ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಿರುದ್ಧ 400 ಕೋಟಿ ರು. ಹಗರಣದ ಆರೋಪ ಮಾಡಿದ ಆಪ್

ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್) ತೆರಿಗೆ ಸಂಗ್ರಹ ವಿಚಾರದಲ್ಲಿ ಬಿಬಿಎಂಪಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದಿರುವುದಾಗಿ ಹೇಳಿಕೊಂಡಿರುವ ಆಮ್ ಆದ್ಮಿ ಪಕ್ಷ

|
Google Oneindia Kannada News

ಬೆಂಗಳೂರು, ಜನವರಿ 20: ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್) ತೆರಿಗೆ ಸಂಗ್ರಹ ವಿಚಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬರೋಬ್ಬರಿ 400 ಕೋಟಿ ರು.ಗಳ ಅವ್ಯವಹಾರವಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಆಪ್) ಕರ್ನಾಟಕ ಘಟಕ ಆರೋಪಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ, ಪ್ರತೀ ವಾರ್ಡಿನಲ್ಲಿ ವ್ಯಾಪಾರ ಅಂಗಡಿಗಳ ಒಟ್ಟು ಸಂಖ್ಯೆಯನ್ನು ಹಾಗೂ ಅವುಗಳಿಂದ ಸಂಗ್ರಹವಾಗುತ್ತಿರುವ ತೆರಿಗೆ ವು ಬಿಬಿಎಂಪಿಗೆ ಹರಿದು ಬರುವ ಅತೀ ಪ್ರಮುಖ ತೆರಿಗೆ ಆದಾಯದಲ್ಲಿ ಒಂದಾಗಿದೆ. ಆರ್.ಟಿ.ಐ.ನಡಿ ಪಕ್ಷವು ಸಲ್ಲಿಸಿದ್ದ ಅರ್ಜಿಗೆ ಬಿಬಿಎಂಪಿ ನೀಡಿರುವ ದಾಖಲೆಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

AAP accuses BBMP for 400 cr. scandal

ಬಿಬಿಎಂಪಿ ನೀಡಿರುವ ದಾಖಲೆಗಳಲ್ಲಿ, ಬೆಂಗಳೂರಿನಲ್ಲಿ ಕೇವಲ 33,896 ವ್ಯಾಪಾರಿ ಮಳಿಗೆಗಳಿವೆ ಎಂದು ನಮೂದಿಸಲಾಗಿದೆ. 2015-16ನೇ ಸಾಲಿನಲ್ಲಿ 41,075 ವ್ಯಾಪಾರ ಮಳಿಗೆಗಳಿರುವ ಬೆಂಗಳೂರಿನಲ್ಲಿ ವರ್ಷಂಪ್ರತಿ ಹೆಚ್ಚಬೇಕಿದ್ದ ವ್ಯಾಪಾರಿ ಮಳಿಗೆಗಳ ಸಂಖ್ಯೆ 2016-17ನೇ ಸಾಲಿನಲ್ಲಿ 33,896ಕ್ಕೆ ಇಳಿದಿರುವುದಾಗಿ ಬಿಬಿಎಂಪಿ ಹೇಳಿದೆ. ಇವುಗಳಿಂದ 30,85,02,955 (30.85 ಕೋಟಿ) ರೂಪಾಯಿ ತೆರಿಗೆ ಸಂಗ್ರಹವಾಗಿರುವುದಾಗಿ ಬಿಬಿಎಂಪಿ ತಿಳಿಸಿದೆ. ಆದರೆ ಇದು ಸುಳ್ಳು ಮಾಹಿತಿ ಎಂದು ಪಕ್ಷ ವಿವರಿಸಿದೆ.

