ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಚ್ಚುಗೆ ಗಳಿಸಿದ ವಿಶ್ವ ಮಹಿಳಾ ಜಾನಪದ ನೃತ್ಯೋತ್ಸವ

By ಶಂಭು, ಹುಬ್ಬಳ್ಳಿ
|
Google Oneindia Kannada News

ಬೆಂಗಳೂರು, ಜನವರಿ, 25: ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಜಾನಪದದ ಸೊಗಡು ನಗರೀಕರಣ, ಗಡಿಬಿಡಿಯ ಬದುಕಿನಿಂದ ಕಣ್ಮರೆಯಾಗುತ್ತಿರುವ ನಡುವೆಯೇ ಬೆಂಗಳೂರು ನಗರದಲ್ಲಿ ವಿಶ್ವ ಮಹಿಳಾ ಜಾನಪದ ನೃತ್ಯೋತ್ಸವ ಮೂರು ದಿನಗಳ ಕಾಲ ನಡೆದಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.

ವಿಶ್ವ ಮಹಿಳಾ ಜಾನಪದ ನೃತ್ಯೋತ್ಸವವು ಅಂತಾರಾಷ್ಟ್ರೀಯ ಕಲೆ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನವಾದ ಮಹಾರಾಣಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಜರುಗಿದ್ದು, ಇದರಲ್ಲಿ ಭಾರತದ ನಾನಾ ಜಾನಪದ ನೃತ್ಯಗಳ ನಡುವೆ ಈಜಿಪ್ಟ್, ಲಿಬಿಯಾ, ಟರ್ಕಿ, ಟ್ಯುನೇಷಿಯಾ, ಇರಾಕ್ ದೇಶಗಳ ಜಾನಪದ ಕಲಾವಿದೆಯರು ನೃತ್ಯ ಮತ್ತು ಹಾಡಿನ ಸವಿಯನ್ನು ಜಾನಪದ ಆಸಕ್ತರಿಗೆ ಉಣಬಡಿಸಿದರು.

ವಿಶ್ವ ಮಹಿಳಾ ಜಾನಪದ ನೃತ್ಯೋತ್ಸವವನ್ನು ಉದ್ಘಾಟಿಸಿದ ಅಂತಾರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವ್ಯವಸ್ಥಾಪಕ ವಿಶ್ವಸ್ಥ ಶ್ರೀವತ್ಸ ಅವರು, 'ಹೆಣ್ಣಿನಲ್ಲಿ ಅಡಗಿರುವ ವಿಶೇಷ ಪ್ರತಿಭೆ ಹಾಗೂ ಆಕೆಯ ಆಂತರಿಕ ಶಕ್ತಿಯನ್ನು ತೋರಿಸುವುದಕ್ಕೆ ವ್ಯಕ್ತಪಡಿಸಲು ಅವಕಾಶ ನೀಡಿದೆ' ಎಂದು ಹೇಳಿದ್ದಾರೆ.[ಜಾನಪದ ಲೋಕದ ಮೇರು ನೃತ್ಯ ಹುಲಿವೇಷದ ಸುತ್ತ]

ಜನವರಿ 22 ರಿಂದ 24ರವರೆಗೆ ನಡೆದ ಮೂರು ದಿನಗಳ ಕಾಲ ನಡೆದ ಮಹಿಳಾ ಮಣಿಗಳ ಜಾನಪದ ನೃತ್ಯದ ಮೂಲಕ ಸನಾತನ ಜಾನಪದ ಕಲೆಗಳನ್ನು ಒಂದೇ ಸೂರಿನಡಿಯಲ್ಲಿ ನೋಡಿ ಆನಂದಿಸುವ ಸದವಕಾಶ ಲಭಿಸಿತು. ಬನ್ನಿ ಮಹಿಳಾ ಮಣಿಗಳ ಜಾನಪದ ನೃತ್ಯದ ಝಲಕ್ ನೋಡೋಣ.

ವಿಶ್ವ ಮಹಿಳಾ ನೃತ್ಯದಲ್ಲಿ ಪಾಲ್ಗೊಂಡ ತಂಡಗಳು

ವಿಶ್ವ ಮಹಿಳಾ ನೃತ್ಯದಲ್ಲಿ ಪಾಲ್ಗೊಂಡ ತಂಡಗಳು

ಕರ್ನಾಟಕ, ಕೇರಳ, ಪಂಜಾಬ್, ಈಜಿಪ್ಟ್, ಲಿಬಿಯಾ, ಟರ್ಕಿ, ಟ್ಯುನೇಷಿಯಾ, ಇರಾಕ್, ಒರಿಸ್ಸಾ ಹೀಗೆ ನಾನಾ ಕಡೆಗಳಿಂದ ಬಂದ ಮಹಿಳಾ ಮಣಿಗಳು ತಮ್ಮ ನೃತ್ಯದ ಮೂಲಕ ಜನರ ಮನಸೂರೆಗೊಂಡರು.

