ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮ-ಬೆಸ ಸೂತ್ರದ ವಾಹನ ಸಂಚಾರ ಬೆಂಗಳೂರಿಗೆ ಬರಲಿ

|
Google Oneindia Kannada News

ಬೆಂಗಳೂರು, ಜನವರಿ 09 : ಉದ್ಯಾನ ನಗರಿ ಬೆಂಗಳೂರಿನಲ್ಲಿಯೂ ಸಮ-ಬೆಸ ಸೂತ್ರದ ವಾಹನ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ. ದೆಹಲಿಯಲ್ಲಿ ಈ ಸೂತ್ರ ಯಶಸ್ವಿಯಾಗಿದ್ದು, ಬೆಂಗಳೂರಿನಲ್ಲಿಯೂ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರಬೇಕು ಎಂದು ಪಕ್ಷ ಸರ್ಕಾರಕ್ಕೆ ಮನವಿ ಮಾಡಿದೆ.

ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಮಾಲಿನ್ಯ ನಿಯಂತ್ರಿಸಲು ಜಾರಿಗೆ ತಂದಿರುವ ಸಮ-ಬೆಸ ಸೂತ್ರ ಯಶಸ್ವಿಯಾಗಿದೆ. ದೆಹಲಿಯ ಜನತೆ ಮುಂದಿನ ಪೀಳಿಗೆಗೆ ಆರೋಗ್ಯಯುತ ಪರಿಸರ ನೀಡುವ ಸಲುವಾಗಿ ಇದನ್ನು ಚಳುವಳಿಯಾಗಿಸಿದ್ದಾರೆ. ಇದನ್ನು ಬೆಂಗಳೂರಿನಲ್ಲಿ ಜಾರಿಗೆ ತರಬಹುದು ಎಂದು ಪಕ್ಷ ಹೇಳಿದೆ. [ದೆಹಲಿ ಸಮ-ಬೆಸ ಸಂಚಾರ ನಿಯಮದ ಪ್ರಮುಖ ಅಂಶಗಳು]

vehicle

ಉದ್ಯಾನ ನಗರಿ ಬೆಂಗಳೂರಿಗೂ ಮಾಲಿನ್ಯದ ಬಿಸಿ ತಟ್ಟುತ್ತಲೇ ಇದೆ. ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಇಂತಹ ಸಂಧರ್ಭದಲ್ಲಿ ರಾಜ್ಯ ಸರ್ಕಾರ ತುರ್ತು ಪರಿಹಾರ ಕಾರ್ಯಗಳಲ್ಲಿ ತೊಡಗಬೇಕಿದ್ದು, ದೆಹಲಿಯ ಯಶಸ್ವಿ ಸೂತ್ರವಾದ ಸಮ-ಬೆಸ ಸಂಖ್ಯೆಯ ಕಾರುಗಳ ಓಡಾಟವನ್ನು ಬೆಂಗಳೂರಿನಲ್ಲೂ ಪ್ರಯೋಗಿಸಬೇಕಿದೆ ಎಂದು ತಿಳಿಸಿದೆ.[ಸಮ-ಬೆಸ ಯಾರಿಗೆ ಲಾಭ? ಕೇಜ್ರಿಗೆ ದಿಲ್ಲಿ ಹೈಕೋರ್ಟ್ ಪ್ರಶ್ನೆ]

55ಲಕ್ಷ ವಾಹನಗಳ ನೋಂದಣಿ : ದೆಹಲಿಯ ನಂತರ ಬೆಂಗಳೂರು ದೇಶದ ಅತ್ಯಂತ ಮಾಲಿನ್ಯ ಪೀಡಿತ ನಗರವಾಗಿದೆ. ಬೆಂಗಳೂರು ನಗರದಲ್ಲಿ 55 ಲಕ್ಷಕ್ಕೂ ಹೆಚ್ಚು ವಾಹನಗಳ ನೋಂದಣಿಯಾಗಿದೆ. ಇವುಗಳಲ್ಲಿ ಶೇಕಡ 21ರಷ್ಟು ಟ್ಯಾಕ್ಸಿಯೇತರ ಕಾರುಗಳಿವೆ. ಮಾಲಿನ್ಯದ ಪ್ರಮಾಣ ಈ ಮಟ್ಟದಲ್ಲಿ ಹೆಚ್ಚುತ್ತಿರುವ ಈ ಸಂಧರ್ಭದಲ್ಲಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಸರ್ಕಾರ ಸಮ-ಬೆಸ ಸೂತ್ರ ಜಾರಿಗೆ ತರಬೇಕಾಗಿದೆ.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಸಮ-ಬೆಸ ಸೂತ್ರ ಜಾರಿಗೆ ತಂದಿದ್ದಲ್ಲದೇ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತಗೆದುಕೊಂಡು, ಮಾಲಿನ್ಯ ನಿಯಂತ್ರಿಸುವ ಕೆಲಸದಲ್ಲಿ ಸಾರ್ವಜನಿಕರನ್ನು ಒಂದುಗೂಡಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಸರ್ಕಾರ ಯಶಸ್ವಿಗೊಳಿಸಿದ ಜನಪರ ಕಾರ್ಯವನ್ನು ಇನ್ನೊಂದು ಸರ್ಕಾರ ಜಾರಿಗೆ ತರಬಹುದಾಗಿದೆ. ಬೆಂಗಳೂರು ನಗರದ ಹಿತಾಸಕ್ತಿಯ ದೃಷ್ಠಿಯಿಂದ ತಕ್ಷಣವೇ ಈ ಸೂತ್ರವನ್ನು ಪ್ರಾಯೋಗಿಕವಾಗಿ ಜಾರಿಗೆ ತರುವ ಕೆಲಸಕ್ಕೆ ಸರ್ಕಾರ ಕೈ ಹಾಕಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

English summary
Aam Aadmi Party Karnataka urged the Karnataka government to implement odd-even traffic plan in Bengaluru city. Odd-even traffic plan successful in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X