ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಂಗೆ ಮರದಡಿಯಲ್ಲಿ ನಮ್ಮ ನಿಮ್ಮ ಕಥೆಗಳ ಭೇಟಿ

By Mahesh
|
Google Oneindia Kannada News

ಬೆಂಗಳೂರು, ನ. 27: (3K) ಕನ್ನಡ , ಕವಿತೆ , ಕಥನ ಎಂಬ ಹೆಸರಿನಡಿ ಆರ್ಕುಟ್ ನಲ್ಲಿ ಸಣ್ಣದಾಗಿ ಆರಂಭಗೊಂಡು ನಂತರ ಫೇಸ್ಬುಕ್ ಗೆ ಎಂಟ್ರಿ ಕೊಟ್ಟ ಗುಂಪು ಈಗ ಪುಸ್ತಕ ಪ್ರಕಟನೆ ಮುಂದಾಗಿ ಯಶಸ್ವಿಯಾಗುತ್ತಿದೆ.

3K ಗುಂಪಿನ ರೂವಾರಿ ರೂಪ ಸತೀಶ್ ಅವರ ಯೋಜನೆಯಂತೆ ತಿಂಗಳುಗಳ ಹಿಂದೆ ಈ ಗುಂಪಿನ ವತಿಯಿಂದ ಆಯೋಜಿಸಿದ್ದ ಕಥನ ಮತ್ತು ಕವಿತೆಯ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಪರ್ಧೆಗೆ ಕಥೆಗಳನ್ನು ಆಯ್ದು 3K ಕಥಾ ಸಂಕಲನ ಬಿಡುಗಡೆ ಮಾಡಲಾಗುತ್ತಿದೆ. ನ. 29ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೆಳಗ್ಗೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವಿರುತ್ತದೆ.

ಕಥೆ: ಈ ಸ್ಪರ್ಧೆಯ ಅಂಗಳವ ಹುಡುಕಿ ಬಂದಿದ್ದು ಒಟ್ಟು 68 ಕಥೆಗಳು ಅದರಲ್ಲಿ ಉತ್ತಮವೆನಿಸಿದ 26 ಕಥೆಗಳನ್ನು ತೀರ್ಪುಗಾರರದ ಮಂಜುನಾಥ ಕೊಳ್ಳೇಗಾಲ ರವರು ಆರಿಸಿದ್ದಾರೆ. ಹಿರಿಯ ಪತ್ರಕರ್ತ, ರಂಗ ತಜ್ಞರಾದ ಗೋಪಾಲ ವಾಜಪೇಯಿ ರವರು ಉದ್ಘಾಟಿಸಲಿದ್ದಾರೆ. ಪತ್ರಕರ್ತ, ಲೇಖಕ ಜೋಗಿ ಅಲಿಯಾಸ್ ಗಿರೀಶ್ ರಾವ್ ಹತ್ವಾರ್ ಅವರು ಕಥಾ ಸಂಕಲನ ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ತೀರ್ಪುಗಾರಲ್ಲಿ ಒಬ್ಬರಾದ ಮಂಜುನಾಥ ಕೊಳ್ಳೇಗಾಲ ರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಈಗಾಗಲೇ ಭಾವ ಸಿಂಚನ ಮತ್ತು ಶತಮಾನಂ ಭವತಿ ಎಂಬ ಎರಡು ಕವನ ಸಂಕಲವನ್ನು ಹೊರತಂದಿರುವ ಈ ಬಳಗ ಮೂರನೆಯದಾಗಿ 3K ಕಥಾ ಸಂಕಲವನ್ನು ಹೊರತರುತ್ತಿದೆ.

Roopa Satish

ಫೇಸ್ಬುಕ್ ಎನ್ನುವುದು ಈಗಿನ ಬಹುತೇಕ ಮಂದಿಯ ದಿನಚರಿಯ ಒಂದು ಭಾಗ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ಈ ಫೇಸ್ಬುಕ್ ಎಂಬ ಮಾಯಾಜಾಲದಲ್ಲಿ ಅದೆಷ್ಟೋ ಮಂದಿ ಬಂದು ಹೋಗುತ್ತಾರೆ, ಅದೆಷ್ಟೋ ಗುಂಪುಗಳು ಹುಟ್ಟಿ ಸಾಯುತ್ತವೆ. ಆದರೆ ನೆಲೆಯುರುವುದು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುವುದು ಬೆರಳೆಣಿಕೆಯಷ್ಟೇ ಗುಂಪುಗಳು.

ಇತ್ತೀಚಿಗೆ ಈ ಮುಖಪುಸ್ತಕದ ಪುಟ ತೆರೆದಷ್ಟು ಕಾಣುವುದು ವಾದ, ವಿವಾದ, ಜಗಳ ದ್ವೇಷ ಇತ್ಯಾದಿಗಳ ನಡುವೆ ಕನ್ನಡ, ಕವಿತೆ, ಕಥನ, ಸ್ನೇಹ, ಪ್ರೀತಿ ಮತ್ತು ನಂಬಿಕೆಯನ್ನಷ್ಟೇ ಮೂಲ ಅಸ್ತ್ರವಾಗಿರಿಸಿಕೊಂಡು ಒಗ್ಗಟ್ಟಿನ ಮೂಲ ಮಂತ್ರ ಜಪಿಸುತ್ತ ಉದಯೋನ್ಮುಖ ಕವಿಗಳಿಗೆ, ಕತೆಗಾರರಿಗೆ ಒಂದು ಉಪಯುಕ್ತ ವೇದಿಕೆ ಕಲ್ಪಿಸಿಕೊಟ್ಟು ಕನ್ನಡದ ಸೇವೆಯಲ್ಲಿ ನಿರತರಾಗಿರುವ ಈ ಬಳಗಕ್ಕೆ ನಾವು ಅಭಿನಂದನೆ ಸಲ್ಲಿಸಲೇಬೇಕು.