ಕೇರಳದ ಕುಟ್ಟಿಗಳ ನೃತ್ಯ

ಕೇರಳದ ಕುಟ್ಟಿಗಳ ನೃತ್ಯ

ಸುಂದರ ತಾಣಗಳ ಗಣಿಯಾದ ಕೇರಳ ನಾನಾ ಕಲೆಯಲ್ಲೂ ಇನ್ನಿತರರನ್ನು ಸೆಳೆಯುತ್ತಿದೆ. ಈ ಜಾನಪದ ನೃತ್ಯದಲ್ಲಿ ಭಾಗವಹಿಸಿದ ಕುಟ್ಟಿಗಳು ಭಾರತನಾಟ್ಯದಂತಹ ಭಂಗಿಯಲ್ಲಿ ಕಾಣಿಸಿದ್ದು ಹೀಗೆ.

ರಾಜಸ್ತಾನಿ ನಾರಿಯರು

ರಾಜಸ್ತಾನಿ ನಾರಿಯರು

ರಾಜಸ್ತಾನಿ ಮಹಿಳೆಯರಂತೂ ನೃತ್ಯದಲ್ಲಿ ಎತ್ತಿದ ಕೈ. ಮನೆಯ ಪ್ರತಿಯೊಂದು ಕಾರ್ಯಕ್ರಮದಲ್ಲೂ ನೃತ್ಯಕ್ಕೆ ಪ್ರಾಮುಖ್ಯತೆ ನೀಡುವ ಇವರು ವಿಶ್ವ ಮಹಿಳಾ ನೃತ್ಯದಲ್ಲಿ ಭಾಗವಹಿಸಿ ಬೆಂಗಳೂರಿನಲ್ಲೂ ಸೈ ಎನಿಸಿಕೊಂಡರು.

ಘಲ್ ಜಲ್ ಸಂಗೀತ ಹರಿಸಿದ ಮಹಿಳೆಯರು

ಘಲ್ ಜಲ್ ಸಂಗೀತ ಹರಿಸಿದ ಮಹಿಳೆಯರು

ನಾಗಚಂದ್ರಿಕಾ ಭಟ್ ಅವರಿಂದ ಘಲ್ ಜಲ್ ಸಂಗೀತದಲ್ಲಿ ಕನ್ನಡ, ಪಂಜಾಬಿ, ತಮಿಳು ಮುಂತಾದ ಭಾಷೆಗಳ ಹಾಡಿನ ಕಾರ್ಯಕ್ರಮ ನಡೆಸಿಕೊಟ್ಟರು.

ಡೊಳ್ಳು ಬಾರಿಸಿದ ಮಹಿಳೆಯರ ಗತ್ತು

ಡೊಳ್ಳು ಬಾರಿಸಿದ ಮಹಿಳೆಯರ ಗತ್ತು

ಡೊಳ್ಳು ಕುಣಿತ ಗಂಡು ಕಲೆ ಎಂದು ಖ್ಯಾತಿ ಆಗಿತ್ತು. ಈ ಪರಂಪರಾಗತ ವಾಕ್ಯವೇ ನಾಚುವಂತೆ ಮಾಡಿದ ಮಹಿಳಾ ಮಣಿಗಳು ಡೊಳ್ಳು ಬಾರಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಪುನಃ ವಿಶ್ವ ಮಹಿಳಾ ನೃತ್ಯ ನಡೆಯುವುದು ಯಾವಾಗ?

ಪುನಃ ವಿಶ್ವ ಮಹಿಳಾ ನೃತ್ಯ ನಡೆಯುವುದು ಯಾವಾಗ?

ಪ್ರತಿ ವರ್ಷವೂ ಈ ಕಾರ್ಯಕ್ರಮ ಜನವರಿ ತಿಂಗಳಲ್ಲಿ ಏರ್ಪಡಿಸುವ ಉದ್ದೇಶ ಪ್ರತಿಷ್ಠಾನ ಹೊಂದಿವೆ. 2017ರಲ್ಲಿ ಈ ಹಬ್ಬ 3,4,5 ಫೆಬ್ರವರಿಂದು ನಡೆಯಲಿದೆ.

English summary
International Arts and Cultural Foundation organized All Women World Folk Arts Festival in Bengaluru on January 22, 23, 24th. This folk dance inaugrated by K A Dayananda KAS Director, Department of Kannada & Culture Government of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X