್ಷ್ಮೀಪತಿ ಕೋಲಾರ
ನಿರ್ದೇಶನ : ಉದಯ್ ಸೋಸಲೆ
ಸಂಗೀತ : ಹೇಮಂತ್ ಮಂಡ್ಯ
ಬೆಳಕು : ಡಾ|| ರಾಜ.ಎನ್
ತಾರಾಗಣ: ಶಿವಾ, ಮಂಜು ಪಾವಗಡ, ಮಹೇಶ್, ಶ್ರೀಮಂಜು, ಗಗನ್ ಗೋಡ್ಗಲ್, ಫಣೀಶ್, ದಿವಾಕರ್, ಅನಿಲ್, ನವೀನ್, ಅಭಿಷೇಕ್, ರವಿ, ನಿಶಾ, ನಿಖಿತಾ, ವಾಸವಿ, ವಿನುತ ಮತ್ತು ಉಮಾ.

ಟಿಕೆಟ್ ಹಾಗೂ ಇನ್ನಿತರ ವಿವರಗಳಿಗೆ ಸಂಪರ್ಕಿಸಿ: +91-9844672040, +91-8147702464
ಫೇಸ್ ಬುಕ್ ಪುಟದ ಲಿಂಕ್ ಇಲ್ಲಿದೆ.

Allamana Bayalata Kannada Play Mahayana Pratishthana KH Kala Soudha

ನಾಟಕದ ಕುರಿತು : ಹನ್ನೆರಡನೇ ಶತಮಾನದ ಸಹಜಯಾನಿ ಮತ್ತು ಅನುಭಾವಿ ವಚನಕಾರ ಅಲ್ಲಮಪ್ರಭು. ಅಲ್ಲಮ ತನ್ನ ಬದುಕಿನುದ್ದಕ್ಕೂ ಶೂನ್ಯದ ಬೆಂಬತ್ತಿದವನಂತೆ ಕಾಣಿಸುತ್ತಾನೆ. ಸಂಗೀತ ಮತ್ತು ನೃತ್ಯವನ್ನೇ ತಮ್ಮ ವಂಶಮೂಲ ಕಲೆಗಳಾಗಿಸಿಕೊಂಡು ಬದುಕು ಹೊರೆಯುತ್ತಿದ್ದ ನಟುವ ಜನಾಂಗದಲ್ಲಿ ಹುಟ್ಟಿದವನು ಅಲ್ಲಮ.

ಹೆಣ್ಣು ಹುಟ್ಟಿದರೆ ಸಂಭ್ರಮಿಸುವ ನಟುವ ಕುಲದಲ್ಲಿ ಗಂಡಾಗಿ ಹುಟ್ಟಿ ಕೌಟುಂಬಿಕ ತಿರಸ್ಕಾರವನ್ನು ಹಾಗು ಕುಲದ ಕಾರಣಕ್ಕಾಗಿ ಅಂದಿನ ಸಮಾಜದಿಂದ ಅವಮಾನವನ್ನು ಬಳುವಳಿಯಾಗಿ ಪಡೆದವನು ಅಲ್ಲಮ.

ಅತ್ಯಂತ ಸೃಜನಶೀಲ ಮತ್ತು ಸಂವೇದನಾಶೀಲ ಮನಸ್ಥಿತಿ ಅಲ್ಲಮನದು. ಆತ ರಚಿಸಿದ ವಚನಗಳು ಹಾಗು ಬೆಡಗುಗಳ ತಾತ್ವಿಕ ಅಂಶಗಳನ್ನು ಹಾಗು ಬದುಕಿನ ಗತದ ಅಸ್ಮಿತೆ-ಗುರುತು-ಕುರುಹುಗಳನ್ನೆಲ್ಲ ಅಲ್ಲಮ ತನ್ನ ಕುಲ ಹಿನ್ನೆಲೆಯ ಭಿತ್ತಿಯಲ್ಲಿಯೇ ಹೇಗೆ ಈಡಾಡಿಬಿಡುತ್ತಾನೆ ಎನ್ನುವುದನ್ನು ಎದುರಿಗಿಟ್ಟುಕೊಂಡೇ 'ಅಲ್ಲಮನ ಬಯಲಾಟ' ನಾಟಕವನ್ನು ಕಟ್ಟಲಾಗಿದೆ.

ಇದರೊಂದಿಗೆ ತ್ಸಾವೋ, ಝೆನ್ ತತ್ವಪದಕಾರರು ವ್ಯಾಖ್ಯಾನಿಸಿರುವ ಶುನ್ಯ, ಖಾಲಿ ಮತ್ತು ಬಯಲು ತತ್ವವನ್ನು ಸಹಜವಾಗಿಯೇ ಅಪ್ಪಿಕೊಂಡ ಅಲ್ಲಮ ಎಲ್ಲಾ ಬಗೆಯ ಗುರುತು, ಮಿತ, ಗಡಿಗಳನ್ನು ಮೀರಿ ಹೋಗಿ ಶೂನ್ಯವನ್ನು ಶಿಕಾರಿ ಆಡುವುದನ್ನು ವಿವಿಧ ಪ್ರಸಂಗಗಳ ಮೂಲಕ ನಿರೂಪಿಸಲು ಪ್ರಯತ್ನಿಸುವ 'ಅಲ್ಲಮನ ಬಯಲಾಟ' ನಾಟಕವು ಆ ಕಾರಣಕ್ಕಾಗಿಯೇ ತುಂಬಾ ಮಹತ್ವದ ಕೃತಿಯಾಗಿದ್ದು, ನಾಟಕದ ತಾತ್ವಿಕತೆಯನ್ನು ರಂಗದ ಮೇಲೆ ಮಂಡಿಸಿವ ನೆಲೆಯಲ್ಲಿ ಈ ಪ್ರಯೋಗ ಅತ್ಯಂತ ಮಹತ್ವಪೂರ್ಣ ಎಂದು ನಾವು ನಂಬಿದ್ದೇವೆ. (ಒನ್ ಇಂಡಿಯಾ ಸುದ್ದಿ)

English summary
Allamana Bayalata is a play on the life History of Allama Prabhu. 'Allama' a prominent mystic saint (Vachanakar) in 12th century and who is a contemporary of "Basavanna". This Kannada drama will be staged at KH Kala Soudha on May 30, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X