ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀ ಕನ್ನಡ ವಾಹಿನಿ ಬಹಿಷ್ಕಾರಕ್ಕೆ ಬ್ರಾಹ್ಮಣ ಮಹಾಸಭಾದಿಂದ ಕರೆ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 09 : 'ಡ್ರಾಮಾ ಜ್ಯೂನಿಯರ್ಸ್' ಹಾಗೂ ಜೀ ಕನ್ನಡ ವಾಹಿನಿ ವಿರುದ್ಧ ಬ್ರಾಹ್ಮಣ ಸಮುದಾಯ ಕೋಪಗೊಂಡಿದೆ. ಬ್ರಾಹ್ಮಣ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ, ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಡ್ರಾಮಾ ಜ್ಯೂನಿಯರ್ಸ್ ನ ಮೂರನೇ ಎಪಿಸೋಡ್ ನಲ್ಲಿ ಬ್ರಾಹ್ಮಣರು ಹಾಗೂ ಪುರೋಹಿತರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ.

ಈ ಬಗ್ಗೆ ಜೀ ಕನ್ನಡ ವಾಹಿನಿ ಮುಖ್ಯಸ್ಥರು ಸ್ಪಷ್ಟನೆ ನೀಡಬೇಕು ಹಾಗೂ ಬೇಷರತ್ ಕ್ಷಮೆಯಾಚಿಸಬೇಕು ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಸದಸ್ಯರು ಆಗ್ರಹಿಸಿದ್ದಾರೆ.

ಕೋಪೋದ್ರೇಕದಿಂದ ಗುಟುರು ಹಾಕಿದ ಬ್ರಾಹ್ಮಣರು.!

ಶನಿವಾರ (ಆಗಸ್ಟ್ 5) ಪ್ರಸಾರ ಆದ ಸಂಚಿಕೆಯಲ್ಲಿ ಮಾಡಲಾದ ಮೊದಲ ಸ್ಕಿಟ್ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಸುಮಿತ್, ಶ್ರಾವ್ಯ, ಶ್ರೀಷಾ ಮತ್ತು ಅನುಪ್ ಮಾಡಿದ ಡ್ರಾಮಾ ಇದೀಗ ಬ್ರಾಹ್ಮಣ ಸಮುದಾಯವನ್ನ ಕೆರಳಿಸಿದೆ.

ಮಕ್ಕಳು ಮಾಡಿದ ಡ್ರಾಮಾದಲ್ಲಿ ಬ್ರಾಹ್ಮಣರನ್ನ ಹೀನಾಯವಾಗಿ ತೋರಿಸಲಾಗಿದೆ ಜೊತೆಗೆ ಕಾಮಭಂಗಿಗಳನ್ನು ಪ್ರದರ್ಶಿಸುವ ಪ್ರಹಸನ ನಡೆದಿದೆ ಎಂದು 'ಡ್ರಾಮಾ ಜ್ಯೂನಿಯರ್ಸ್' ತಂಡ ಹಾಗೂ ಜೀ ಕನ್ನಡ ವಾಹಿನಿ ವಿರುದ್ಧ ಬ್ರಾಹ್ಮಣ ಸಮುದಾಯ ತಿರುಗಿ ಬಿದ್ದಿದೆ.

ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮ

ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮ

ಮುಂದಿನ ವಾರದ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮ ಬರುವುದರ ಒಳಗಾಗಿ ಜೀ ಕನ್ನಡ ವಾಹಿನಿ ಬೇಷರತ್ತಿನ ಕ್ಷಮೆ ಕೇಳಲೇಬೇಕು ಎಂದು ಬ್ರಾಹ್ಮಣ ಸಮುದಾಯದವರು ಒತ್ತಾಯಿಸಿದ್ದಾರೆ. ಈ ಕುರಿತಂತೆ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದಿಂದ ಜೀ ಕನ್ನಡ ವಾಹಿನಿಯ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ.

