ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವ್ಹೀಲಿಂಗ್ ಫೋಟೋ ಫೇಸ್ ಬುಕ್ ಗೆ ಹಾಕಿದವನು ಅಂದರ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಬೈಕ್ ವ್ಹೀಲಿಂಗ್ ಮಾಡಿದ್ದ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಪ್ಪತ್ತೊಂದು ವರ್ಷದ ಜುಬೇರ್ ತನ್ನ ಸಾಹಸವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ. ಅಗತ್ಯ ಮಾಹಿತಿ ಕಲೆ ಹಾಕಿದ ಫ್ರೇಜರ್ ಟೌನ್ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.

ಜುಬೇರ್ ತನ್ನ ಫೇಸ್ ಬುಕ್ ನಿಂದ ಆ ಫೋಟೋಗಳನ್ನು ತೆಗೆದುಬಿಡಲು ಯೋಚಿಸಿದ್ದ. ಅಷ್ಟರಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 'ವ್ಹೀಲಿಂಗ್ ಮಾಡಿದ ಜುಬೇರ್ ನನ್ನು ಪತ್ತೆ ಮಾಡಿದೆವು. ಆತ ಅಪಾಯಕಾರಿ ಹಾಗೂ ಬೇಕಾಬಿಟ್ಟಿಯಾಗಿ ಚಾಲನೆ ಮಾಡ್ತಿದ್ದ. ಹೋಂಡಾ ಡಿಯೋ ಸ್ಕೂಟರ್ ಮಾರ್ಪಾಡು ಮಾಡಿಸಿ, ಜನ-ವಾಹನ ದಟ್ಟಣೆ ಇರುವ ಕಡೆ ವ್ಹೀಲಿಂಗ್ ಮಾಡ್ತಿದ್ದ ಎಂದು ಫ್ರೇಜರ್ ಟೌನ್ ನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.[ದುರ್ಗಾಪರಮೇಶ್ವರಿಗೆ ಅವಮಾನ: ಫೇಸ್ ಬುಕ್ ಗೆ ಮೂರನೇ ನೋಟಿಸ್]

wheeling

ಕೋಲ್ಸ್ ಪಾರ್ಕ್ ನಿವಾಸಿಯಾದ ಜುಬೇರ್ ಇದೇ ಮೊದಲ ಬಾರಿಗೆ ತನ್ನ ಸ್ಕೂಟರ್ ಸ್ಟಂಟ್ಸ್ ನ ಫೋಟೋಗಳನ್ನು ಹಾಕಿದ್ದ. ಅವನು ಹದಿನಾರು ವರ್ಷದ ಹರೆಯದಿಂದಲೂ ವ್ಹೀಲಿಂಗ್ ಮಾಡ್ತಿದ್ದಾನೆ. 'ನಮಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ಜುಬೇರ್ ನನ್ನು ಹಿಡಿದಿದ್ದೇವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೇಜರ್ ಟೌನ್ ನ ಮೂರ್ ರಸ್ತೆ ಕಾನೂನುಬಾಹಿರ ಸ್ಟಂಟ್ಸ್ ಗಳನ್ನು ಮಾಡುವವರ ಪಾಲಿಗೆ ಸ್ವರ್ಗದಂತೆ. ಜನರ ಗಮನವನ್ನ ಸೆಳೆಯುವುದಕ್ಕೆ, ಸ್ಟೈಲ್ ತೋರಿಸುವುದಕ್ಕೆ ಕಾರು, ಬೈಕ್ ಗಳಲ್ಲಿ ನಾನಾ ಸ್ಟಂಟ್ಸ್ ಪ್ರದರ್ಶಿಸುತ್ತಾರೆ. ಅವುಗಳಿಗೆ ತಡೆ ಹಾಕಬೇಕು ಎಂದು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.[ಸನ್ನಿ ಲಿಯೋನ್ ಸ್ವಾಗತ, ಕೇರಳ ವಿದ್ಯಾರ್ಥಿಗಳಲ್ಲಿ ಪುಳಕ]

Juber

ವ್ಹೀಲಿಂಗ್ ಮಾಡುವ ಬಹುತೇಕರು ಕಾಲೇಜಿಗೆ ಹೋಗುವ ವಯಸ್ಸಿನವರು. ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನವರು ಕಾರೋ ಬೈಕೋ ಓಡಿಸುತ್ತಾ ಸಿಕ್ಕಿಬಿದ್ದರೆ ಅವರ ತಂದೆ, ತಾಯಿ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ದಂಡ ಹಾಗೂ ಆರು ತಿಂಗಳವರೆಗೆ ಜೈಲು ಶಿಕ್ಷೆ ಆಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

English summary
A person who posted scooter wheeling photos, arrested by Frazer town police in Bengaluru. Zuber is arrested by police. He was involved in wheeling since at the age of 16, said by police officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X