ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆ ಆಯ್ತು, ಇದೀಗ ಬೆನ್ನಿಗನಹಳ್ಳಿ ಕೆರೆಯಲ್ಲೂ ಬೆಂಕಿ!

ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಆದರೆ ಇದೀಗ ಬೆಂಗಳೂರಿನ ಬೆನ್ನಿಗನಹಳ್ಳಿಯ ಕೆರೆಯೊಂದರಲ್ಲೂ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಈ ಪ್ರದೇಶದ ಜನರನ್ನು ಆತಂಕಕ್ಕೀಡು ಮಾಡಿತ್ತು.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಬೆಳ್ಳಂದೂರು ಕೆರೆಯಲ್ಲಿ ನೊರೆ ಮತ್ತು ಬೆಂಕಿ ಕಾಣಿಸಿಕೊಂಡು, ಬಿಬಿಎಂಪಿ, ಬಿಡಿಎ ಅಧಿಕಾರಿಗಳನ್ನು ರಾಷ್ಟ್ರೀಯ ಹಸಿರು ಪ್ರಾಧಿಕಾರ ತರಾಟೆಗೆ ತೆಗೆದುಕೊಂಡಿದ್ದು ಹಳೇ ವಿಷಯ. ಈಗಾಗಲೇ ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯವೂ ಆರಂಭವಾಗಿದೆ. ಆದರೆ ಇದೀಗ ಬೆಂಗಳೂರಿನ ಬೆನ್ನಿಗನಹಳ್ಳಿಯ ಕೆರೆಯೊಂದರಲ್ಲೂ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಈ ಪ್ರದೇಶದ ಜನರನ್ನು ಆತಂಕಕ್ಕೀಡು ಮಾಡಿತ್ತು.

ಬೆಳ್ಳಂದೂರು ಕೆರೆಯಂತೆಯೇ, ಇಲ್ಲಿಯೂ ಕೆರೆಯನ್ನೇ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿದ್ದರಿಂದ ಕೆರೆಯಲ್ಲಿ ಈಗಾಗಲೇ ಸಾಕಷ್ಟು ರಾಸಾಯನಿಕಗಳು ಶೇಖರಗೊಂಡಿವೆ. ನೀರೂ ಮಾಲಿನ್ಯಕ್ಕೊಳಗಾಗಿದೆ. ಇದರಿಂದಾಗಿಯೇ ಕೆರೆಯಲ್ಲಿ ಬೆಂಕಿ ಕಾಣಿಸಿಕೊಡಂಇದೆ ಎಂಬುದು ಸ್ಥಳೀಯರ ಅಂಬೋಣ.[ಬೆಂಗಳೂರಿನಲ್ಲಿ ಕಸ ಸುಡುವವರಿಗೂ ದಂಡ!]

After Bellandur lake, now fire finds in Benniganahalli lake!

ಈ ಬಗ್ಗೆ ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ಈಗಲೇ ಕ್ರಮ ಕೈಗೊಳ್ಳದಿದ್ದಲ್ಲಿ ಇದೂ ಮತ್ತೊಂದು ಬೆಳ್ಳಂದೂರು ಕೆರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಈ ಭಾಗದ ಜನರ ಆಕ್ರೋಶದ ನುಡಿ. ಈ ಬಗ್ಗೆ ಬಿಡಿಎ ಕ್ರಮ ಕೈಗೊಳ್ಳುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.

English summary
After Bellandur lake, another lake, near Benniganahalli, Bengaluru was up in flames. The dumping og garbage into the lake is the reason for the fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X