ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

50 ದಿನ, 1.5 ಕೋಟಿ ಜನ: ಇದು 'ನಮ್ಮ ಮೆಟ್ರೋ' ಮೈಲಿಗಲ್ಲು!

|
Google Oneindia Kannada News

ಬೆಂಗಳೂರು, ಆಗಸ್ಟ್ 9: "ಯಾರ ಬಳಿಯಾದ್ರೂ ಬೆಂಗಳೂರಲ್ಲಿ ಕೆಲಸ ಮಾಡ್ತಿದ್ದೀನಿ ಅಂದ್ರೆ ಮೊದಲು ಕೇಳೋ ಪ್ರಶ್ನೆ, 'ಮೆಟ್ರೋ ಕನ್ವಿನಿಯನ್ಸಿ ಇದ್ಯಾ?!' ಎಂಬುದೇ.

ಅಷ್ಟರಮಟ್ಟಿಗೆ ನಮ್ಮ ಮೆಟ್ರೋ ಬೆಂಗಳೂರಿನ ಲಕ್ಷಾಂತರ ಜನರ ಬದುಕಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಅದರಲ್ಲೂ ಜೂನ್ 18 ರಂದು ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗಿನ ಗ್ರೀನ್ ಲೈನ್ ಮೆಟ್ರೋ ಸೌಲಭ್ಯ ಆರಂಭವಾದಾಗಿನಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ.

ಹಸಿರು ಲೇನ್ ನಂತರ ಸಂಪಿಗೆ ಸ್ಟೇಷನ್ ಟ್ರಾಫಿಕ್ ಶೇ 116ರಷ್ಟು ಏರಿಕೆಹಸಿರು ಲೇನ್ ನಂತರ ಸಂಪಿಗೆ ಸ್ಟೇಷನ್ ಟ್ರಾಫಿಕ್ ಶೇ 116ರಷ್ಟು ಏರಿಕೆ

ಈ ಮಾರ್ಗ ಕಾರ್ಯಾರಂಭವಾಗುವ ಮೊದಲು ಮೆಟ್ರೋ ಉಪಯೋಗಿಸುತ್ತಿದ್ದವರು, 1.5 ಲಕ್ಷ ಜನ. ಆದರೆ ಇದೀಗ 3 ಲಕ್ಷಕ್ಕೂ ಹೆಚ್ಚು ಜನ ಮೆಟ್ರೋ ಬಳಸುತ್ತಿದ್ದಾರೆ. ನಮ್ಮ ಮೆಟ್ರೋ ಮೊದಲ ಹಂತ ಸಂಪೂರ್ಣ ಮುಕ್ತಾಯವಾಗಿ ಇದೀಗ 50 ದಿನ ಪೂರೈಸಿದ್ದು, ಐವತ್ತೇ ದಿನಗಳಲ್ಲಿ ಮೆಟ್ರೋ ಬಳಸಿದವರು 1.5 ಕೋಟಿಗೂ ಅಧಿಕ ಜನ ಎಂಬುದು ಮೆಟ್ರೋ ಹೆಗ್ಗಳಿಕೆಗೆ ಸಾಕ್ಷಿ.

ಸದ್ಯಕ್ಕೆ ಪ್ರತಿನಿತ್ಯ ಮೆಟ್ರೋ ಬಳಸುತ್ತಿರುವವರ ಸಂಖ್ಯೆ ಸುಮಾರು ಮೂರೂವರೆ ಲಕ್ಷ! ಒಟ್ಟಿನಲ್ಲಿ ನಮ್ಮ ಮೆಟ್ರೋ ಇದೀಗ ಬೆಂಗಳೂರಿನ ಬಹುಮುಖ್ಯ ಸಾರ್ವಜನಿಕ ಸಾರಿಗೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಕೆಂಪೇಗೌಡ ಇಂಟರ್ ಚೇಂಜ್

ಕೆಂಪೇಗೌಡ ಇಂಟರ್ ಚೇಂಜ್

ಯಲಚೇನಹಳ್ಳಿಯಿಂದ ನಾಗಸಂದ್ರ(ಗ್ರೀನ್ ಲೈನ್) ಮತ್ತು ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ(ಪರ್ಪಲ್ ಲೈನ್)ವರೆಗಿನ 42 ಕಿ.ಮೀ.ಮಾರ್ಗ ಸಂಧಿಸುವುದು ಮೆಜೆಸ್ಟಿಕ್ ನ ಕೆಂಪೇಗೌಡ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣದಲ್ಲಿ. ಪ್ರಯಾಣಿಕರು ಇಲ್ಲಿ ನೇರಳೆ ಮಾರ್ಗದಿಂದ ಹಸಿರು ಮಾರ್ಗ ಅಥವಾ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಬದಲಾಯಿಸಿಕೊಳ್ಳಬಹುದು. ಈ ಕೆಂಪೇಗೌಡ ಇಂಟರ್ ಚೇಂಜ್ ಭಾರತದ ಅತಿ ದೊಡ್ಡ ಮೆಟ್ರೋ ನಿಲ್ದಾಣ ಅನ್ನಿಸಿರುವುದು ಇನ್ನೊಂದು ಹೆಮ್ಮೆ.

