ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಲವೀರ ರೆಡ್ಡಿ ಅವರಿಗೆ ಸಿಎಂಆರ್ ಸೇವಾ ಪುರಸ್ಕಾರ

|
Google Oneindia Kannada News

ಬೆಂಗಳೂರು, ನವೆಂಬರ್ 26 : ಸಿಎಂಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಿಎಂಆರ್ ಸಮೂಹದ 76 ಶಿಕ್ಷಕರಿಗೆ ಶಿಕ್ಷಕರ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿಎಂಆರ್ ಸೇವಾ ಪುರಸ್ಕಾರವನ್ನು ಬಲವೀರ ರೆಡ್ಡಿ ಅವರಿಗೆ ನೀಡಲಾಯಿತು.

ಬುಧವಾರ ಸಿಎಂಆರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಸಿಎಂಆರ್ ಸೇವಾ ಪುರಸ್ಕಾರವನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ಬಲವೀರ ರೆಡ್ಡಿ ಅವರಿಗೆ ಪ್ರದಾನ ಮಾಡಲಾಯಿತು. [ಕೆಎಸ್ ಒಯು ಮಾನ್ಯತೆ ನವೀಕರಣಕ್ಕೆ ಯುಜಿಸಿ ಒಪ್ಪಿಗೆ]

cmr institutions

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಪತಿಗಳಾದ ನಂತರ ಬಲವೀರ ರೆಡ್ಡಿ ಅವರು ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ದೇಶದಲ್ಲೇ ಮೊದಲ ಇ ಕ್ಯಾಂಪಸ್ ನಿರ್ಮಾಣ, ಡಿಜಿಟಲ್ ಕ್ಲಾಸ್ ರೂಂ ಮಾಡಿರುವ ಅವರ ಸಾಧನೆಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. [ಶಿಕ್ಷಣ ಕ್ಷೇತ್ರದ ಇಬ್ಬರು ದಿಗ್ಗಜರಿಗೆ ಕೊಂಕಣಿ ಸೇವಾ ಪ್ರಶಸ್ತಿ]

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಲವೀರ ರೆಡ್ಡಿ ಅವರು, 'ಶಿಕ್ಷಕರ ಸಮ್ಮುಖದಲ್ಲಿ ಸಿಎಂಆರ್ ಸೇವಾ ಪುರಸ್ಕಾರ ಪಡೆಯಲು ಹೆಮ್ಮೆ ಎನಿಸುತ್ತಿದೆ. ಶಿಕ್ಷಕನಾಗಿ ನಾನು ಮಾಡಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ' ಎಂದು ಹೇಳಿದರು.

award

ರಾಜ್ಯಸಭಾ ಸದಸ್ಯ ಡಿ.ಕುಪೇಂದ್ರ ರೆಡ್ಡಿ, ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ನ್ಯಾಷನಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಪಿ.ಗೋಪಾಲಕೃಷ್ಣ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
As many as 76 teachers from the CMR institutions were presented with Teacher Service Awards on the occasion of CMR Group celebrating its Founder’s Day on November 25th 2015 at the CMR National Public School, Bengaluru. CMR Seva Puraskara was presented to former Vice Chancellor of Visvesvaraya Technological University (VTU) Dr. K. Balaveera Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X