ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ಸಚಿವ ಸುರೇಶ್ ಪ್ರಭು ಬಿಚ್ಚಿಟ್ಟ 20 ನಿಮಿಷದ ಸ್ಪಂದನೆ ಎಂಬ ದಿವ್ಯಮಂತ್ರ

ಭಾರತ್ ನೀತಿ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸಮಾವೇಶದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಸಾಮಾಜಿಕ ಜಾಲತಾಣಗಳು ಆಡಳಿತ ವ್ಯವಸ್ಥೆಗೆ ಹೇಗೆ ಸಹಕಾರಿ ಎಂಬುದನ್ನು ವಿವರವಾಗಿ ತೆರೆದಿಟ್ಟರು

|
Google Oneindia Kannada News

ಬೆಂಗಳೂರು, ಮಾರ್ಚ್ 26: ರೈಲ್ವೆ ಇಲಾಖೆಗೆ ಸಂಬಂಧಿಸಿದ ದೂರು-ಅಕ್ಷೇಪಗಳಿದ್ದಲ್ಲಿ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ತಿಳಿಸಬಹುದು. ದೂರು ದಾಖಲಾದ ಇಪ್ಪತ್ತು ನಿಮಿಷದಲ್ಲಿ ಅದಕ್ಕೆ ಉತ್ತರಿಸಬೇಕು ಎಂಬುದು ನಮ್ಮ ಆದೇಶ. ಕನಿಷ್ಠ ಪಕ್ಷ ಆ ಇಪ್ಪತ್ತು ನಿಮಿಷದಲ್ಲಿ ದೂರು ದಾಖಲಾಗುತ್ತದೆ. ಇದು ಸಾಮಾಜಿಕ ಜಾಲತಾಣಗಳು ಆಡಳಿತ ವ್ಯವಸ್ಥೆಯಲ್ಲಿ ಮಾಡಿರುವ ಬದಲಾವಣೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದರು.

ಭಾರತ್ ನೀತಿ ಸಂಸ್ಥೆ ಭಾನುವಾರ ಬೆಂಗಳೂರಿನ ಲಿ ಮೆರಿಡಿಯನ್ ಹೋಟೆಲ್ ನಲ್ಲಿ ಆಯೋಜಿಸಿದ್ದ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ, ಸ್ವಚ್ಛ ಆಡಳಿತ ಮತ್ತು ಸಾಮಾಜಿಕ ಜಾಲತಾಣ ಎಂಬ ವಿಚಾರವಾಗಿ ಸಂವಾದ, ಚರ್ಚೆ ಏರ್ಪಡಿಸಲಾಗಿತ್ತು.[ರೈಲ್ವೆ ವೇಟ್ ಲಿಸ್ಟ್ ಪ್ರಯಾಣಿಕರಿಗೆ ಶುಭ ಸುದ್ದಿ!]

'20 minute response'-A new mantra of Indian Railways-Suresh Prabhu

ಜನರೊಂದಿಗೆ ಸಂವಹನ ಸಾಧ್ಯವಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರು ನನಗೆ ನೀಡಿದ ಮೊದಲ ಸಲಹೆ. ಅದಕ್ಕಾಗಿಯೇ ನಾನು ಶ್ರಮಿಸುತ್ತಿದ್ದೇನೆ. ಸಚಿವ ಅಂದರೆ ಟೆಂಡರ್, ಟ್ರಾನ್ಸ್ ಫರ್ ಇತರೆ ಹಣ ಮಾಡುವ ದಂಧೆ ನೋಡುವ ವ್ಯಕ್ತಿ ಎಂಬ ಅಭಿಪ್ರಾಯ ಜನ ಸಾಮಾನ್ಯರಲ್ಲಿದೆ. ಆದರೆ ನಾನೀಗ ಟ್ವಿಟ್ಟರ್, ಫೇಸ್ ಬುಕ್ ಅಂತ ನೋಡಿಕೊಂಡು ಕೂತಿದ್ದೀವಿ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಎಲ್ಲ ಸಾಮಾಜಿಕ ಜಾಲತಾಣಗಳ ಬಳಕೆಗೆ ಮುಂದಾಗಿದ್ದೇವೆ ಎಂದರು.

ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಶೀಘ್ರವಾಗಿ ಸ್ಪಂದಿಸಲು ಸೂಚನೆ ನೀಡಿದ್ದೇವೆ. ಟೆಂಡರ್, ಟ್ರಾನ್ಸ್ ಫರ್ ನಂಥದ್ದನ್ನು ಜನರಲ್ ಮ್ಯಾನೇಜರ್ ಗಳ ಜವಾಬ್ದಾರಿಗೆ ವಹಿಸಿದ್ದೇವೆ. ಅಲ್ಲೂ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಇನ್ನು ಮುಂದೆ ರೈಲ್ವೆ ಸಚಿವರಾದವರ ಪಾಲಿಗೆ ಹಣ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನನ್ನ ಆಪ್ತ ಕಾರ್ಯದರ್ಶಿ ಹೇಳುತ್ತಿರುತ್ತಾರೆ ಎಂದು ಸಚಿವರು ನಗೆಚಟಾಕಿ ಹಾರಿಸಿದರು.[ಅನಂತ ಕುಮಾರ್ ಹೆಸರನ್ನು ರೈಲ್ವೆ ಸಚಿವರು ಎರಡು ಸಲ ಹೇಳಿದ್ದೇಕೆ?]

ಆಡಳಿತ ನಡೆಸುವ ಸರಕಾರಗಳ ನೀತಿ ನಿರೂಪಣೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ಹೇಗೆ ಪರಿಣಾಮಕಾರಿಯಾಗಿ ಪಾಲ್ಗೊಳ್ಳಬಹುದು ಎಂಬುದನ್ನು ಸ್ವತಃ ಆಳುವ ಪಕ್ಷವೇ ತಿಳಿಸಿಕೊಡುವಂಥ ಕಾರ್ಯಕ್ರಮ ಇದಾಗಿತ್ತು. ಬೆಂಗಳೂರಿನ ವಿವಿಧ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಯಿಂದ ಇರುವವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್, ಟ್ವಿಟ್ಟರ್ ಇಂಡಿಯಾ ಪರವಾಗಿ ಮಹಿಮಾ ಕೌಲ್, ಬಿಜೆಪಿಯ ಐಟಿ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಳವೀಯ, ನೆಕ್ಟಾರ್ ಫ್ರೆಷ್ ನ ಸಿಇಒ ಛಾಯಾ ನಂಜಪ್ಪ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮದ ಬಗ್ಗೆ ಭಾಗಿಯಾದವರ ಅಭಿಪ್ರಾಯ ಹೀಗಿತ್ತು

'20 minute response'-A new mantra of Indian Railways-Suresh Prabhu

ಸಣ್ಣ ಊರುಗಳಲ್ಲೂ ಇಂಥ ಕಾರ್ಯಕ್ರಮ ನಡೆಯಲಿ
ಭಾರತ್ ನೀತಿ ಮಾಡುವ ಇಂಥ ಕಾರ್ಯಕ್ರಮಗಳು ಬಳ್ಳಾರಿ, ರಾಣೆಬೆನ್ನೂರುನಂಥ ಜಾಗದಲ್ಲೂ ನಡೆಯಬೇಕು. ಒಂದು ಅಂದಾಜಿನ ಪ್ರಕಾರ ಇಪ್ಪತ್ತು ಕೋಟಿ ಮಂದಿ ಸಾಮಾಜಿಕ ಜಾಲತಾಣಗಳನ್ನು ಬಳಸ್ತಿದ್ದಾರೆ. ಆದರೆ ಕಾಲಯಾಪನೆಗೆ ಅಂತ ಉಪಯೋಗಿಸ್ತಿದ್ದಾರೆ. ಆದರೆ ಆಡಳಿತದಲ್ಲಿ, ನೀತಿ ನಿರೂಪಣೆಯಲ್ಲಿ ಅವುಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂದು ತಿಳಿಯಬೇಕು.
-ಕಿರಣ್ ಕುಮಾರ್

'20 minute response'-A new mantra of Indian Railways-Suresh Prabhu

ಆಡಳಿತದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಆಸಕ್ತಿಕರ
ಈ ಕಾರ್ಯಕ್ರಮದಲ್ಲೂ ಒಳ್ಳೆ ವಾಗ್ಮಿಗಳು ಪಾಲ್ಗೊಂಡಿದ್ದಾರೆ. ಆಡಳಿತದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಎಂಬ ವಿಷಯವೇ ಆಸಕ್ತಿಕರವಾಗಿದೆ. ಅದರಲ್ಲೂ ಕೇಂದ್ರ ಸರಕಾರ ದೊಡ್ಡ ಸಂಖ್ಯೆಯ ಜನರನ್ನು ತಲುಪಲು ಸಾಮಾಜಿಕ ಜಾಲತಾಣಗಳನ್ನು ತುಂಬ ಪರಿಣಾಮಕಾರಿಯಾಗಿ ಬಳಸುತ್ತಿದೆ. ಆದ್ದರಿಂದ ಆ ಬಗ್ಗೆ ತಿಳಿಯಲು ಈ ಕಾರ್ಯಕ್ರಮಕ್ಕೆ ಬಂದೆ.
-ಸಂದೀಪ್ ಬಾಲಕೃಷ್ಣನ್

