ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2017-18 ಪರಿಷ್ಕೃತ ಪಠ್ಯ ಪುಸ್ತಕ ಜೂನ್ 1ರಂದೇ ಶಾಲೆಗಳಲ್ಲಿ ವಿತರಣೆ: ಸೇಠ್

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 12: ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಸಂಬಂಧಿಸಿದ ಹಾಗೆ ಮಾಧ್ಯಮ ಜತೆ ಮಾತನಾಡಿದ ಸಚಿವ ತನ್ವೀರ್ ಸೇಠ್, ಈ ಬಾರಿ ಶೇ 67.87ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 8ರಷ್ಟು ಫಲಿತಾಂಶ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಸಚಿವರು ಹೇಳಿದ ಪ್ರಮುಖ ಅಂಶಗಳು ಹೀಗಿವೆ.[ಎಸ್ಎಸ್ಎಲ್ ಸಿ ಫಲಿತಾಂಶ ಆನ್ಲೈನ್ ನಲ್ಲಿ ಈಗ ಲಭ್ಯ]

2017-18 Revised text books issued from June 1st: Sait

* 2017-18 ಪರಿಷ್ಕೃತ ಪಠ್ಯ ಪುಸ್ತಕ ಜಾರಿ. ಈಗಾಗಲೇ ಮುದ್ರಣ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಮುದ್ರಣಗೊಂಡ ಪುಸ್ತಕ ಹಲವು ಜಿಲ್ಲೆಗಳಿಗೆ ತಲುಪಿದೆ
* ಜೂನ್ 1ರಂದೇ ಎಲ್ಲಾ ಶಾಲೆಗಳಲ್ಲಿ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ
* ಗ್ರೇಸ್ ಮಾರ್ಕ್ಸ್ ನೀಡುವಂತಿಲ್ಲ ಎಂಬ ಕಾರಣಕ್ಕೆ ಫಲಿತಾಂಶ ಪ್ರಮಾಣ ಕಡಿಮೆಯಾಗಿದೆ. ಜತೆಗೆ ಸೆಕ್ಯೂರ್ ಎಡುಕೇಶನ್ ಸಿಸ್ಟಮ್ ಜಾರಿಗೆ ತಂದಿರುವುದರಿಂದ ಫಲಿತಾಂಶದಲ್ಲಿ ಕುಸಿತವಾಗಿದೆ.
* ಶೂನ್ಯ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಲಾಗುವುದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶೂನ್ಯ ಫಲಿತಾಂಶ ಪಡೆದ ಕೂಡಲೇ ಶಾಲೆಗಳನ್ನು ಮುಚ್ಚಲಾಗದು.
* ಈ ಬಾರಿ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ
* ಆರು ವಿದ್ಯಾರ್ಥಿಗಳು 624 ಅಂಕ ಪಡೆದಿದ್ದಾರೆ
* ಹದಿಮೂರು ವಿದ್ಯಾರ್ಥಿಗಳು 623 ಅಂಕ ಗಳಿಸಿದ್ದಾರೆ
* ಕಾನೂನಿನ ಪ್ರಕಾರ ಪ್ರಥಮ, ದ್ವಿತೀಯ ಎಂದು ಸ್ಥಾನ ಪ್ರಕಟಿಸುವಂತಿಲ್ಲ. ಹಾಗಾಗಿ ಸಚಿವರು ಅಧಿಕೃತವಾಗಿ ಪಟ್ಟಿಯನ್ನು ಪ್ರಕಟಿಸಿಲ್ಲ.
* ಈ ವರ್ಷ ಹತ್ತು ಸಾವಿರ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
* ಈ ಬಾರಿಯ ಫಲಿತಾಂಶದಲ್ಲೂ ಬಾಲಕಿಯರು, ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ
* ಇಂಗ್ಲೀಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ
* ಅಂಧ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ. ರಾಜ್ಯದ ಸರಾಸರಿಗಿಂತಲೂ ಹೆಚ್ಚಿನ ಫಲಿತಾಂಶ ಪಡೆದ ದೃಷ್ಠಿ ವಿಕಲಚೇತನರು.
* ಸರಕಾರಿ ಶಾಲೆಗಳ ಫಲಿತಾಂಶ ಖಾಸಗಿ ಶಾಲೆಗಳಿಗಿಂತ ಹಿಂದೆ ಇದೆ
* ಖಾಸಗಿ ಶಾಲೆಗಳ ಜತೆ ಸರಕಾರಿ ಶಾಲೆಗಳ ಪೈಪೋಟಿ ಅನಿವಾರ್ಯ
* ಎಲ್ಲ ಶಾಲೆಗಳಿಗೆ ಕನಿಷ್ಠ ಸೌಲಭ್ಯ ಕೊಡಲು ಈ ವರ್ಷ ಮುಂದಾಗುತ್ತೇವೆ
* ಮತ್ತೆ ನಂಬರ್ ಒನ್ ಮತ್ತು ನಂಬರ್ ಟು ಸ್ಥಾನ ಪಡೆದುಕೊಂಡ ಕರಾವಳಿ ಜಿಲ್ಲೆಗಳು
* ಒಂದನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿದ ಬೆಂಗಳೂರು ಗ್ರಾಮಾಂತರ
* 5ನೇ ಸ್ಥಾನದಿಂದ 18ನೇ ಸ್ಥಾನಕ್ಕೆ ಕುಸಿದ ಚಿಕ್ಕಮಗಳೂರು, 7ನೇ ಸ್ಥಾನದಿಂದ 33 ಸ್ಥಾನಕ್ಕೆ ಕುಸಿದ ಬಾಗಲಕೋಟೆ
* ಶಾಲೆಗಳ ಉನ್ನತೀಕರಣಕ್ಕೆ ಕ್ರಮ. 10ನೇ ತರಗತಿಯಲ್ಲಿ 120 ವಿದ್ಯಾರ್ಥಿಗಳು ಇರುವಲ್ಲಿ ಪಿಯುಸಿ ಆರಂಭ. ಶಾಲೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿದ್ದರೆ 8, 9, 10ನೇ ತರಗತಿಗಳ ಆರಂಭ.
* ಈ ವರ್ಷ ಶಾಲೆಗಳಿಗೆ ದಾಖಲಾತಿಗಾಗಿ ಹೆಚ್ಚಿನ ಆದ್ಯತೆ. ಇದಕ್ಕಾಗಿ ಸರಕಾರದಿಂದ ಆಂದೋಲನ
* ಈಗ 14 ವರ್ಷದವರೆಗೆ ಶಿಕ್ಷಣ ಕಡ್ಡಾಯ. ಹಾಗಾಗಿ ಎಲ್ಲ ಶಾಲೆಗಳ ಕಡ್ಡಾಯ ನೋಂದಣಿಗೆ ಕ್ರಮ. ಎಲ್ಲಾ ನರ್ಸರಿ, ಪ್ರಾಥಮಿಕ ಶಾಲೆಗಳೂ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.

English summary
2017-18 Revised text books issued from June 1st, said by minister Tanveer Sait in Bengaluru, After announcement of Karnataka Secondary Education Examination Board (SSLC) result 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X