ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಬಸ್ಸಿನಲ್ಲಿ ಕಂಡ ಜಿನ್ನಾ ಚಿತ್ರ, ಅಸಲಿ ವಿಷ್ಯ ಏನು?

By Mahesh
|
Google Oneindia Kannada News

ಬೆಂಗಳೂರು, ಜುಲೈ 13: ಬೆಂಗಳೂರಿನ ಹೊಸೂರು ರಸ್ತೆಯ ಎಚ್ ಜಿಎಸ್ ರಸ್ತೆಯ ಬಳಿ ಸಂಚರಿಸುತ್ತಿದ್ದ ಬಸ್ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಗುರುವಾರದಂದು ವೈರಲ್ ಆಗುತ್ತಿದೆ.

Democracy ಎಂಬ ಹೆಸರಿನ ನಾಮಫಲಕ, ಹಸಿರುಬಣ್ಣ, ಹಿಂಬದಿಯಲ್ಲಿ ಮೊಹಮ್ಮದ್ ಆಲಿ ಜಿನ್ನಾ ಅವರ ಫೋಟೋ ಇರುವ ವಿಚಿತ್ರ ಬಸ್ ವೊಂದು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ.

A Private Bus Painted with Democracy and Jinnah's Photo found

ಈ ಬಗ್ಗೆ ನೀರಜ್ ಕಾಮತ್ ಹಾಗೂ ಅಭಿಶೇಕ್ ಸಿಂಗ್ ಎಂಬುವರು ಫೇಸ್ ಬುಕ್ ನಲ್ಲಿ ಚಿತ್ರ ಸಮೇತ ವರದಿ ಮಾಡಿದ್ದಾರೆ. ಭಾಷಾ ಹೇರಿಕೆ ಬಗ್ಗೆ ಮಾತನಾಡುವ ಕನ್ನಡ ಪರ ಹೋರಾಟಗಾರರನ್ನು ಕೆಣಕಿದ್ದಾರೆ, ಎಲ್ಲಿದ್ದೀರಿ? ನಿಮಗೆ ನನ್ನ ಕಡೆಯಿಂದ ಗಿಫ್ಟ್ ಇದೆ ತೆಗೆದುಕೊಳ್ಳಿ.
A Private Bus Painted with Democracy and Jinnah's Photo found

ಪಾಕಿಸ್ತಾನದ ಜನಕ ಮೊಹಮ್ಮದ್ ಆಲಿ ಜಿನ್ನಾ ಚಿತ್ರವಿರುವ ಬಸ್ ಇಲ್ಲಿದೆ. ಡೆಮೋಕ್ರಾಸಿ ಎಂಬ ಬಸ್ ಸೇವೆ ಬಳಸಿಕೊಳ್ಳಿ.

ಈ ಬಸ್ ಬಗ್ಗೆ ನಿಮ್ಮ ಸರ್ಕಾರ ಏನು ಹೇಳುತ್ತದೆ? ಈಗ ನೀವುಗಳು ಬಸ್ ನೊಳಗೆ ನುಗ್ಗಿ ಎಲ್ಲರನ್ನು ಸದೆಬಡಿಯುತ್ತೀರಾ? ಬಸ್ ಗೆ ಬೆಂಕಿ ಹಂಚುತ್ತೀರಾ? ಎಂದು ಪ್ರಶ್ನಿಸಿ ಅಭಿಶೇಕ್ ಸಿಂಗ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಬಸ್ ಗೆ ಬಳಸಲಾದ ಗಾಢ ಹಸಿರ ಬಣ್ಣದ ಬಗ್ಗೆ ಏನು ಆಕ್ಷೇಪವಿಲ್ಲ. ಆದರೆ, ಜಿನ್ನಾ ಫೋಟೋ ಬಸ್ ನ ಹಿಂಬದಿ ಇರುವುದೇಕೆ ಎಂದು ಅನೇಕರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಏನಿದರ ಅಸಲಿಯತ್ತು?: ಲಭ್ಯ ಮಾಹಿತಿ ಪ್ರಕಾರ, ಆಭಾಸಂ ಎಂಬ ಮಲಯಾಳಂ ಚಿತ್ರದ ಶೂಟಿಂಗ್ ಗೆ ಈ ಬಸ್ ಬಳಕೆಯಾಗಿದೆ. ಕೇರಳ ಮೂಲದ ಚಿತ್ರ ನಿರ್ದೇಶಕನ ಚಿತ್ರಕಥೆಯಲ್ಲಿ ಕಾರ್ಲ್ ಮಾರ್ಕ್ಸ್, ನೆಹರೂ, ಜಿನ್ನಾ ಬಗ್ಗೆ ಉಲ್ಲೇಖವಿದೆಯಂತೆ.

ಜಿನ್ನಾ ಫೋಟೋ ಅಲ್ಲದೆ, ಮಹಾತ್ಮಾ ಗಾಂಧೀಜಿ, ಕಾರ್ಲ್ ಮಾರ್ಕ್ಸ್, ಅಂಬೇಡ್ಕರ್ ಅವರ ಚಿತ್ರವಿರುವ ಬಸ್ ಗಳು ಇವೆ. ಬಸ್ ಟ್ರಾವೆಲರ್ಸ್ ಹಾಗೂ ಪ್ರಯಾಣಿಕರ ನಡುವಿನ ಕಥೆ ಇದಾಗಿದೆ. ಸೂರಜ್ ಎಂಬುವರು ಈ ಚಿತ್ರಕ್ಕೆ ನಾಯಕ. ಶೂಟಿಂಗ್ ಗೆ ಬಳಕೆಯಾಗಿದ್ದ ಬಸ್ ನಂತರ ಹಾಗೆ ಉಳಿದಿದೆ ಎಂದು ಈ ಬಗ್ಗೆ ಬಲ್ಲವರು ಹೇಳಿದ್ದಾರೆ.

English summary
Social media abuzz with curiosity as a private bus on Hosur road found in Bengaluru. Bus is painted with Democracy in dark green colour and has Muhammad Ali Jinnah's photo on the rear side of wind shield
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X