'20 minute response'-A new mantra of Indian Railways-Suresh Prabhu

ದೊಡ್ಡ ಹೆಜ್ಜೆ
ಸಾಮಾಜಿಕ ಜಾಲತಾಣ ಅಂದರೆ ಯಾವುದೇ ವಿಷಯದ ಬಗ್ಗೆ ಎಲ್ಲ ರೀತಿಯ ಸಾಧ್ಯತೆಗಳನ್ನು ತಿಳಿಸುವ ಮಾಧ್ಯಮ. ಇನ್ನು ಆಡಳಿತ ವ್ಯವಸ್ಥೆಗೆ ನಮ್ಮ ಸಲಹೆ ನೀಡಬಹುದು ಎಂಬುದೇ ಹೊಸ ವಿಚಾರ. ಅದರಲ್ಲೂ ಸರಕಾರದ ಪ್ರತಿನಿಧಿಯೊಬ್ಬರು ಬಂದು ಹೇಳುತ್ತಿದ್ದಾರೆ ಅಂದರೆ ತುಂಬ ದೊಡ್ಡ ಹೆಜ್ಜೆ ಇದು. ಆಡಳಿತ ವ್ಯವಸ್ಥೆ ಹಾಗೂ ಸಾಮಾಜಿಕ ಜಾಲತಾಣಗಳು ಈಗ ತುಂಬ ಚೆನ್ನಾಗಿ ಬೆಸೆದುಕೊಂಡಿವೆ. ಜತೆಗೆ ತಳಮಟ್ಟದವರೆಗೆ ಆಡಳಿತದ ನೀರಿ ತಲುಪಿಸಲು ಸಹಾಯಕವಾಗಿದೆ.
-ತನ್ಮಯಿ

'20 minute response'-A new mantra of Indian Railways-Suresh Prabhu

ನಮ್ಮ ಧ್ವನಿ ಕೇಳಿಸಿಕೊಳ್ಳುತ್ತದೆ ಸರಕಾರ
ಇದೊಂದು ಉತ್ತಮ ವೇದಿಕೆ. ನಮ್ಮ ಧ್ವನಿಯನ್ನು ಸರಕಾರ ಕೇಳಿಸಿಕೊಳ್ಳುತ್ತದೆ ಎಂಬುದೇ ಖುಷಿಯ ವಿಚಾರ. ಇಂಥ ಸನ್ನಿವೇಶದಲ್ಲಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇಂಥ ಕಾರ್ಯಕ್ರಮ ದೇಶದಾದ್ಯಂತ ನಡೆಯಬೇಕು.
-ಶಾಲಿನಿ ಖಂಡಲ್ ವಾಲ್

'20 minute response'-A new mantra of Indian Railways-Suresh Prabhu

ಇನ್ನಷ್ಟು ಮಂದಿ ಸೇರಲಿ
ಸರಕಾರದ ನೀತಿ-ನಿಯಮಾವಳಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಹೇಗೆ ತಿಳಿಯಬಹುದು, ಸ್ಪಂದಿಸಬಹುದು ಎಂಬ ಕುತೂಹಲವಿತ್ತು. ಅದಕ್ಕೆ ಉತ್ತರ ಸಿಕ್ಕಿದೆ. ನನ್ನಂತೆಯೇ ಪ್ರಶ್ನೆ ಇಟ್ಟುಕೊಂಡು ಬಂದವರು ಹಲವರು ಇಲ್ಲಿದ್ದಾರೆ. ಭಾರತ್ ನೀತಿಯವರ ಇಂಥ ಕಾರ್ಯಕ್ರಮಕ್ಕೆ ಇನ್ನಷ್ಟು ಮಂದಿ ಸೇರಬೇಕು.
-ರಾಮ್ ಗೊಪಾಲ್

English summary
Any complaint, queries we receive aim to answer within 20 minutes. atleast complaint has to register within 20 minutes, said by Railway minister Suresh Prabhu on Sunday at Bharat Niti conclave 2017, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X