ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಡ್ತಿ ಮೀಸಲಾತಿಗಾಗಿ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಆಗ್ರಹ

ಫೆಬ್ರವರಿ 9 ರಂದು ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ನೌಕರರ ಬಡ್ತಿ ಮೀಸಲಾತಿಯ ಬಗ್ಗೆ ಸಂವಿಧಾನ ವಿರೋಧಿ ತೀರ್ಪು ನೀಡಿತ್ತು.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 23: ರಾಜ್ಯಕ್ಕೆ ಸಂಬಂಧಿಸಿದಂತೆ ಎಸ್.ಸಿ. ಎಸ್. ಟಿ. ಪಂಗಡಗಳಿಗೆ ನೀಡಲಾಗಿದ್ದ ಬಡ್ತಿ ಮೀಸಲಾತಿನ್ನು ಸುಪ್ರೀಂ ಕೋರ್ಟ್ ಅಸಿಂಧುವೆಂದು ಪರಿಗಣಿಸಿ ರದ್ದುಗೊಳಿಸಿದ ಸಂಬಂಧ ಇಂದು ಬೆಂಗಳೂರಿನಲ್ಲಿ ಪ್ರತಿಭಟನಾ ರ್ಯಾಲಿ ನಡೆಯಿತು.

ರಾಜ್ಯದೆಲ್ಲೆಡೆಯಿಂದ ಬಂದಿದ್ದ 10 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನಾ ರ್ಯಾಲಿ ನಡೆಸಿದರು. ಫೆಬ್ರವರಿ 9 ರಂದು ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ನೌಕರರ ಬಡ್ತಿ ಮೀಸಲಾತಿಯ ಬಗ್ಗೆ ಸಂವಿಧಾನ ವಿರೋಧಿ ತೀರ್ಪು ನೀಡಿತ್ತು.[ಬೆಂಗಳೂರು : 1.28 ಕೋಟಿ ಮೌಲ್ಯದ ಹಳೆ ನೋಟುಗಳು ವಶ]

ಈ ತೀರ್ಪು ಅವಮಾನಕಾರಿ

ಈ ತೀರ್ಪು ಅವಮಾನಕಾರಿ

ಪ್ರಜಾ ಪರಿವರ್ತನ ವೇದಿಕೆಯ ಮುಂದಾಳತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ರಾಜ್ಯ ಸರಕಾರ ಕಠಿಣ ನಿಲುವು ತಾಳುವಂತೆ ಮನವಿ ಸಲ್ಲಿಸಲಾಯಿತು. ಇಂತಹ ಅವಮಾನಕಾರಿ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ.[ವಿಶ್ವದ ಅಗ್ಗದ ನಗರ, ಮೂರನೇ ಸ್ಥಾನದಲ್ಲಿ ಬೆಂಗಳೂರು]

ಸಂವಿಧಾನ ವಿರೋಧಿ ತೀರ್ಪು

ಸಂವಿಧಾನ ವಿರೋಧಿ ತೀರ್ಪು

ಈ ತೀರ್ಪು ಸಂವಿಧಾನ ವಿರೋಧಿಯಾಗಿದ್ದು, ಇದರ ಬಗ್ಗೆ ರಾಜ್ಯ ಸರಕಾರ ಈಗಾಗಲೇ ಮೇಲ್ಮನವಿ ಸಲ್ಲಿಸಲು ಸಜ್ಜಾಗಿದೆ. ಆದರೆ, ಈ ಮೇಲ್ವನವಿ ಅರ್ಜಿ ಸ್ವೀಕಾರವಾಗದ ಪಕ್ಷದಲ್ಲಿ ರಾಜ್ಯದ ಹಿಂದುಳಿದ ಜನಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಸುಗ್ರೀವಾಜ್ಞೆ ಹೊರಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.['1300 ದಶಲಕ್ಷ ಲೀಟರ್‍ ತ್ಯಾಜ್ಯ ನೀರನ್ನು ಸಂಸ್ಕರಿಸಿ ಪುನರ್ ಬಳಕೆ']

ಮುಖ್ಯಮಂತ್ರಿಗಳೇ ಸಮಸ್ಯೆ ಪರಿಹರಿಸಲಿ

ಮುಖ್ಯಮಂತ್ರಿಗಳೇ ಸಮಸ್ಯೆ ಪರಿಹರಿಸಲಿ

ಅಹಿಂದ ಜನಾಂಗದ ಮುಖ್ಯಮಂತ್ರಿಗಳೆಂದೇ ಹೆಸರಾಗಿರುವ ಸಿದ್ದರಾಮಯ್ಯನವರು ರಾಜ್ಯ ಅಹಿಂದ ಸಮುದಾಯದ ಶೇ.25 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಜನಗಳ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಪ್ರಜಾ ಪರಿವರ್ತನ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಆಗ್ರಹಿಸಿದರು.[ಬೆಂಗಳೂರಲ್ಲಿ ಕಾರಲ್ಲಿ ಓಡಾಡೋದೂ ಅಪಾಯ!]

ತೀರ್ಪು ಹಿಂದುಳಿದ ಜನಾಂಗಕ್ಕೆ ಮರಣಶಾಸನ

ತೀರ್ಪು ಹಿಂದುಳಿದ ಜನಾಂಗಕ್ಕೆ ಮರಣಶಾಸನ

ಬಹುಜನ್ ಸಮಾಜ ಪೀಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ರಾಜ್ಯದ ಹಿಂದುಳಿದ ಜನಾಂಗದ ನೌಕರರಿಗೆ ಈ ತೀರ್ಪು ಮರಣಶಾಸನದಂತಿದೆ. ಈ ತೀರ್ಪಿನ ಅನುಷ್ಠಾನಗೊಳಿಸುವಂತೆ ಮೇಲ್ಜಾತಿಯ ಹಲವಾರು ಅಧಿಕಾರಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಎಂದು ಆರೋಪಿಸಿದರು.[ಮಲ್ಲೇಶ್ವರಂನಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ]

ಪ್ರಮುಖರ ಉಪಸ್ಥಿತಿ

ಪ್ರಮುಖರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಮೆಸ್ಕಾಂ ಎಂಡಿ ಚಿಕ್ಕನಂಜಪ್ಪ, ಬೆಸ್ಕಾ ಡಿ.ಟಿ ಸಿದ್ದರಾಜು, ಬಿಎಸ್ ಎಎಫ್ ರಾಷ್ಟ್ರೀಯ ಕಾರ್ಯದರ್ಶಿ ದಾವೂರಾಂ ರತ್ನಾಕರ್, ಪ್ರಜಾ ಪರಿವರ್ತನ ವೇದಿಕೆಯ ಖಜಾಂಚಿ ಪ್ರೊ.ಚಂದ್ರಕಾಂತ್, ಪ್ರಜಾ ಪರಿವರ್ತನ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ. ಸಯ್ಯದ್ ರೋಷನ್ ಮುಲ್ಲಾ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.[ಹುತಾತ್ಮರ ಸ್ಮಾರಕ ಸಂರಕ್ಷಣೆಗಾಗಿ ಎಸ್ಎಫ್ ಐನಿಂದ ಪ್ರತಿಭಟನೆ]

English summary
More than 10,000 SC ST people protested in Bangalore today. They are opposing the judgement of Supreme Court on reservation to promotion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X