ಈ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿರುವ ಒಟ್ಟು ವ್ಯಾಪಾರಿ ಮಳಿಗೆಗಳ ನಿಜವಾದ ಸಂಖ್ಯೆಯನ್ನು ಗುರುತಿಸಲು, ಆಮ್ ಆದ್ಮಿ ಪಾರ್ಟಿಯು ಕರ್ನಾಟಕ ಬೆಸ್ಕಾಂನಿಂದ ಇಡೀ ಬೆಂಗಳೂರು ನಗರದಲ್ಲಿ ಒದಗಿಸಲಾಗಿರುವ ವಾಣಿಜ್ಯ ವಿದ್ಯುತ್ ಸಂಪರ್ಕಗಳ ವಿವರಗಳನ್ನು ಪಡೆದಿದೆ. ಇದರಿಂದ, ಬೆಂಗಳೂರಿನಲ್ಲಿ ಸರಿ ಸುಮಾರು 6 ಲಕ್ಷ ವಾಣಿಜ್ಯ ವಿದ್ಯುತ್ ಸಂಪರ್ಕಗಳು (ಬೆಂಗಳೂರು ಮೆಟ್ರೋಪಾಲಿಟನ್ ಎರಿಯಾ ಜೋನ್) ಇರುವುದು ಕಂಡು ಬಂದಿದೆ ಎಂದು ಪಕ್ಷ ಹೇಳಿದೆ.

AAP accuses BBMP for 400 cr. scandal

ಈ ಮೂಲಕ ಬೆಂಗಳೂರಿನ ಎಲ್ಲಾ 198 ವಾರ್ಡ್‍ಗಳಲ್ಲಿ ಸುಮಾರು 4 ಲಕ್ಷ ವ್ಯಾಪಾರಿ ಮಳಿಗೆಗಳಿರುವುದು ನಮಗೆ ತಿಳಿದು ಬರುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ನೀಡಿರುವ ಮಾಹಿತಿಯ ಅನುಗುಣವಾಗಿ ಈಗಾಗಲೇ ಗುರುತಿಸಿ ವ್ಯಾಪಾರ ಪರವಾನಗಿ ಹೊಂದಿರುವ ಅಂಗಡಿಗಳು ವರ್ಷಂಪ್ರತಿ (ಕನಿಷ್ಠ 1000 ರೂಪಾಯಿಂದ ಗರಿಷ್ಠ 50,000 ರೂಪಾಯಿವರೆಗೂ) ಅಂದಾಜು 9,500 ರೂಪಾಯಿ ತೆರಗೆ ಕಟ್ಟುತ್ತಿವೆ. ಈ ನಿಟ್ಟಿನಲ್ಲಿ 4 ಲಕ್ಷ ವ್ಯಾಪಾರಿ ಮಳಿಗೆಗಳಿಂದ ಸುಮಾರು 400 ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆ ಖೋತಾಕ್ಕೆ ಸ್ಥಳೀಯ ಕಾಪೋರೇಟರ್ ಗಳು, ತೆರಿಗೆ ಸಂಗ್ರಹ ಸ್ಥಾಯಿ ಸಮಿತಿಯ ಸದಸ್ಯರು ಹಾಗೂ ಖುದ್ದು ಮೇಯರ್ ನೇರವಾಗಿ ಭಾಗಿಯಾಗಿದ್ದಾರೆಂದು ಆಮ್ ಆದ್ಮಿ ಪಾರ್ಟಿ- ಕರ್ನಾಟಕ ಆರೋಪಿಸಿದೆ.

ಆಮ್ ಆದ್ಮಿ ಪಕ್ಷದ ಪ್ರಕಾರ, ಬೆಂಗಳೂರಿನಲ್ಲಿ ಇರುವ ಪ್ರಾಂತ್ಯಾವಾರು ಅಂಗಡಿಗಳ ವಿವರ ಹೀಗಿದೆ:

1. ವಾರ್ಡ್ 110 - ಸಂಪಂಗಿರಾಮನಗರ ವಾರ್ಡ್‍ನಲ್ಲಿ (ಕಮರ್ಷಿಯಲ್ ಸ್ಟ್ರೀಟ್) ಒಟ್ಟು ಸುಮಾರು 2,300 ವ್ಯಾಪಾರಿ ಮಳಿಗೆಗಳನ್ನು ಎಣಿಸಿ, ಗುರುತಿಸಲಾಗಿದೆ. (ಬಿಬಿಎಂಪಿ ಗುರುತಿಸಿರುವುದು 502 ಮಾತ್ರ)

