ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಡಿಗೆಗೆ ಕಾರು ಪಡೆದು ಪರಾರಿಯಾಗುತ್ತಿದ್ದವ ಸಿಕ್ಕಿಬಿದ್ದ!

|
Google Oneindia Kannada News

ಬೆಂಗಳೂರು, ಮೇ 04 : ಕಾರುಗಳನ್ನು ಬಾಡಿಗೆಗೆ ಪಡೆದು ಅದನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 7 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಇತರೆ ಆರೋಪಿಗಳಾದ ಹರ್ಷವರ್ಧನ್, ಅಶೋಕ್, ಪ್ರವೀಣ್ ಮತ್ತು ನಾಗರಾಜ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಿರಾಜುದ್ದೀನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. [ಕಾರ್ ರೇಸಿಂಗ್ ನೋಡಲು ಹೊಸೂರಿಗೆ ಬನ್ನಿ]

car

ಕಾರು ಕದಿಯುವುದೇ ಕಾಯಕ : ಈ ಆರೋಪಿಗಳು ಕಾರು ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದರು. ಓಎಲ್ಎಕ್ಸ್‌ನಲ್ಲಿ ಕಾರು ಮಾರಾಟ ಮಾಡಲು ಜಾಹೀರಾತು ನೀಡಿದ್ದ ವ್ಯಕ್ತಿಗಳನ್ನು ಇವರು ಪೋನ್ ಮೂಲಕ ಸಂಪರ್ಕಿಸಿ, ಕಾರನ್ನು ಪರಿಶೀಲನೆ ಮಾಡುವ ನೆಪದಲ್ಲಿ ತರಿಸಿಕೊಳ್ಳುತ್ತಿದ್ದರು. [ಟಾಟಾ ಟಿಯಾಗೋದ ವಿಶೇಷತೆಗಳೇನು?]

ಕಾರಿನ ಬೆಲೆ ನಿರ್ಧಾರ ಮಾಡಿ, ನಂತರ ನಗದು ಹಣ ತಂದಿಲ್ಲ ಬ್ಯಾಂಕ್‌ಗೆ ಹೋಗಿಬರುವುದಾಗಿ ಹೇಳಿ ಕಾರಿನೊಂದಿಗೆ ಪರಾರಿಯಾಗುತ್ತಿದ್ದರು. ಟ್ರಾವಲ್ಸ್‌ನಿಂದ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋದವರು, ಕಾರನ್ನು ವಾಪಸ್ ನೀಡದೆ ವಂಚನೆ ಮಾಡುತ್ತಿದ್ದರು. [ಯಡಿಯೂರಪ್ಪನವರನ್ನು ವಿವಾದದ ಸುಳಿಗೆ ಸಿಲುಕಿಸಿರುವ ಕಾರು!]

ಈ ತಂಡದ ಪ್ರಮುಖ ಆರೋಪಿ ಪ್ರವೀಣ್ ಕುಮಾರ್‌ ಸಿಕ್ಕಿಬಿದ್ದಿದ್ದು, ಉಳಿದ ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದೆ. ಪ್ರವೀಣ್ ಕುಮಾರ್‌ನಿಂದ 1 ಐ-20, 2 ಸಿಫ್ಟ್, 2 ಪೋರ್ಡ್ ಫಿಗೋ, 2 ಟಯೋಟಾ ಇನ್ನೋವಾ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

English summary
Bengaluru high ground police arrested Praveen Kumar and recovered 7 cars. Praveen Kumar took cars for rent from travels showing fake documents and not returned it back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X