ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಸಿದ್ದರಾಮಯ್ಯರಿಗೆ ಸಾಂತ್ವನ ಹೇಳಿದ ನಟಿ ಖುಷ್ಬು

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 04: ಹಿರಿಯ ಮಗ ರಾಕೇಶ್ ರನ್ನು ಕಳೆದುಕೊಂಡ ದುಃಖದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಬುಧವಾರದಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪಕ್ಷಾತೀತವಾಗಿ ಹಲವಾರು ಗಣ್ಯರು ಸಿದ್ದರಾಮಯ್ಯ ಅವರಿಗೆ ಸಾಂತ್ವನ ಹೇಳಿದ್ದಾರೆ.

ನಟಿ ಕಮ್ ರಾಜಕಾರಣಿ, ಕಾಂಗ್ರೆಸ್ ವಕ್ತಾರೆ ಖುಷ್ಬೂ ಸುಂದರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ನಂತರ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. [ಫ್ಯಾನ್ಸ್ ಪಾಲಿನ ದೇವರು: ಸೆಲೆಬ್ರಿಟಿಗಳಿಗೊಂದು ಗುಡಿ]

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಬುಧವಾರ ಸಂಜೆ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ಅಧಿಕೃತ ನಿವಾಸ ಕೃಷ್ಣಾದಲ್ಲಿ ಭೇಟಿ ಮಾಡಿದ್ದರು. [ಉ.ಕು.ಸಾಂ ಸಿದ್ದರಾಮಯ್ಯ- ದೇವೇಗೌಡ ಭೇಟಿ]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸಾವಿಗೆ ಜಾತಿ, ಪಕ್ಷ, ಪಂಥ ಬೇಧ ಮರೆತು ನೈತಿಕ ಸ್ಥೈರ್ಯ ತುಂಬಿ ಸಾಂತ್ವನ ಹೇಳಿರುವ ಎಲ್ಲಾ ಸಹೃದಯಿಗಳ ಪ್ರೀತಿಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. [ಕಾಂಗ್ರೆಸ್ ವಕ್ತಾರರಾಗಿ ದಿನೇಶ್, ಖುಷ್ಬೂ ನೇಮಕ]

ರಣಧೀರ, ಅಂಜದ ಗಂಡು, ಯುಗಪುರುಷ ಮುಂತಾದ ಹಿಟ್ ಚಿತ್ರದ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ 2005ರ ತನಕ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡರು. ಬಹುಭಾಷಾ ತಾರೆ ಖುಷ್ಬೂ ಅವರಿಗೆ ಬೆಂಗಳೂರು, ಕರ್ನಾಟಕದ ಜನತೆ ಪ್ರೀತಿ, ವಿಶ್ವಾಸ ಏನು ಹೊಸದಲ್ಲ.

ಅಧಿಕೃತ ನಿವಾಸ ಕೃಷ್ಣಾದಲ್ಲಿ ಭೇಟಿ

ಅಧಿಕೃತ ನಿವಾಸ ಕೃಷ್ಣಾದಲ್ಲಿ ಭೇಟಿ

ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕೃಷ್ಣಾದಲ್ಲಿ ಭೇಟಿ ನಂತರ ಟ್ವೀಟ್ ಮಾಡಿದ ಖುಷ್ಬು, ತಮಿಳುನಾಡಿನ ಡಿಎಂಕೆ ಮುಖಂಡ ಎಂ ಕರುಣಾನಿಧಿ ಅವರು ಕೂಡಾ ಸಂತಾಪ ಸೂಚಿಸಿದ್ದರು

ಸಾಂತ್ವನ ಹೇಳಿದೆ, ಅವರಿಗೆ ದೇವರು ಶಕ್ತಿ ನೀಡಲಿ

ಸಿದ್ದರಾಮಯ್ಯ ಅವರಿಗೆ ಸಾಂತ್ವನ ಹೇಳಿದೆ, ದೇವರು ಅವರು ದುಃಖ ಭರಿಸುವ ಶಕ್ತಿ ನೀಡಲಿ

ಸಿದ್ದರಾಮಯ್ಯ ಅವರು ಆಗಲೇ ಕಾರ್ಯನಿರತರಾಗಿದ್ದಾರೆ

ಸಿದ್ದರಾಮಯ್ಯ ಅವರು ಆಗಲೇ ಕಾರ್ಯನಿರತರಾಗಿದ್ದಾರೆ, ಅವರ ದುಃಖ ಶಮನವಾಗಲಿ ಎಂದು ಪ್ರಾರ್ಥಿಸೋಣ.

ಐಟಿ ಸೆಲ್ ಸಿಎಂ ಬಗ್ಗೆ ಇನ್ನಷ್ಟು ಪ್ರಚಾರ ನೀಡಬೇಕು

ಐಟಿ ಸೆಲ್ ಸಿಎಂ ಸಿದ್ದರಾಮಯ್ಯ ಬಗ್ಗೆ ಇನ್ನಷ್ಟು ಪ್ರಚಾರ ನೀಡಬೇಕು

ರಾಜಕೀಯ ಮುತ್ಸದ್ಧಿ ಎಂದರೆ ಹೀಗಿರಬೇಕು

ರಾಜಕೀಯ ಮುತ್ಸದ್ಧಿ ಎಂದರೆ ಹೀಗಿರಬೇಕು, ವೈಯಕ್ತಿಕ ನೋವು ಮರೆತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

English summary
Actress cum Politician Khushboo meets CM of Karnataka Siddaramaiah later she tweeted like this -today morning and offered my condolences..no parent should go through this pain..hope times heals
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X