ಮಂತ್ರಿ ಸ್ಕ್ವೇರ್ ಗೆ ನೇರ ಸಂಪರ್ಕ

ಮಂತ್ರಿ ಸ್ಕ್ವೇರ್ ಗೆ ನೇರ ಸಂಪರ್ಕ

ನಮ್ಮ ಮೆಟ್ರೋ ಗ್ರೀನ್ ಲೈನ್ ನಲ್ಲಿ ಸಾಗುವವರು, ಮಂತ್ರಿ ಸ್ಕ್ವೇರ್ ನಿಲ್ದಾಣದಲ್ಲೇನಾದರೂ ಇಳಿದಿದ್ದರೆ ಸೀದಾ ಮಂತ್ರಿ ಮಾಲ್ ಒಳಗೇ ಪ್ರವೇಶ ಪಡೆಯಬಹುದು. ಇಂಥದೊಂದು ಮೆಟ್ರೋ ನಿಲ್ದಾಣವಿರುವುದು ಭಾರತದಲ್ಲೇ ಮೊದಲು ಎಂಬುದು ನಮ್ಮ ಮೆಟ್ರೋದ ಮತ್ತೊಂದು ಮೈಲಿಗಲ್ಲು.

ಮೆಜೆಸ್ಟಿಕ್ ನಲ್ಲೇ ಟ್ರಾಫಿಕ್ ಜಾಸ್ತಿ

ಮೆಜೆಸ್ಟಿಕ್ ನಲ್ಲೇ ಟ್ರಾಫಿಕ್ ಜಾಸ್ತಿ

ಆರಂಭವಾದ ಮೂರು ತಿಂಗಳಿನಲ್ಲಿ ಕೆಂಪೇಗೌಡ ಮೆಟ್ರೋ ನಿಲ್ದಾಣವನ್ನು ಇದುವರೆಗೂ ಬಳಸಿದವರು ಸುಮಾರು 18 ಲಕ್ಷ ಜನ! ನಮ್ಮ ಮೆಟ್ರೋದ ಒಟ್ಟು 40 ನಿಲ್ದಾಣಗಳಲ್ಲಿ ಸಂಚಾರ ದಟ್ಟಣೆ ಜಾಸ್ತಿ ಇರುವುದು ನಾಡಪ್ರಭು ಕೆಂಪೇಗೌಡ ಇಂಟರ್ ಚೇಂಜ್ ನಲ್ಲಿಯೇ.

ಪೀಣ್ಯದಲ್ಲಿ ಕಡಿಮೆ ಜನ

ಪೀಣ್ಯದಲ್ಲಿ ಕಡಿಮೆ ಜನ

ಹಸಿರು ಮಾರ್ಗದ ಪೀಣ್ಯ ಮೆಟ್ರೋ ಸ್ಟೇಶನ್ ಅನ್ನು ಬಳಸುವ ಜನರ ಸಂಖ್ಯೆ ತೀರಾ ಕಡಿಮೆ. ಮೂರು ತಿಂಗಳಿನಲ್ಲಿ ಈ ನಿಲ್ದಾಣವನ್ನು ಬಳಸಿದವರು ಅಬ್ಬಬ್ಬಾ ಅಂದ್ರೆ 50,000 ಜನ ಅಷ್ಟೇ! ಪೀಣ್ಯಕ್ಕೆ ತೆರಳುವ ಬಹುಪಾಲು ಜನ ಪೀಣ್ಯ ಇಂಡಸ್ಟ್ರೀಯಲ್ ಏರಿಯಾಕ್ಕೇ ಹೋಗಬೇಕಾದ್ದರಿಂದ ಮೆಟ್ರೋದಿಂದ ಇಳಿದ ಮೇಲೆ ಅವರಿಗೆ ಇಂಡಸ್ಟ್ರೀಯಲ್ ಏರಿಯಾ ತಲುಪುವುದಕ್ಕೆ ಬೇರೆ ಸಾರಿಗೆ ಸೌಲಭ್ಯವಿಲ್ಲ. ಆದ್ದರಿಂದ ಇಲ್ಲಿ ಮೆಟ್ರೋ ಬಳಕೆ ಕಡಿಮೆ.

English summary
More than 1.5 crore people travelled by Namma Metro Bengaluru, in 50 days of completion of Namma Metro fisrt stage. From Bhaiyappanahalli to Mysuru road and from Nagasandra to Yelachenahalli metro lines fully opend to public on June 18th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X