ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಡಿತ್ ವೆಂಕಟೇಶ ಗೋಡ್ಖಿಂಡಿಯವರಿಗೆ ಸ್ವರ ಶ್ರದ್ಧಾಂಜಲಿ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಸಂಜೋಗ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯು ಮತ್ತು ಗೋಡ್ಖಿಂಡಿ ಮ್ಯುಸಿಕ್ & ಎಜುಟೇನ್ಮೆಂಟ್ ಪ್ರೈ. ಲಿ. ಇವರ ಸಹಯೋಗದೊಂದಿಗೆ ದಿವಂಗತ ಪಂ. ವೆಂಕಟೇಶ ಗೋಡ್ಖಿಂಡಿಯವರಿಗೆ ಮೊದಲನೇ ಸ್ವರಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಏಪ್ರಿಲ್ 15 ರಂದು ಜೆ.ಎಸ್.ಎಸ್. ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ.

ಖ್ಯಾತ ಕೊಳಲುವಾದಕರಾದ ಪ್ರವೀಣ್ ಗೋಡ್ಖಿಂಡಿ ಹಾಗೂ ಅವರ ಶಿಷ್ಯವೃಂದದವರು ಈ ಕಾರ್ಯಕ್ರಮ ಜಯನಗರದ 8ನೇ ಹಂತದಲ್ಲಿರುವ ಜೆ.ಎಸ್.ಎಸ್ ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಆಯೋಜಿಸಿದ್ದಾರೆ.[ಪಂಡಿತ್ ಗೋಡ್ಖಿಂಡಿರಿಂದ ವಿಶಿಷ್ಟ ಸಂಗೀತ ಸಾಹಸ ಘೋಷಣೆ]

ಸಂಜೋಗ್ ಸಂಸ್ಥೆಯ ವಿದ್ಯಾರ್ಥಿಗಳಲ್ಲದೇ ನಾಡಿನ ಅನೇಕ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದು ಸಂಗೀತಾಸಕ್ತರಿಗೆ ಅವಿಸ್ಮರಣೀಯ ಅನುಭವ ನೀಡಲಿದ್ದಾರೆ. ದಿನದ ಮೊದಲನೇ ಭಾಗದಲ್ಲಿ ನಾಡಿನ ಹೆಸರಾಂತ ಮೃದಂಗ ವಾದಕ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಅವರಿಂದ "ಲಯ - ಸೌಂದರ್ಯ ಮತ್ತು ಸೃಜನಾತ್ಮಕತೆ" ಈ ಕುರಿತು ಪ್ರಾತ್ಯಕ್ಷಿಕೆ ಹಾಗೂ ಸಂವಾದ ನಡೆಸಿಕೊಡಲಿದ್ದಾರೆ.

A Musical Tribute to Late Pt. Venkatesh Godkhindi

ಪಂಡಿತ್ ಪ್ರವೀಣ ಗೋಡ್ಖಿಂಡಿ ಈ ಸಂವಾದದ ನಿರ್ವಹಣೆ ಮಾಡಲಿದ್ದಾರೆ. ತದನಂತರ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಅವರು ತಮ್ಮ ಶಿಷ್ಯರೊಂದಿಗೆ ಒಂದು ವಿಶೇಷವಾದ ತನಿ ಆವರ್ತನ ಪ್ರಸ್ತುತ ಪಡಿಸಲಿದ್ದಾರೆ. ತದನಂತರ ಸಿತಾರ್ ಮತ್ತು ಸಂತೂರ್ ಜುಗಲಬಂದಿ ಕಾರ್ಯಕ್ರಮ ನಡೆಸಿಕೊದಲಿದ್ದಾರೆ ಸಂಜೀವ ಕೊರ್ತಿ ಹಾಗೂ ಅಶ್ವಿನ್ ವಾಲಾವಲ್ಕರ್.[ಪ್ರವೀಣ್ ಗೊಡ್ಖಿಂಡಿ 'ಗಾಡ್ಸ್ ಬನ್ಸಿ' ನಿನಾದ]

ಮಧ್ಯಾನ್ಹ 3.30 ರಿಂದ ಮಹಾವಿದ್ಯಾಲಯದ ಶಿಷ್ಯವೃಂದ ಗಾಯನ ಮತ್ತು ಬಾನ್ಸುರಿ ಕಾರ್ಯಕ್ರಮ, ಹಾಗೂ ಕಿರಣ್ ಗೋಡ್ಖಿಂಡಿ ಅವರು ತಬಲಾ ಸೋಲೊ ಪ್ರಸ್ತುತ ಪಡಿಸಲಿದ್ದಾರೆ. ಸಂಜೆಯ ಕಾರ್ಯಕ್ರಮದಲ್ಲಿ ಒಂದು ವಿನೂತನ ವಾದ್ಯವನ್ನು ಲೋಕಾರ್ಪಣೆ ಮಾಡಲಿದ್ದಾರೆ ಉದಯಶಂಕರ್.