ಫೇಸ್ ಬುಕ್ ನಲ್ಲಿ ಪ್ರತಿಭಟನೆ

ಫೇಸ್ ಬುಕ್ ನಲ್ಲಿ ಪ್ರತಿಭಟನೆ

ಫೇಸ್ ಬುಕ್ ನಲ್ಲಿ ಈ ವಿವಾದ ಬಗ್ಗೆ ಭಾರಿ ಪ್ರತಿಭಟನೆ ಕಂಡು ಬಂದಿದ್ದು, ಅನೇಕ ಮಂದಿ, ಜೀ ಕನ್ನಡ ವಾಹಿನಿ ವಿರುದ್ಧ ಕಿಡಿಕಾರಿದ್ದಾರೆ.'ಹಾಸ್ಯಕ್ಕೆ ಮೊದಲು ನೆನಪಿಗೆ ಬರುವುದೇ ಬ್ರಾಹ್ಮಣರು. ಯಾಕೆ ಹೀಗೆ.? ಎಂದು ಪ್ರಶ್ನಿಸಿದ್ದಾರೆ. ಜೀ ವಾಹಿನಿಯ ದೂರವಾಣಿ ಸಂಖ್ಯೆಯನ್ನು ನೀಡಿ ಕರೆ ಮಾಡಿ ಉಗಿಯುವಂತೆ ಕೇಳಲಾಗಿದೆ.

ಬ್ರಾಹ್ಮಣ ಮಹಾಸಭಾದ ಪತ್ರ

ಬ್ರಾಹ್ಮಣ ಮಹಾಸಭಾದ ಪತ್ರ

ಆಗಸ್ಟ್ 05ರಂದು ಪ್ರಸಾರವಾದ ಡ್ರಾಮಾ ಜ್ಯೂನಿಯರ್ಸ್ ಎಪಿಸೋಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬರೆದಿರುವ ಪತ್ರದಲ್ಲಿ, ಸಮಾಜದಲ್ಲಿ ಸಾರ್ವಜನಿಕರಿಗೆ ಬ್ರಾಹ್ಮಣರ ಬಗ್ಗೆ ಕೀಳರಿಮೆ ಉಂಟಾಗುವ ರೀತಿಯಲ್ಲಿ ಚಿತ್ರಿಸಲಾಗ್ದೆ. ಇದರಿಂದ ಬ್ರಾಹ್ಮಣ ಜನಾಂಗಕ್ಕೆ ನೋವುಂಟಾಗಿದೆ. ಜೀ ಕನ್ನಡದಿಂದ ಸಂವಿಧಾನ ಬಾಹಿರ ಕೃತ್ಯವಾಗಿದೆ. ಪತ್ರಿಕಾ ಮಾಧ್ಯಮಗಳ ಮೌಲ್ಯ ನಾಶವಾಗಿದೆ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ಪಷ್ಟನೆ ಕೋರಿದೆ.

ಪ್ರತಿಭಟನೆಯ ಎಚ್ಚರಿಕೆ

ಪ್ರತಿಭಟನೆಯ ಎಚ್ಚರಿಕೆ

ಮುಗ್ಧ ಮಕ್ಕಳನ್ನು ಬಳಸಿಕೊಂಡು ಬ್ರಾಹ್ಮಣ ತೇಜೋವಧೆ ಮಾಡಲಾಗಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ದೂರು ನೀಡಿ, ಕಾರ್ಯಕ್ರಮ ಬಂದ್ ಆಗುವಂತೆ ಮಾಡಲಾಗುವುದು. ಜೀ ಕನ್ನಡ ವಾಹಿನಿ ಬಹಿಷ್ಕಾರಕ್ಕೆ ಕರೆ ನೀಡಲಾಗುವುದು. ಜೀ ಕನ್ನಡ ವಾಹಿನಿಯವರು ಬೇಷರತ್ ಕ್ಷಮಾಪಣೆ ಕೇಳದಿದ್ದರೆ, ಕಾನೂನು ಕ್ರಮಕ್ಕೆ ಮುಂದಾಗಲಾಗುವುದು ಎಂದು ಮಹಾಸಭಾದ ಅಧ್ಯಕ್ಷರಾದ ಕೆ.ಎನ್ ವೆಂಕಟ ನಾರಾಯಣ ಅವರು ತಿಳಿಸಿದ್ದಾರೆ.

English summary
Akhila Karnataka Brahmin Mahasabha has condemned Zee Kannada's popular reality show Drama Juniors's act in episode 3. Brahmin community demanded apology from Zee Kannada for defaming and insulting the community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X