ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷ್ಣ ಅವರು ಬಿಜೆಪಿ ಸೇರುವ ಸಮಯಕ್ಕೆ ಬಿಎಸ್ವೈ ಸಾಕ್ಷಿ ಆಗಿರಲ್ಲ!

ಎಸ್ಸೆಂ ಕೃಷ್ಣ ಅವರು ಮಾರ್ಚ್ 15ರ ಮಧ್ಯಾಹ್ನ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇರುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಕೃಷ್ಣ ಅವರ ಸೇರ್ಪಡೆ ಮುಹೂರ್ತ ಪುನರ್ ನಿಗದಿಯಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 21: ಮಾಜಿ ವಿದೇಶಾಂಗ ಸಚಿವ, ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಬಿಜೆಪಿ ಸೇರ್ಪಡೆ ಮುಂದೂಡಲಾಗಿದೆ. ಎಸ್ಸೆಂ ಕೃಷ್ಣ ಅವರು ಮಾರ್ಚ್ 15ರ ಮಧ್ಯಾಹ್ನ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇರುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಕೃಷ್ಣ ಅವರ ಸೇರ್ಪಡೆ ಮುಹೂರ್ತ ಪುನರ್ ನಿಗದಿಯಾಗಿದೆ.

ಬುಧವಾರ(ಮಾರ್ಚ್ 22) ದಂದು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರನ್ನು ಭೇಟಿ ಮಾಡಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.[ಎಸ್ಸೆಂ ಕೃಷ್ಣ ಅವರಿಗೆ ಬಿಜೆಪಿಯಿಂದ ಭರ್ಜರಿ ಆಫರ್]

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ನಾನು ಸದ್ಯ ಮೈಸೂರಿನಲ್ಲಿ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದೇನೆ. ಕೃಷ್ಣ ಅವರು ಬಿಜೆಪಿ ಸೇರ್ಪಡೆಯಾಗುವ ಸಮಯಕ್ಕೆ ನಾನು ದೆಹಲಿಯಲ್ಲಿರಲು ಅಗುತ್ತಿಲ್ಲ. ಮುಂದೊಂದು ದಿನ ದೊಡ್ಡ ಸಮಾರಂಭ ಆಯೋಜಿಸಿ, ಅವರಿಗೆ ಭವ್ಯ ಸ್ವಾಗತ ಕೋರಲಾಗುವುದು ಎಂದರು.[ಎಸ್ಎಂ ಕೃಷ್ಣ ಬಿಜೆಪಿ ಸೇರಿದರೆ ಆಗುವ ಲಾಭನಷ್ಟಗಳೇನು?]

After a week's delay, S M Krishna to join BJP on Wednesday

ಬೆಂಗಳೂರಿನಲ್ಲಿ ಕೃಷ್ಣ ಅವರ ಸೋದರಿ ಸುನೀತಾ ಅವರು ನಿಧನರಾದ ಹಿನ್ನಲೆಯಲ್ಲಿ ಕೃಷ್ಣ ಅವರು ತಕ್ಷಣವೇ ದೆಹಲಿಯಿಂದ ಬೆಂಗಳೂರಿಗೆ ಹಿಂತಿರುಗಿದ್ದರು. ಜನವರಿ ತಿಂಗಳಿನಲ್ಲಿ ಕಾಂಗ್ರೆಸ್ ನಂಟು ಕಳಚಿಕೊಂಡ ಕೃಷ್ಣ ಅವರಿಗೆ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.[ಹಡಗೇ ಮುಳುಗಿದೆ, ಕಳ್ಕೊಂಡಿದ್ದು ಅಡಿಕೆ ಚೂರು ಅಂತಾರೆ ರಾಹುಲ್ ಗಾಂಧಿ]

English summary
A week after his plan of joining the BJP was postponed, S M Krishna is all set to go ahead. Veteran politician and former Chief Minister of Karnataka, S M Krishna will be inducted into the BJP on Wednesday. He is expected to join the party in the presence of BJP national president Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X