ಪಂಡಿತ್ ವೆಂಕಟೇಶ ಗೋಡ್ಖಿಂಡಿಯವರಿಗೆ ಸ್ವರ ಶ್ರದ್ಧಾಂಜಲಿ

ಪಂಡಿತ್ ವೆಂಕಟೇಶ ಗೋಡ್ಖಿಂಡಿಯವರಿಗೆ ಸ್ವರ ಶ್ರದ್ಧಾಂಜಲಿ

ಪಂಡಿತ್ ವೆಂಕಟೇಶ ಗೋಡ್ಖಿಂಡಿಯವರಿಗೆ ಸ್ವರ ಶ್ರದ್ಧಾಂಜಲಿ

ಪಂಡಿತ್ ವೆಂಕಟೇಶ ಗೋಡ್ಖಿಂಡಿಯವರಿಗೆ ಸ್ವರ ಶ್ರದ್ಧಾಂಜಲಿ

ಪಂಡಿತ್ ವೆಂಕಟೇಶ ಗೋಡ್ಖಿಂಡಿಯವರಿಗೆ ಸ್ವರ ಶ್ರದ್ಧಾಂಜಲಿ

ಪಂಡಿತ್ ವೆಂಕಟೇಶ ಗೋಡ್ಖಿಂಡಿಯವರಿಗೆ ಸ್ವರ ಶ್ರದ್ಧಾಂಜಲಿ

ಪಂಡಿತ್ ವೆಂಕಟೇಶ ಗೋಡ್ಖಿಂಡಿಯವರಿಗೆ ಸ್ವರ ಶ್ರದ್ಧಾಂಜಲಿ

ಮುಂಬಯಿಯ ಹೆಸರಾಂತ ಹಿಂದುಸ್ಥಾನಿ ಶಾಸ್ತ್ರೀಯ ಗಾಯಕಿ ವಿದುಶಿ ಗೌರೀ ಪಠಾರೆ ತಮ್ಮ ಸುಶ್ರಾವ್ಯ ಗಾಯನದ ಮೂಲಕ ಸಂಗೀತಾಸಕ್ತರಿಗೆ ರಸದೌತಣ ಉಣಬಡಿಸಲಿದ್ದಾರೆ.

ಕಾರ್ಯಕ್ರಮದ ಮುಕ್ತಾಯ ಪಂ ಪ್ರವೀಣ್ ಗೋಡ್ಖಿಂಡಿ ಹಾಗೂ ಅವರ ಮಗ ಕುಮಾರ್ ಶಡಜ್ ಗೋಡ್ಖಿಂಡಿ ಅವರ ಬಾಂಸುರಿ ಜುಗಲಬಂದಿ ನಡೆಯಲಿದ್ದು, ಇವರಿಗೆ ತಬಲಾ ಸಾಥ ನೀಡಲಿದ್ದಾರೆ ಹೆಸರಾಂತ ತಬಲಾ ವಾದಕರು ಪಂ. ರವೀಂದ್ರ ಯಾವಗಲ್ ಹಾಗೂ ಅವರ ಮಗ ಕಿರಣ ಯಾವಗಲ್, ಕಿರಣ ಗೋಡ್ಖಿಂಡಿ, ಪ್ರದ್ಯುಮ್ನ ಸೊರಬ ಹಾಗೂ ವಿಕಾಸ್ ನರೆಗಲ್ ಕೂಡ ಈ ಕಾರ್ಯಕ್ರಮದಲ್ಲಿ ತಬಲಾ ವಾದಕರಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾಗಬೇಕೆಂದು ಸಂಜೋಗ್ ಸಂಸ್ಥೆ ಕೇಳಿಕೊಳ್ಳುತ್ತದೆ.

English summary
Sanjog, in association with Kannada and Culture, dept. of Karnataka, presents a musical tribute to the well-known flautist and vocalist of Karnataka, Pt. Venkatesh Godkhindi. Ace flautist Pt. Pravin Godkhindi and his disciples have organized a day long music festival for connoisseurs of Bangalore at J.S.S. Auditorium, Jayanagar 8th Block from 9 am to 9 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X