ಸೇನಾಪಡೆಯಿಂದ ಬೆಂಗಳೂರಲ್ಲಿ ಗಿಡ ನೆಡುವ ಅಭಿಯಾನ

Posted By:
Subscribe to Oneindia Kannada

ಬೆಂಗಳೂರು, ಜೂನ್ 02 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಗಿಡಗಳನ್ನು ಬೆಳೆಸುವ ಬೃಹತ್ ಅಭಿಯಾನವೊಂದು ಆರಂಭವಾಗಿದೆ. ಭಾರತೀಯ ಸೇನೆ ಮುಂದಿನ ಎರಡು ವಾರದಲ್ಲಿ ನಗರದಲ್ಲಿ 30,000 ಸಸಿಗಳನ್ನು ನೆಡುವ ಅಭಿಯಾನ ಹಮ್ಮಿಕೊಂಡಿದೆ.

ಬುಧವಾರ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಈ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಕರ್ನಾಟಕ ಮತ್ತು ಕೇರಳ ಉಪ ವಿಭಾಗದ ಜಿ.ಒ.ಸಿ. ಮೇಜರ್ ಜನರಲ್ ಕೆ.ಎಸ್. ನಿಜ್ಜಾರ್ ಗಿಡ ನೆಡುವ ಮೂಲಕ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. [ಗಿಡ ಬೆಳೆಸಿ, ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ಪಡೆಯಿರಿ!]

indian army

ಅಭಿಯಾನದ ಕುರಿತು ಮಾತನಾಡಿದ ಕೆ.ಎಸ್.ನಿಜ್ಜಾರ್ ಅವರು, 'ಬೆಂಗಳೂರು ಉದ್ಯಾನ ನಗರಿ ಎಂದು ಹೆಸರು ಪಡೆದಿದೆ. ಇದಕ್ಕೆ ಭಾರತೀಯ ಸೇನೆ ತನ್ನ ಕೊಡುಗೆ ನೀಡುತ್ತಿದೆ. ನಗರದ ನಾನಾ ಪ್ರದೇಶದಲ್ಲಿರುವ ಮಿಲಿಟರಿ ಕ್ಯಾಂಪ್‌ಗಳಲ್ಲಿ 30 ಸಾವಿರ ಸಸಿಗಳನ್ನು ನೆಡಲು' ಉದ್ದೇಶಿಸಲಾಗಿದೆ ಎಂದರು. [ಸಾವಿನ ದವಡೆಯಿಂದ ಪಾರಾದ ಮರದಲ್ಲಿ ಮರುಜೀವ!]

5 ಲಕ್ಷ ಸಸಿ ನೆಡುವ ಗುರಿ : 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ' ಎಂದು ಬಿಬಿಎಂಪಿ ಮೇಯರ್ ಬಿ.ಎಸ್.ಮಂಜುನಾಥ ರೆಡ್ಡಿ ಹೇಳಿದ್ದಾರೆ. ಮೇಕ್ ಬೆಂಗಳೂರು ಗ್ರೀನ್ ಸಂಸ್ಥೆಯ ಸಹಯೋಗದಲ್ಲಿ ಪಾಲಿಕೆ ಕಚೇರಿ ಆವರಣದಲ್ಲಿ ಬುಧವಾರ ಸಸಿಗಳನ್ನು ನೆಟ್ಟ ಬಳಿಕ ಅವರು ಮಾತನಾಡಿದ ಅವರು, ಈ ವರ್ಷ ಬಿಬಿಎಂಪಿ 2 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ ಎಂದರು. [ಒಂದು ಮರ ಕಡಿದಲ್ಲಿ ಹತ್ತು ಗಿಡ ನೆಡುತ್ತೇವೆ]

bn manjunatha reddy

'ನಗರದಲ್ಲಿ ಸಸಿಗಳನ್ನು ನೆಡಲು ಬಜೆಟ್‌ನಲ್ಲಿ ಹಣ ಮೀಸಲಾಗಿಡಲಾಗಿದೆ. ಉಳಿದ 3 ಲಕ್ಷ ಸಸಿಗಳನ್ನು ಬೆಸ್ಕಾಂ, ಪೊಲೀಸ್, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ, ಶಾಲಾ, ಕಾಲೇಜುಗಳ ನೆರವಿನಿಂದ ನೆಡಲಾಗುವುದು' ಎಂದು ಮೇಯರ್ ಹೇಳಿದರು.

English summary
In one of the massive green drives launched in Garden City, Bengaluru the Indian Army is on a mission to plant over 30,000 saplings in the next two weeks.
Please Wait while comments are loading...