2. ವಾರ್ಡ್ 27 - ಬಾಣಸವಾಡಿ ವಾರ್ಡ್‍ನಲ್ಲಿ ಒಟ್ಟು ಸುಮಾರು 2000 ವ್ಯಾಪಾರಿ ಮಳಿಗೆಗಳನ್ನು ಎಣಿಸಿ, ಗುರುತಿಸಲಾಗಿದೆ. (ಬಿಬಿಎಂಪಿ ಗುರುತಿಸಿರುವುದು 272 ಮಾತ್ರ)

3. ವಾರ್ಡ್ 58 - ನ್ಯೂ ತಿಪ್ಪಸಂದ್ರ (ಇಂದಿರಾನಗರ) ವಾರ್ಡ್‍ನಲ್ಲಿ ಒಟ್ಟು ಸುಮಾರು 1000 ವ್ಯಾಪಾರಿ ಮಳಿಗೆಗಳನ್ನು ಎಣಿಸಿ, ಗುರುತಿಸಲಾಗಿದೆ. (ಬಿಬಿಎಂಪಿ ಗುರುತಿಸಿರುವುದು 117 ಮಾತ್ರ)

4. ವಾರ್ಡ್ 94 - ಗಾಂಧಿನಗರ ವಾರ್ಡಿನಲ್ಲಿ ಒಟ್ಟು ಸುಮಾರು 2,200 ವ್ಯಾಪಾರಿ ಮಳಿಗೆಗಳನ್ನು ಎಣಿಸಿ, ಗುರುತಿಸಲಾಗಿದೆ. (ಬಿಬಿಎಂಪಿ ಗುರುತಿಸಿರುವುದು 832 ಮಾತ್ರ)

5. ವಾರ್ಡ್ 92 - ಶಿವಾಜಿನಗರ ವಾರ್ಡಿನಲ್ಲಿ ಒಟ್ಟು ಸುಮಾರು 2,300 ವ್ಯಾಪಾರಿ ಮಳಿಗೆಗಳನ್ನು ಎಣಿಸಿ, ಗುರುತಿಸಲಾಗಿದೆ. (ಬಿಬಿಎಂಪಿ ಗುರುತಿಸಿರುವುದು 148 ಮಾತ್ರ)

6. ವಾರ್ಡ್ 111 - ಶಾಂತಲನಗರ ವಾರ್ಡಿನಲ್ಲಿ ಒಟ್ಟು ಸುಮಾರು 2,500 ವ್ಯಾಪಾರಿ ಮಳಿಗೆಗಳನ್ನು ಎಣಿಸಿ, ಗುರುತಿಸಲಾಗಿದೆ. (ಬಿಬಿಎಂಪಿ ಗುರುತಿಸಿರುವುದು 859 ಮಾತ್ರ)

7. ವಾರ್ಡ್ 119 - ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‍ನಲ್ಲಿ ಒಟ್ಟು ಸುಮಾರು 4200 ವ್ಯಾಪಾರಿ ಮಳಿಗೆಗಳನ್ನು ಎಣಿಸಿ, ಗುರುತಿಸಲಾಗಿದೆ. (ಬಿಬಿಎಂಪಿ ಗುರುತಿಸಿರುವುದು 954 ಮಾತ್ರ)

8. ವಾರ್ಡ್ 109 - ಚಿಕ್ಕಪೇಟೆ ವಾರ್ಡ್‍ನಲ್ಲಿ ಒಟ್ಟು ಸುಮಾರು 3000 ವ್ಯಾಪಾರಿ ಮಳಿಗೆಗಳನ್ನು ಎಣಿಸಿ, ಗುರುತಿಸಲಾಗಿದೆ. (ಬಿಬಿಎಂಪಿ ಗುರುತಿಸಿರುವುದು 638 ಮಾತ್ರ)

English summary
Aam Admi Party accuses that BBMP's corporators and tax officers has looted 400 crores of rupees in renewal of Trade license in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X