ಈ ಬಳಗದಲ್ಲಿ ಈಗಷ್ಟೇ ಅಂಬೆಗಾಲು ಇಡುತ್ತಿರುವ ಸಾಹಿತಿಯಿಂದ ಪರಿಣಿತ ಸಾಹಿತಿಗಳವರೆಗೂ ಒಂದು ಬಹು ದೊಡ್ಡ ವರ್ಗ ನಿಮಗೆ ಕಾಣಸಿಗಲಿದೆ.

3K A Facebook Kannada group

3K ಗುಂಪು: (3K) ಕನ್ನಡ , ಕವಿತೆ , ಕಥನ ಎಂಬ ಗುಂಪಿನಲ್ಲಿ ತಮ್ಮ ಮೂಲ ಉದ್ದೇಶಗಳಿಗೆ ಬದ್ಧರಾಗಿ ಅಂದಿಗೂ ಇಂದಿಗೂ ಅದೇ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ಕನ್ನಡಾಭಿಮಾನಕ್ಕೆ, ಕನ್ನಡದ ಕಾರ್ಯಗಳಿಗೆ ಅನೇಕ ಕೈಗಳು ಜೊತೆಯಾಗಿವೆ. ದಿನವಿಡೀ ಈ ಗುಂಪಿನಲ್ಲಿ ಅನೇಕರು ತಮ್ಮ ತಮ್ಮ ಕವಿತೆಗಳನ್ನು ಪ್ರಕಟಿಸುತ್ತಾರೆ, ಕೆಲವರು ಮಾರ್ಗದರ್ಶನ ನೀಡುತ್ತಾರೆ. ಈ ಗುಂಪು ಹೊಸತಲೆಮಾರಿನ ಕವಿಗಳಿಗೆ ಕಾವ್ಯ ಪಾಠ ಶಾಲೆಯೆಂದರೆ ತಪ್ಪಿಲ್ಲ. ಈ ಯಶಸ್ಸು ಆ ಗುಂಪಿನ ಪ್ರತಿಯೋರ್ವ ಸದಸ್ಯನ ಹೆಗ್ಗಳಿಕೆ.

ಕವನ: ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಿದ್ದ ರಾಜ್ಯೋತ್ಸವ ಕವಿತೆಯ ಸ್ಪರ್ಧೆಯನ್ನು ಹುಡುಕಿ ಬಂದ 100 ಕವಿತೆಗಳಲ್ಲಿ ಉತ್ತಮವೆನಿಸಿದ 6 ಕವಿತೆಗಳನ್ನು ತೀರ್ಪುಗಾರರದ ನಾಡಿನ ಹೆಸರಾಂತ ಕವಿ ಡಾ . ಜಯಂತ್ ಕಾಯ್ಕಿಣಿ ರವರು ಆರಿಸಿದ್ದಾರೆ ಮತ್ತು ಈ ಆಯ್ದ ಕವಿಗಳಿಗೆ ಬಹುಮಾನವನ್ನು 3K ಕಥನ ಸಂಕಲನದ ಸಮಾರಂಭದ ದಿನವೇ ನೀಡಿ ಗೌರವಿಸಲಾಗುವುದು.

ಇದೇ ರೀತಿ ಇನ್ನಷ್ಟು ಕನ್ನಡದ ಕಾರ್ಯಗಳು ಈ ಬಳಗದಿಂದಾಗಲಿ ಮತ್ತಷ್ಟು ಕವಿಗಳಿಗೆ ಉತ್ತೇಜನ ನೀಡಲಿ, ಕಥೆಗಾರರನ್ನು ಪ್ರೋತ್ಸಾಹಿಸಲಿ ನಿರಂತರ ಈ ಸೇವೆ ಸಾಗಲಿ ..

ನೀವು ಬನ್ನಿ ಹೊಂಗೆ ಮರದಡಿ ಕೂತು ನಮ್ಮ ನಿಮ್ಮ ಕವಿತೆಗಳನ್ನು ಆಲಿಸೋಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಹಾಗೇ ಕನ್ನಡದ ಕಾರ್ಯಗಳಿಗೆ ನಾವು ಕೂಡ ಕೈಜೋಡಿಸೋಣ .. 3K ಫೇಸ್ ಬುಕ್ ಕೊಂಡಿ ಇಲ್ಲಿದೆ ಕ್ಲಿಕ್ಕಿಸಿ

English summary
3K A facebook group initiated by Roopa Satish is now publishing a Kannada book which has collection of proses written on facebook by various people. The book release event is scheduled on Nov 29 at Kannada Sahithtya Parishat. Writer Jogi, Gopal Wajapayi, Manjunath Kollegala will be present at the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X