ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ದೊಡ್ಡ ಕಾಲೇಜ್ ಫೆಸ್ಟ್ :ಆಚಾರ್ಯ ಹಬ್ಬ

By Mahesh
|
Google Oneindia Kannada News

ಬೆಂಗಳೂರಿನ ಬಹುನಿರೀಕ್ಷಿತ ಅತಿದೊಡ್ಡ ಕಾಲೇಜು ಹಬ್ಬ ಟೆಕ್ನೋ ಸಾಂಸ್ಕೃತಿಕ ಹಬ್ಬ-ಆಚಾರ್ಯ ಹಬ್ಬವಾಗಿ ವರ್ಣಮಯ ಚಾಲನೆ ಪಡೆಯಲು ಸಿದ್ಧವಾಗಿದೆ. ಸುಮಾರು 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬೃಹತ್ ಹಬ್ಬದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಎರಡು ದಿನ ವಿವಿಧ ಸಂಸ್ಕೃತಿ ಹಾಗೂ ಪ್ರಾದೇಶಿಕ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳಿಗೆ ಒಂದು ಉತ್ತಮವಾದ ಸಂವಹನ ವೇದಿಕೆ ಒದಗಿಸಲಿದೆ.ತಾಂಜಾನಿಯಾ, ಇರಾಕ್, ಭೂತಾನ್, ಯುನೈಟೆಡ್ ಕಿಂಗ್ ಡಮ್, ಅಫ್ಘಾನಿಸ್ತಾನ, ದಕ್ಷಿಣ ಕೊರಿಯಾದ ವಿದ್ಯಾರ್ಥಿಗಳು ತಮ್ಮ ದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪರಿಚಯಿಸಲಿದ್ದಾರೆ. [ಸಂಭ್ರಮದಿಂದ ನಲಿದಾಡಿದ ಆಚಾರ್ಯ ಹಬ್ಬ 2014]

ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಂಭ್ರಮದಿಂದ ಆಚಾರ್ಯ ಹಬ್ಬ ನಡೆಯಲಿದ್ದು, ಸುಮಾರು 40ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು 40ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಚಾರ್ಯ ಕ್ಯಾಂಪಸ್ ನ ನಾಗರತ್ನಮ್ಮ ಸ್ಟೇಡಿಯಂನಲ್ಲಿ ಆಚಾರ್ಯ ಇನ್ಸ್ ಸ್ಟಿಟ್ಯೂಟ್ ನ 120 ಎಕರೆ ವಿಶಾಲ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಒಟ್ಟಿಗೆ ಕಲೆತು ಹಾಡಿ ನಲಿದು ಕುಣಿದಾಡುವ ದೃಶ್ಯ ಸದಾ ಸ್ಮರಣೀಯ ಎಂದು ಕಳೆದ ವರ್ಷ ಹಬ್ಬದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಇಂದಿಗೂ ಸ್ಮರಿಸುತ್ತಾರೆ.

ಆಚಾರ್ಯ ಹಬ್ಬದ ರಂಗು

ಆಚಾರ್ಯ ಹಬ್ಬದ ರಂಗು

ಸಾಂಸ್ಕೃತಿಕ ನೃತ್ಯ ವೈಭವ, ರಂಗು ರಂಗಿನ ಉಡುಗೆ ತೊಡುಗೆಗಳನ್ನು ತೊಟ್ಟ ವಿದ್ಯಾರ್ಥಿಗಳ ಬೆಕ್ಕಿನ ನಡಿಗೆ ಜತೆಗೆ ಡ್ರಾಗ್ ರೇಸ್, ಬೇಗ್ ಬಾರೋ ಸ್ಟೀಲ್, ಎಥನಿಕಲ್ ಹ್ಯಾಕಿಂಗ್, ವಿಡಿಯೋ ಗೇಮ್ಸ್ ಕಾರ್ಯಕ್ರಮಗಳನ್ನು ನಿರೀಕ್ಷಿಸಬಹುದು.

ದೇಶಿ ಹಬ್ಬದಲ್ಲಿ ದೇಶಿ ಆಟದ ರಂಗು

ದೇಶಿ ಹಬ್ಬದಲ್ಲಿ ದೇಶಿ ಆಟದ ರಂಗು

ಕುಂಟೆ ಬಿಲ್ಲೆ, ಬುಗುರಿ, ಲಗೋರಿ, ಗೋಲಿ ಆಟ ಕೂಡಾ ಇತ್ತು. ವಿದೇಶಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಯಾರಿ

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಯಾರಿ

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಯಾರಿ ಜೋರಾಗಿ ನಡೆದಿದೆ.

ಎರಡು ತಿಂಗಳು ಹಬ್ಬದ್ದೇ ಮಾತು

ಎರಡು ತಿಂಗಳು ಹಬ್ಬದ್ದೇ ಮಾತು

ಆಚಾರ್ಯ ವಿದ್ಯಾಸಂಸ್ಥೆಗಳ 11 ಕಾಲೇಜುಗಳು ಸೇರಿದಂತೆ ವಿವಿಧ ಕಾಲೇಜುಗಳು ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಆಚಾರ್ಯ ಹಬ್ಬದಲ್ಲಿ ಪಾಲ್ಗೊಳ್ಳಲಿವೆ.

ಆಚಾರ್ಯ ಹಬ್ಬಕ್ಕಾಗಿ ಹೊಸ ಥೀಮ್ ಸಾಂಗ್

ಆಚಾರ್ಯ ಹಬ್ಬಕ್ಕಾಗಿ ಹೊಸ ಥೀಮ್ ಸಾಂಗ್

ಪ್ರತಿವರ್ಷ ಆಚಾರ್ಯ ಹಬ್ಬಕ್ಕಾಗಿ ಹೊಸ ಥೀಮ್ ಸಾಂಗ್ ವಿನ್ಯಾಸಗೊಳಿಸಲಾಗುತ್ತದೆ. ಥೀಮ್ ಸಾಂಗ್ ಕೇಳಲು ಕಾತುರದಿಂದ ಪ್ರೇಕ್ಷಕರು ಕಾತು ಕುಳಿತಿರುವ ದೃಶ್ಯ.

English summary
Acharya Habba is a National Techno- cultural fest hosted by Acharya Institutes every year. It is renowned to be the biggest college event across India with over 30,000 students from various colleges being part of it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X